ಸರ್ಕಾರ ಸರ್ಕಸ್ ಗೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ತಂದು ಈ ಕಲೆಯನ್ನು ಉಳಿಸಿ ಬೆಳೆಸಬೇಕು: ರಫೀಕ್ ಶೇಖ್ ಗ್ರೇಟ್ ರಾಜಕಮಲ್ ಸರ್ಕಸ್ ಪ್ರಸ್ತುತ ಸುಮಾರು 90 ಉದ್ಯೋಗಿಗಳನ್ನು ಹೊಂದಿದೆ. “ನಾನು ಪ್ರಸ್ತುತ ಮಾಲೀಕರಾಗಿದ್ದರೂ, ನನ್ನ ತಂದೆ ಅಥವಾ ನಾನು ನಮ್ಮ ಕಲಾವಿದರು ಮತ್ತು ಸಿಬ್ಬಂದಿಯನ್ನು ಕೇವಲ ಕೆಲಸಗಾರರಂತೆ ಪರಿಗಣಿಸಿಲ್ಲ. ವಿಜಯಪುರ: ಸರ್ಕಸ್ - ಮೂರು ಅಕ್ಷರಗಳ ಪದವು ಶತಮಾನಗಳಿಂದ ಭಾರತೀಯರನ್ನು ಆಕರ್ಷಿಸಿದೆ. ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಶಾರ್ಟ್ಸ್ ಮತ್ತು ರೀಲ್ಸ್ ಗಳ ಹಾವಳಿ ನಡುವೆ ದೂರದರ್ಶನ ಮಾಧ್ಯಮಗಳು ಕಾಲಿಡುವ ಮುಂಚೆ ಜನರನ್ನು ರಂಜಿಸುತ್ತಿದ್ದುದು ಈ ಸರ್ಕಸ್ ಗಳು.ಕೈಯಲ್ಲಿ ಪಾಪ್‌ಕಾರ್ನ್ ಮತ್ತು ಪಾಪ್ಸಿಕಲ್‌ ಬಾಟಲ್ ಹಿಡಿದುಕೊಂಡು, ಸರ್ಕಸ್ ಕಲಾವಿದರು ತಮ್ಮ ಚಮತ್ಕಾರಗಳನ್ನು ಹಗ್ಗದಿಂದ ಜಿಗಿಯುವ ಮೂಲಕ, ರಿಂಗ್‌ಮಾಸ್ಟರ್‌ನ ಟ್ಯೂನ್‌ಗಳಿಗೆ ಪ್ರಾಣಿಗಳು ನೃತ್ಯ ಮಾಡುವ 60 ನಿಮಿಷಗಳ ಪ್ರದರ್ಶನವನ್ನು ಎವೆಯಿಕ್ಕದೆ ನೋಡಿದಾಗ ನಮ್ಮನ್ನು ಬೇರೆಯ ಲೋಕಕ್ಕೆ ಕೊಂಡೊಯ್ಯುತ್ತದೆ. ಸಿಂಹಗಳ ಘರ್ಜನೆಯಿಂದ ಹಿಡಿದು ಮಂಗಗಳ ಕಿರುಚಾಟದವರೆಗೆ, ಸರ್ಕಸ್‌ಗಳು ಕಾಡು ಪ್ರಾಣಿಗಳು ನೋಡುಗರನ್ನು ರಂಜಿಸುತ್ತಿದ್ದವು.ಆದರೆ ಈಗ, ಈ ಚಿತ್ರಗಳು ನಮ್ಮ ನೆನಪುಗಳ ಭಾಗವಾಗಿದೆ. ಇತರ ರೀತಿಯ ಮನರಂಜನೆಯ ಸ್ಪರ್ಧೆ, ಕಾಡು ಪ್ರಾಣಿಗಳ ಬಳಕೆಯನ್ನು ನಿಷೇಧಿಸುವ ಕಾನೂನುಗಳೊಂದಿಗೆ ಸೇರಿಕೊಂಡು, ಸರ್ಕಸ್ ಉದ್ಯಮ ಬಹುತೇಕ ಕಣ್ಮರೆಯಾಗುತ್ತಿದೆ. ಸೋಲು, ದುಃಖದ ವಿಷಯದ ನಡುವಿನ ಬೆಳ್ಳಿರೇಖೆ ಎಂಬಂತೆ ಸರ್ಕಸ್‌ಗಳು ಪುನರುಜ್ಜೀವನವನ್ನು ಕಾಣುತ್ತಿವೆ, ಕೆಲವು ಉತ್ಸಾಹಿಗಳು ಇನ್ನೂ ಪ್ರದರ್ಶನವನ್ನು ನಡೆಸುತ್ತಿದ್ದಾರೆ.