ಇಂಧನ ಬೆಲೆಯೇರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಲು ಅಸಲಿ 'ಹಾರ್ಸ್ ಪವರ್' ಮೊರೆ ಹೋದ ಫಾರೆಸ್ಟ್ ವಾಚರ್ ಮುಂಬರುವ ದಿನಗಳಲ್ಲಿ ಜನಸಾಮಾನ್ಯರು ಕೂಡಾ ತಂತಮ್ಮ ವಾಹನಗಳನ್ನು ಮನೆಯಲ್ಲೇ ಬಿಟ್ಟು, ಕುದುರೆ, ಟಾಂಗಾ ಗಾಡಿಗಳ ಬಳಕೆ ಮಾಡಿದರೆ ಅಚ್ಚರಿಯಿಲ್ಲ. ಆಗ ನಗರಗಳ ಟ್ರಾಫಿಕ್ ಸಿಗಲ್ಲುಗಳಲ್ಲಿ ವಾಹನಗಳ ಪೀಂಪೀಂ ಪಾಂಪಾಂ ಸದ್ದಿನ ಜೊತೆಗೆ ಟುರ್, ಬ್ಯಾ, ಗುಸ್ಸ್ ಇತರೆ ಸದ್ದುಗಳನ್ನೂ ಕೇಳಬಹುದು. ಚಿತ್ರದುರ್ಗ: ತೈಲ ಬೆಲೆ ನೂರರ ಗಡಿ ದಾಟಿರುವ ಬೆನ್ನಲ್ಲೇ ಜನರು ಹಣ ಉಳಿಸಲು ನಾನಾ ಥರದ ಮಾರ್ಗಗಳಿಗೆ ಮೊರೆ ಹೋಗುತ್ತಿದ್ದಾರೆ. ಅದಕ್ಕೊಂದು ಉತ್ತಮ ನಿದರ್ಶನ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಭಾಗದಲ್ಲಿ ಫಾರೆಸ್ಟ್ ವಾಚರ್ ಆಗಿ ಸೇವೆ ಸಲ್ಲಿಸುತ್ತಿರುವ ಗುಳ್ಳಪ್ಪ.ಇದನ್ನೂ ಓದಿ: ದೇವರ ನಾಡಲ್ಲಿ ಗಜರಾಜನಿಗೆ ಪುನರ್ವಸತಿ ಕೇಂದ್ರ: ಆನೆಗಳಿಗೆ ಮಾರ್ನಿಂಗ್ ವಾಕ್ ಮತ್ತು ಉತ್ಕೃಷ್ಟ ಆಹಾರಗುಳ್ಳಪ್ಪ ಅವರು ತಮ್ಮ ಸುಪರ್ದಿಯಲ್ಲಿರುವ ಅರಣ್ಯ ಪ್ರದೇಶವನ್ನು ಪಹರೆ ಕಾಯಲು ಕುದುರೆಯನ್ನು ಬಳಸುತ್ತಿದ್ದಾರೆ. ಕುದುರೆಯನ್ನು ನಿರ್ವಹಣೆ ಮಾಡುವುದು ವಾಹನವನ್ನು ನಿರ್ವಹಿಸುವುದಕ್ಕಿಂತಲೂ ಸುಲಭ ಎನ್ನುವುದು ಅವರ ಅನುಭವದ ಮಾತು. ಇದನ್ನೂ ಓದಿ: ಹೆತ್ತವರೇ ತಿರಸ್ಕರಿಸಿದರೂ ಧೃತಿಗೆಡದ ಪಂಜಾಬ್ ಸಯಾಮಿಗಳು: ಇವರ ಶ್ರಮದ ಬದುಕು ಎಲ್ಲರಿಗೂ ಸ್ಫೂರ್ತಿ!ಅವರು ಕರ್ತವ್ಯದಲ್ಲಿದ್ದಾಗ ಕುದುರೆ ಹುಲ್ಲು ಮೇಯುತ್ತಿರುತ್ತದೆ. ಕರ್ತವ್ಯ ಮುಗಿಸಿ ಹೊರಡಲನುವಾದಾಗ ಕುದುರೆಯೂ ಸಿದ್ಧವಾಗುತ್ತದೆ ಎನ್ನುತ್ತಾರೆ ಅವರು. ಗುಳ್ಳಪ್ಪ ಅವರ ಈ ಪರಿಸರಸ್ನೇಹಿ ಮಾರ್ಗ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ: ಯಾವ ಜೀವವೂ ಪುಟ್ಟದಲ್ಲ: ಲಿಫ್ಟ್ ಸಂಧಿಯಲ್ಲಿ ಸಿಲುಕಿಕೊಂಡ ಹಕ್ಕಿ ಮರಿ; ಅಗ್ನಿಶಾಮಕ ದಳ ಕಾರ್ಯಾಚರಣೆಗುಳ್ಳಪ್ಪ ಅವರು ಒಂದು ವರ್ಷದ ಹಿಂದೆ ಕುರಿಗಾಯಿಯೊಬ್ಬನಿಂದ ಈ ಕುದುರೆಯನ್ನು 3,000 ರೂ.