ಐ ಐ ಟಿ ಇಂದೋರ್ ವಿದ್ಯಾರ್ಥಿಗೆ ಗೂಗಲ್ ನಿಂದ ೧.೭ ಕೋಟಿ ವೇತನ ಐ ಐ ಟಿ ಇಂದೋರ್ ನ ೨೧ ವರ್ಷದ ಬಿ ಟೆಕ್ ವಿದ್ಯಾರ್ಥಿ, ಗೂಗಲ್ ನಲ್ಲಿ ಉದ್ಯೋಗ ಪಡೆದಿದ್ದು, ... ಇಂದೋರ್: ಐ ಐ ಟಿ ಇಂದೋರ್ ನ ೨೧ ವರ್ಷದ ಬಿ ಟೆಕ್ ವಿದ್ಯಾರ್ಥಿ, ಗೂಗಲ್ ನಲ್ಲಿ ಉದ್ಯೋಗ ಪಡೆದಿದ್ದು, ೧.೭ ಕೋಟಿ ವಾರ್ಷಿಕ ವೇತನ ಪಡೆಯಲಿದ್ದಾರೆ. ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಮೇರಿಕಾದ ಅಂತರ್ಜಾಲ ದೈತ್ಯ ಗೂಗಲ್ ನೀಡುವ ಅತಿ ಹೆಚ್ಚು ವೇತನಗಳಲ್ಲೊಂದು ಇದು. ಗಣಕತಂತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಗೌರವ್ ಅಗರವಾಲ್ ಗೂಗಲ್ ನೀಡಿರುವ ಈ ಆಕರ್ಷಕ ಕೊಡುಗೆಯನ್ನು ಒಪ್ಪೊಕೊಂಡಿದ್ದಾನೆ ಎಂದು ಐ ಐ ಟಿ ಇಂದೋರ್ ನ ವಕ್ತಾರ ಇಂದು ತಿಳಿಸಿದ್ದಾರೆ. ಚತ್ತೀಸ್ ಘರ್ ನ ಭಿಲೈ ನ ಮಧ್ಯಮ ವರ್ಗದ ಕುಟುಂಬದ ಅಗರವಾಲ್ ಈ ಕೊಡುಗೆಯಿಂದ ಸಂತಸಗೊಂಡಿದ್ದು ಮೇ ೨೦೧೫ ರಲ್ಲಿ ತನ್ನ ಶೈಕ್ಷಣಿಕ ವರ್ಷ ಮುಗಿಯಲಿದ್ದು, ನಂತರ ಕ್ಯಾಲಿಫೋರ್ನಿಯಾದಲ್ಲಿ ಗೂಗಲ್ ಸೇರಿಕೊಳ್ಳಲಿದ್ದೇನೆ ಎಂದಿದ್ದಾರೆ.