ಅಂತಹ ಒಬ್ಬರು ಗ್ರೇಟ್ ರಾಜಕಮಲ್ ಸರ್ಕಸ್ ನ್ನು ನಡೆಸುತ್ತಿರುವ 46 ವರ್ಷದ ರಫೀಕ್ ಶೇಖ್.ಮೊದಲು ತನ್ನ ಅಜ್ಜ ಮತ್ತು ನಂತರ ಅವರ ತಂದೆ ನಿರ್ವಹಿಸುತ್ತಿದ್ದ ಸರ್ಕಸ್ ನ್ನು ನೋಡುತ್ತಾ ಬೆಳೆದ ಶೇಖ್ ಉದ್ಯಮದಲ್ಲಿನ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿದ್ದಾರೆ. "ನೀವು ಸರ್ಕಸ್ ಲೋಕವನ್ನು ದೈತ್ಯ ಕುಟುಂಬ ಅಥವಾ ನಮ್ಮ ಸಣ್ಣ ಪ್ರಪಂಚ ಎಂದು ಕರೆಯಬಹುದು. ನನ್ನ ಪ್ರಪಂಚ ಇದು ಎಂದು ನಗುತ್ತಾರೆ ಶೇಖ್.ಶೇಖ್ ಅವರು ಸರ್ಕಸ್‌ಗೆ ಎಷ್ಟು ಹೊಂದಿಕೊಂಡಿದ್ದಾರೆ ಎಂದರೆ ತಮ್ಮ ಸರ್ಕಸ್ ಕಂಪನಿಯನ್ನು ನಿರ್ವಹಿಸಲು ರೈಲ್ವೆಯಲ್ಲಿನ ಕೆಲಸವನ್ನು ತೊರೆದರು. ರೈಲ್ವೆಗೆ ಸೇರಿದ ನಂತರ, ನಾನು ನನ್ನ ಕುಟುಂಬವಾದ ಸರ್ಕಸ್ ನ್ನು ಎಷ್ಟು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೆ. ಸರ್ಕಸ್‌ನೊಂದಿಗೆ ನನ್ನ ಪ್ರಯತ್ನವನ್ನು ಮುಂದುವರಿಸಲು ರೈಲ್ವೆ ಇಲಾಖೆಯಲ್ಲಿ ಕೆಲಸ ತೊರೆದೆ ಎಂದರು.ಗ್ರೇಟ್ ರಾಜಕಮಲ್ ಸರ್ಕಸ್ ಪ್ರಸ್ತುತ ಸುಮಾರು 90 ಉದ್ಯೋಗಿಗಳನ್ನು ಹೊಂದಿದೆ. “ನಾನು ಪ್ರಸ್ತುತ ಮಾಲೀಕರಾಗಿದ್ದರೂ, ನನ್ನ ತಂದೆ ಅಥವಾ ನಾನು ನಮ್ಮ ಕಲಾವಿದರು ಮತ್ತು ಸಿಬ್ಬಂದಿಯನ್ನು ಕೇವಲ ಕೆಲಸಗಾರರಂತೆ ಪರಿಗಣಿಸಿಲ್ಲ. ಅವರು ನನ್ನ ಕುಟುಂಬದವರಂತೆ. ನಾವು ಒಂದೇ ಸ್ಥಳದಲ್ಲಿ ತಿಂಗಳುಗಟ್ಟಲೆ ಒಟ್ಟಿಗೆ ಕಳೆಯುತ್ತೇವೆ. ಒಟ್ಟಿಗೆ ತಿನ್ನುತ್ತೇವೆ ಪರಸ್ಪರ ಕಾಳಜಿ ವಹಿಸುತ್ತೇವೆ ಎನ್ನುತ್ತಾರೆ.'ಒಂದು ಕುಟುಂಬ, ಒಂದು ಪ್ರಪಂಚ'ಸರ್ಕಸ್ ನಲ್ಲಿ ಕೆಲಸ ಮಾಡುವ ಸುರೇಶ್ ಅವರಿಗೆ ಈಗ 56 ವರ್ಷ. ಕೇರಳದವರಾದ ಅವರು ಸುಮಾರು ಮೂರು ದಶಕಗಳಿಂದ ಸರ್ಕಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. "ಸರ್ಕಸ್ ನನಗೆ ಎಲ್ಲವನ್ನೂ ನೀಡಿದೆ. ನನ್ನ ಸೇವೆಯನ್ನು ಸಲ್ಲಿಸುವವರೆಗೂ ನಾನು ಅದರೊಂದಿಗೆ ಇರುತ್ತೇನೆ, ”ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.