ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಘಟಿಕೋತ್ಸವ: 70 ವರ್ಷದ ಹಿರಿಯ ನಾಗರಿಕ ನಾರಾಯಣ ಭಟ್ ಗೆ ಚಿನ್ನದ ಪದಕ! ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಡಿಪ್ಲೊಮಾ ಕೋರ್ಸ್ ಪದವೀಧರರ ಘಟಿಕೋತ್ಸವದಲ್ಲಿ ಹಿರಿಯ ನಾಗರಿಕರೊಬ್ಬರಿಗೆ ಚಿನ್ನದ ಪದಕ ಪ್ರದಾನ ಮಾಡಲಾಗಿದೆ. ಬೆಂಗಳೂರು: ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಡಿಪ್ಲೊಮಾ ಕೋರ್ಸ್ ಪದವೀಧರರ ಘಟಿಕೋತ್ಸವದಲ್ಲಿ ಹಿರಿಯ ನಾಗರಿಕರೊಬ್ಬರಿಗೆ ಚಿನ್ನದ ಪದಕ ಪ್ರದಾನ ಮಾಡಲಾಗಿದೆ.ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾದಲ್ಲಿ ಶೇಕಡಾ 94.88 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಎಪ್ಪತ್ತು ವರ್ಷದ ನಾರಾಯಣ ಭಟ್ ಅವರಿಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು ಡಿಪ್ಲೊಮಾ ಹಾಗೂ ಚಿನ್ನದ ಪದಕ ಪ್ರದಾನ ಮಾಡಿದರು.ಶಿರಸಿಯ ಎಂಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಭಟ್, ದೇಶದಲ್ಲಿ ನಡೆದ ಮೊದಲ ಡಿಪ್ಲೊಮಾ ಘಟಿಕೋತ್ಸವದ ಅಂಗವಾಗಿ ನಿನ್ನೆ ಪದಕ ಪಡೆದ 106 ಪದವೀಧರರಲ್ಲಿ ಒಬ್ಬರು. ರಾಜ್ಯಾದ್ಯಂತ 36 ಡಿಪ್ಲೊಮಾ ಕೋರ್ಸ್ ಗಳಲ್ಲಿ ಪದವೀಧರರು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ. ಉನ್ನತ ಶಿಕ್ಷಣ ಕೋರ್ಸ್‌ಗಳನ್ನು ತೆಗೆದುಕೊಳ್ಳುವ ಇತರ ವಿದ್ಯಾರ್ಥಿಗಳಂತೆ ಡಿಪ್ಲೊಮಾ ವಿದ್ಯಾರ್ಥಿಗಳನ್ನು ಪರಿಗಣಿಸಿ ಘಟಿಕೋತ್ಸವವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವ ಡಾ ಅಶ್ವಥ್ ನಾರಾಯಣ ಹೇಳಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಳಿಗಾಗಿ ಘಟಿಕೋತ್ಸವಕ್ಕೆ ಅವರ ಹೆಸರನ್ನು ಇಡಲಾಗಿದೆ.ಕರ್ನಾಟಕದಲ್ಲಿ ಶಿಕ್ಷಣ, ಕೈಗಾರಿಕೋದ್ಯಮದ ಬೆಳವಣಿಗೆಗೆ ಅತ್ಯಮೂಲ್ಯ ಕೊಡುಗೆ ನೀಡಿದ ಮೈಸೂರು ರಾಜಮನೆತನದ ರಾಜರ್ಷಿ #ನಾಲ್ವಡಿಕೃಷ್ಣರಾಜಒಡೆಯರ್‌ ಅವರ ಗೌರವಾರ್ಥ ಈ ವರ್ಷದಿಂದ ಆಚರಿಸಲಾಗುತ್ತಿರುವ 'ನಾಲ್ವಡಿ ಕೃಷ್ಣರಾಜ ಒಡೆಯರ್‌ ಘಟಿಕೋತ್ಸವ- ಡಿಪ್ಲೋಮಾ-2022' ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 1/4 ://./0FzaMyvx5D ../RiFI62O7SR