60 ಸೆಕೆಂಡುಗಳಲ್ಲಿ 426 ಪಂಚು ಕೊಟ್ಟು ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ ಭಾರತದ ಪಂಚ್ ವೀರ ರಫಾನ್ ಗೆ ತಾನು ಈ ಪರಿಯಾಗಿ ಪಂಚ್ ನೀಡುವುದಾಗಿ ಗೊತ್ತಿರಲಿಲ್ಲವಂತೆ. ಅವರ ಈ ಕೌಶಲವನ್ನು ಮೊದಲು ಗುರುತಿಸಿದ್ದು ಅವರ ಸ್ನೇಹಿತರು. ಕೊಚ್ಚಿ: ಬಾಕ್ಸಿಂಗ್ ಕ್ರೀಡೆಯಲ್ಲಿ ಪಂಚ್ ಕೊಡುವುದನ್ನು ನೀವು ನೋಡಿರಬಹುದು. ಇನ್ನು ಕೆಲ ಸನ್ನಿವೇಶಗಳಲ್ಲಿ ಹಾದಿ ಬೀದಿಗಳಲ್ಲಿ ಗುದ್ದಾಡಿಕೊಳ್ಳುವುದನ್ನೂ ನೋಡಿರಬಹುದು. ಅವರು ಯಾರೂ ಕೇರಳದ ಕೋಝಿಕ್ಕೋಡ್ ನಗರದ ರಫಾನ್ ಉಮ್ಮರ್ ಗೆ ಸರಿಸಮಾನರಾಗರು. ಇದನ್ನೂ ಓದಿ: ಡಯೆಟ್, ಸೆಕ್ಸ್, ಕೊಕೇನ್: ಪ್ರಖ್ಯಾತ ಇನ್ನರ್ ವೇರ್ ಸಂಸ್ಥೆಯ ಸೂಪರ್ ಮಾಡೆಲ್ ಬಿಚ್ಚಿಟ್ಟ ರಹಸ್ಯ26ರ ಹರೆಯದ ರಫಾನ್ 60 ಸೆಕೆಂಡುಗಳಲ್ಲಿ 426 ಪಂಚುಗಳನ್ನು ನೀಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಈ ದಾಖಲೆ ಈ ಹಿಂದೆ ಸ್ಲೊವಾಕಿಯಾ ದೇಶದ ಕಿಕ್ ಬಾಕ್ಸರ್ ಮತ್ತು ಕರಾಟೆ ಪಟು ಪಾವೆಲ್ ಎನ್ನುವವರ ಹೆಸರಲ್ಲಿತ್ತು. ಇದೀಗ ಆ ದಾಖಲೆಯನ್ನು ಭಾರತದ ರಫಾನ್ ಮುರಿದಿದ್ದಾರೆ.ಇದನ್ನೂ ಓದಿ: ಜಿಂಕೆಗಳಿಗಾಗಿ 45 ಎಕರೆ ಭೂಮಿ ಮೀಸಲಿಟ್ಟ ರೈತ: ಕಳೆದ 20 ವರ್ಷಗಳಲ್ಲಿ ಜಿಂಕೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳರಫಾನ್ ಗೆ ತಾನು ಈ ಪರಿಯಾಗಿ ಪಂಚ್ ನೀಡುವುದಾಗಿ ಗೊತ್ತಿರಲಿಲ್ಲವಂತೆ. ಅವರ ಈ ಕೌಶಲವನ್ನು ಮೊದಲು ಗುರುತಿಸಿದ್ದು ಅವರ ಸ್ನೇಹಿತರು. ನಂತರ ಪರೀಕ್ಷೆ ಮಾಡುವ ಸಲುವಾಗಿ 15 ಸೆಕೆಂಡುಗಳ ವಿಡಿಯೋವನ್ನು ಸ್ನೇಹಿತರು ಮಾಡಿದ್ದರು. ಅದರಲ್ಲಿ 15 ಸೆಕೆಂಡುಗಳಲ್ಲಿ 100 ಪಂಚುಗಳನ್ನು ರಫಾನ್ ನೀಡಿದ್ದರು. ಈ ಸಾಧನೆಗಾಗಿ ಯಾವುದೇ ವಿಶೇಷ ತರಬೇತಿಯನ್ನು ರಫಾನ್ ಪಡೆದಿಲ್ಲ ಎನ್ನುವುದು ವಿಶೇಷ.ರಷ್ಯಾದಲ್ಲಿ ಮೌಂಟ್ ಎಲ್ಬ್ರಸ್ ಶಿಖರವೇರಿದ ಬೆಂಗಳೂರಿನ ಕೋವಿಡ್ ಯೋಧ!ರಿಕ್ಷಾದೊಳಗೆ ಉದ್ಯಾನ ನಿರ್ಮಿಸಿದ ಪರಿಸರಪ್ರೇಮಿ ಆಟೋ ಚಾಲಕ: ತಿರುಪತಿಯಲೊಂದು ವಿಶಿಷ್ಟ ಆಟೋ ರಿಕ್ಷಾಮಕ್ಕಳನ್ನು ಶಾಲೆಗೆ ಆಕರ್ಷಿಸಲು ಸಾಂಪ್ರದಾಯಿಕ ಆಟಗಳ ಮೊರೆ: ಮಧುರೈ ಶಾಲೆಯಲ್ಲಿ ವಿನೂತನ ಪ್ರಯೋಗಸ್ಕೇಟಿಂಗ್ ನಲ್ಲಿ ಮೈಸೂರಿನ ಗ್ರಾಮೀಣ ಭಾಗದ ಮಕ್ಕಳ ಸಾಧನೆಪರಿಸರ ನಾಶ ವಿರುದ್ಧ ಸೈಕ್ಲಿಸ್ಟ್ ಸಹೋದರರ ಸವಾಲ್: 48 ಗಂಟೆಗಳಲ್ಲಿ 5,000 ಸಸಿ ನೆಟ್ಟು ದಾಖಲೆಕೆಮಿಸ್ಟ್ರಿ ಪ್ರಯೋಗಾಲಯದಲ್ಲಿ ಪರಿಸರಸ್ನೇಹಿ ಗಣಪ ಸೃಷ್ಟಿ: ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