ಮಣಿಪುರದ 28 ವರ್ಷದ ಅಕ್ರೋಬ್ಯಾಟ್ ನವೋಬಿಸನ್ ತೌನೋಜಮ್ ಎರಡು ವರ್ಷಗಳಿಂದ ಸರ್ಕಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಕೇವಲ ಸರ್ಕಸ್ ಅಲ್ಲ, ಸಂಸ್ಕೃತಿಯನ್ನು ಸಂರಕ್ಷಿಸುವ ಸಂಪ್ರದಾಯವಾಗಿದೆ. ತಲೆಮಾರುಗಳಿಂದ ಹಲವಾರು ಜನರಿಗೆ ಜೀವನೋಪಾಯವನ್ನು ಒದಗಿಸುತ್ತದೆ ಎನ್ನುತ್ತಾರೆ,ಇತ್ತೀಚೆಗಷ್ಟೇ ವಿವಾಹವಾದ ತೌನೊಜಮ್, ಸರ್ಕಸ್ ತನ್ನ ಖರ್ಚುಗಳನ್ನು ನೋಡಿಕೊಳ್ಳಲು ಮತ್ತು ಮಣಿಪುರದಲ್ಲಿರುವ ತನ್ನ ಕುಟುಂಬಕ್ಕೆ ಹಣವನ್ನು ಹಿಂದಿರುಗಿಸಲು ಸಾಕಷ್ಟು ಸಂಬಳವನ್ನು ನೀಡುತ್ತದೆ ಎಂದು ಹೇಳುತ್ತಾರೆ. ಅವರು ಮಣಿಪುರದ ಐದು ಹುಡುಗಿಯರು ಸೇರಿದಂತೆ ಎಂಟು ಸದಸ್ಯರ ತಂಡದ ಭಾಗವಾಗಿದ್ದಾರೆ, ಸರ್ಕಸ್‌ನಲ್ಲಿ ಪ್ರದರ್ಶನ ನೀಡುತ್ತಾರೆ.ಸರ್ಕಸ್ ತನ್ನದೇ ಆದ ಕ್ಷೌರಿಕರು, ಯಂತ್ರಶಾಸ್ತ್ರಜ್ಞರು, ಅಡುಗೆಯವರು ಮತ್ತು ಟೈಲರ್‌ಗಳನ್ನು ಹೊಂದಿರುವ ಜಗತ್ತು ಎಂದು ಶೇಖ್ ಹೇಳುತ್ತಾರೆ. ನಾವು ಎಲ್ಲಿಗೆ ಹೋದರೂ ಇವರು ನಮ್ಮೊಂದಿಗೆ ಪ್ರಯಾಣಿಸುತ್ತಾರೆ ಎನ್ನುವ ಶೇಖ್ ಮಹಾರಾಷ್ಟ್ರದ ಸೋಲಾಪುರದವರು, ಆದರೆ ಅವರ ಉದ್ಯೋಗಿಗಳು ದೇಶದಾದ್ಯಂತ - ಕೇರಳದಿಂದ ಮಣಿಪುರದಿಂದ ಗುಜರಾತ್‌ಗೆ ಬರುತ್ತಾರೆ. ಕೆಲವು ಕಲಾವಿದರು ಮತ್ತು ಸಿಬ್ಬಂದಿ ಸುರೇಶ್ ಅವರಂತೆ ಮೂರು ದಶಕಗಳಿಂದ ನಮ್ಮೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ನನ್ನ ತಂದೆಯ ಕಾಲದಲ್ಲಿ ನಮ್ಮೊಂದಿಗೆ ಸೇರಿಕೊಂಡಿದ್ದಾರೆ ಎಂದರು.ಪರದೆಯ ಹಿಂದೆ ಇಲ್ಲ ಮೋಡಿ: ಹೊರಜಗತ್ತಿಗೆ ಹೊಳೆಯುವ ಸಮಚಿತ್ತ ಮತ್ತು ಸಾಹಸಮಯ ಕಲಾವಿದರಿಗೆ ತೆರೆಮರೆಯ ಬದುಕು ಸುಲಭವಲ್ಲ. ಮೂರು ದಶಕಗಳ ಹಿಂದೆ ಭಾರತವು ಸುಮಾರು 90 ಸರ್ಕಸ್‌ ಕಂಪೆನಿಗಳಿಗೆ ನೆಲೆಯಾಗಿತ್ತು. ಬಹುತೇಕ ಎಲ್ಲಾ ಲಾಭದಾಯಕವಾಗಿತ್ತು. ಆದರೆ ಸರ್ಕಾರದ ನೀತಿಗಳು, ಪ್ರಾಣಿಗಳನ್ನು ಸರ್ಕಸ್ ಗಳಲ್ಲಿ ಬಳಕೆ ನಿಷೇಧಿಸುವುದು ಮತ್ತು ಕಾರ್ಮಿಕರ ಮೇಲೆ ಕಟ್ಟುನಿಟ್ಟಾದ ಆದೇಶಗಳು ಉದ್ಯಮಕ್ಕೆ ತೀವ್ರವಾದ ಹೊಡೆತ ಕೊಟ್ಟಿತು ಎನ್ನುತ್ತಾರೆ ಶೇಖ್.