ಗಳಿಗೆ ಕೊಂಡುಕೊಂಡಿದ್ದ. ದೈನಂದಿನ ಖರ್ಚುವೆಚ್ಚಗಳನ್ನು ಸರಿದೂಗಿಸುವ ಉದ್ದೇಶದಿಂದ ಕುದುರೆಯನ್ನು ಅವರು ಕೊಂಡಿದ್ದರು. ಇದನ್ನೂ ಓದಿ: ದಿನನಿತ್ಯ ಬೀದಿ ಪ್ರಾಣಿಗಳಿಗೆ ಅಡುಗೆ; ಥರ ಥರದ ಮೆನು: ದಶಕಗಳಿಂದ ಆಂಧ್ರ ದಂಪತಿಯ ಮಹತ್ಕಾರ್ಯದ್ವಿಚಕ್ರ ವಾಹನಕ್ಕೆ ಇಂಧನ ತುಂಬಿಸಲು ಗುಳ್ಳಪ್ಪ ಅವರಿಗೆ ಹಣದ ಕೊರತೆ ಎದುರಾಗಿತ್ತು. ಕುದುರೆಯನ್ನು ಬಳಸಬಾರದು ಎನ್ನುವ ನಿಯಮವೇನು ಇಲ್ಲ ಎಂದು ಹಿರಿಯ ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಆದರೆ ಈ ಹಿಂದೆ ಬಂಡೀಪುರದ ರೇಂಜ್ ಆಫೀಸರ್ ಪುಟ್ಟರಾಜು ಅವರು ಕುದುರೆಯನ್ನು ಸಾಕಿರುವುದಕ್ಕೆ ಇಲಾಖೆಯಲ್ಲಿಯೇ ಆಕ್ಷೇಪ ವ್ಯಕ್ತವಾಗಿತ್ತು ಎನ್ನುವುದು ಗಮನಾರ್ಹ. ಇದನ್ನೂ ಓದಿ: ತಡ ರಾತ್ರಿ ಪೊಲೀಸರಿಂದಲೇ ಮಹಿಳೆಯರಿಗೆ ಮನೆ ತನಕ ಡ್ರಾಪ್: ಆಂಧ್ರ ಪೊಲೀಸರ ನೂತನ ಯೋಜನೆಗೆ ಶ್ಲಾಘನೆಪುಟ್ಟರಾಜು ಅವರು ಈ ಬಗ್ಗೆ ಅನುಮತಿ ಪಡೆದಿಲ್ಲದಿರುವುದೇ ವಿವಾದಕ್ಕೆ ಕಾರಣ ಎನ್ನುವ ಮಾತುಗಳೂ ಇವೆ. ಇರಲಿ, ಸೆಂಚುರಿ ಬಾರಿಸಿರುವ ತೈಲ ದರದ ಹೊಡೆತದಿಂದ ತಪ್ಪಿಸಿಕೊಳ್ಳಲು ಗುಳ್ಳಪ್ಪ ಅವರಿಗೆ ಕುದುರೆ ಸಹಾಯ ಮಾಡುತ್ತಿರುವುದು ಅಚ್ಚರಿಯೇ ಸರಿ. ಮುಂಬರುವ ದಿನಗಳಲ್ಲಿ ಜನಸಾಮಾನ್ಯರು ಕೂಡಾ ತಂತಮ್ಮ ವಾಹನಗಳನ್ನು ಮನೆಯಲ್ಲೇ ಬಿಟ್ಟು, ಕುದುರೆ, ಟಾಂಗಾ ಗಾಡಿಗಳ ಬಳಕೆ ಮಾಡಿದರೆ ಅಚ್ಚರಿಯಿಲ್ಲ. ಇದನ್ನೂ ಓದಿ: 50ರ ದಶಕದಲ್ಲಿ ಪುಸ್ತಕ ಕೊಂಡು ಓದಲಾಗದ ಬಾಲಕ, ಇಂದು 2 ಲಕ್ಷ ಪುಸ್ತಕಗಳಿರುವ ಗ್ರಂಥಾಲಯ ಸ್ಥಾಪಕ