ನಿರುತ್ಸಾಹಕರ ಸಂಗತಿಯೆಂದರೆ ಸಾಕು ಮತ್ತು ಸಾಕುಪ್ರಾಣಿಗಳನ್ನು ಬಳಸುವುದನ್ನು ಸರ್ಕಾರ ನಿಷೇಧಿಸಿದೆ. ಆದರೆ ಅದೇ ಪ್ರಾಣಿಗಳನ್ನು ಇತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಳಸಲು ಅನುಮತಿಸಲಾಗಿದೆ. ಕುದುರೆಗಳನ್ನು ಮದುವೆಗಳಲ್ಲಿ ಬಳಸಲಾಗುತ್ತದೆ, ಸಾಂಪ್ರದಾಯಿಕ ಓಟಗಳಲ್ಲಿ ಗೂಳಿಗಳು, ನಾಯಿಗಳು ಮನುಷ್ಯನ ನೆಚ್ಚಿನ ಸಾಕುಪ್ರಾಣಿಗಳು ಮತ್ತು ಒಂಟೆಗಳನ್ನು ವಿವಿಧ ವೃತ್ತಿಪರ ಮತ್ತು ದೇಶೀಯ ಕೆಲಸಗಳಿಗೆ ಬಳಸಲಾಗುತ್ತದೆ. ಆದರೆ ಅದೇ ಪ್ರಾಣಿಗಳನ್ನು ಸರ್ಕಸ್‌ನಲ್ಲಿ ಬಳಸಲಾಗುವುದಿಲ್ಲ. ಕನಿಷ್ಠ ಸಾಕು ಪ್ರಾಣಿಗಳನ್ನು ಬಳಸಲು ಸರ್ಕಾರ ನಮಗೆ ಅವಕಾಶ ನೀಡಬೇಕು ಎಂದು ಶೇಖ್ ಹೇಳುತ್ತಾರೆ.ಬಾಲ ಕಲಾವಿದರಾಗಿ ಚಲನಚಿತ್ರಗಳು ಮತ್ತು ಲೈವ್ ಶೋಗಳು, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವಾಗ ಸರ್ಕಸ್‌ನಲ್ಲಿ ಮಕ್ಕಳನ್ನು ಏಕೆ ಪ್ರದರ್ಶಿಸಲು ಅನುಮತಿಸಬಾರದು. ಚಲನಚಿತ್ರಗಳಲ್ಲಿ ನಟಿಸುವ ಮಕ್ಕಳನ್ನು ಕಲಾವಿದರು ಎಂದು ಪರಿಗಣಿಸಿದಾಗ, ಸರ್ಕಸ್‌ನಲ್ಲಿ ಪ್ರದರ್ಶನ ನೀಡುವ ಮಕ್ಕಳಿಗೆ ಅದೇ ಮಾನದಂಡ ಅನುಸರಿಸಬಾರದು.- ರಫೀಕ್ ಶೇಖ್ರಷ್ಯಾದಂತಹ ದೇಶಗಳು ಮಕ್ಕಳಿಗೆ ಚಮತ್ಕಾರಿಕವನ್ನು ಕಲಿಸಲು ಅಕಾಡೆಮಿಗಳನ್ನು ತೆರೆದಿವೆ. ಅಂತಹ ಅನೇಕ ಪ್ರದರ್ಶಕರನ್ನು ನಂತರ ಒಲಿಂಪಿಕ್ಸ್‌ನಂತಹ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಜಿಮ್ನಾಸ್ಟಿಕ್ಸ್‌ನಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗುತ್ತದೆ. ಚಿಕ್ಕ ಮಕ್ಕಳನ್ನು ಚಮತ್ಕಾರಿಕಕ್ಕೆ ಆಯ್ಕೆಮಾಡಲು ಕಾರಣವೆಂದರೆ ಅವರ ಮೂಳೆಗಳು ಮತ್ತು ಸ್ನಾಯುಗಳು ಹೊಂದಿಕೊಳ್ಳಲು ಕಿರಿಯ ವಯಸ್ಸಿನಲ್ಲಿ ಅವರಿಗೆ ತರಬೇತಿ ನೀಡುವುದು ಸುಲಭ. ಆ ವಯಸ್ಸಿನಲ್ಲಿ ತರಬೇತಿ ಪಡೆದ ಅವರು ಪರಿಪೂರ್ಣ ಕಲಾವಿದರು, ಜಿಮ್ನಾಸ್ಟ್‌ಗಳು ಮತ್ತು ಅಕ್ರೋಬ್ಯಾಟ್‌ಗಳಾಗುತ್ತಾರೆ. ರಷ್ಯಾ ಅಂತಹ ಮಕ್ಕಳನ್ನು ಕಲಾವಿದರು ಎಂದು ಪರಿಗಣಿಸುತ್ತದೆ ಮತ್ತು ಬಾಲಕಾರ್ಮಿಕರಲ್ಲ. ಆದರೆ ಭಾರತದಲ್ಲಿ ಗ್ಯಾರೇಜ್ ಅಥವಾ ಸರ್ಕಸ್‌ನಲ್ಲಿ ಕೆಲಸ ಮಾಡುವ ಹುಡುಗನನ್ನು ಮೂಲಭೂತ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳದೆ ಬಾಲಕಾರ್ಮಿಕ ಎಂದು ತೋರಿಸುತ್ತಾರೆ ಎನ್ನುತ್ತಾರೆ ಶೇಖ್.ಕಲಾವಿದರು ಮತ್ತು ಕಾರ್ಮಿಕರು ಎಂಬ ವ್ಯತ್ಯಾಸವನ್ನು ಗುರುತಿಸಲು ಸರ್ಕಾರ ಬಾಲಕಾರ್ಮಿಕ ಕಾನೂನುಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರಬೇಕು ಎಂದು ಅವರು ಹೇಳಿದರು.ಮಕ್ಕಳಿಗೆ ಪ್ರದರ್ಶನ ನೀಡಲು ಅವಕಾಶ ನೀಡುವಾಗ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಅನುಸರಿಸಲು ಸರ್ಕಸ್ ಮಾಲೀಕರು ಸಿದ್ಧರಾಗಿದ್ದಾರೆ ಎಂದು ಅವರು ಹೇಳುತ್ತಾರೆ. ಮಕ್ಕಳು ಯಾವುದೇ ರೀತಿಯ ದೌರ್ಜನ್ಯದ ಬಗ್ಗೆ ದೂರು ನೀಡಿದರೆ, ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಕ್ತರಾಗಿದ್ದಾರೆ. ಆದರೆ ಸರ್ಕಾರವು ಮೊದಲು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು ಮಕ್ಕಳು ಪ್ರದರ್ಶನ ನೀಡಲು ಅವಕಾಶ ಮಾಡಿಕೊಡಬೇಕು ಎನ್ನುತ್ತಾರೆ,ಇಂತಹ ಬದಲಾವಣೆಗಳು ಮಾಡಿಕೊಳ್ಳದಿದ್ದರೆ ಸರ್ಕಸ್‌ಗಳಿಗೆ ಉತ್ತಮ ಕಲಾವಿದರು ಸಿಗುವುದಿಲ್ಲ. ಸರ್ಕಸ್ ಉದ್ಯಮವು ಇಂದು ಶೋಚನೀಯ ಸ್ಥಿತಿಯಲ್ಲಿದೆ. ಸರ್ಕಸ್ ಸಂಸ್ಕೃತಿಯು ನಶಿಸುವ ಮೊದಲು ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದರು.