ಹಿಟ್ಲರ್ ನ ಕಲಾಕೃತಿ ಹರಾಜಿಗೆ ೧೦೦ ವರ್ಷ ಹಳೆಯ ಮ್ಯುನಿಕ್ ಸಿಟಿ ಹಾಲ್ ಕಲಾಕೃತಿ ... ಬರ್ಲಿನ್: ೧೦೦ ವರ್ಷ ಹಳೆಯ ಮ್ಯುನಿಕ್ ಸಿಟಿ ಹಾಲ್ ಕಲಾಕೃತಿ ಈ ವಾರಂತ್ಯ ನಡೆಯುವ ಹರಾಜಿನಲ್ಲಿ ೫೦೦೦೦ ಯೋರೋಗಳನ್ನು ಗಳಿಸುವ ಸಾಧ್ಯತೆ ಇದೆ. ಇದು ಅದರ ಕಲಾತ್ಮಕತೆಗೆ ಅಲ್ಲವಾದೂ, ಕಲಾಕೃತಿಯ ಮೂಲೆಯಲ್ಲಿರುವ ಸಹಿಗೆ: ಎ. ಹಿಟ್ಲರ್. ನ್ಯೂರಂಬರ್ಗ್ ನ ವೈಲ್ಡರ್ ಆಕ್ಷನ್ ಹೌಸ್ ಹೇಳುವ ಪ್ರಕಾರ ಈ ಕಲಾಕೃತಿ ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಅಡಾಲ್ಫ್ ಹಿಟ್ಲರ್ ರಚಿಸಿರುವ ಸುಮಾರು ೨೦೦೦ ಕಲಾಕೃತಿಗಳಲ್ಲಿ ಒಂದು. ಹಿಟ್ಲರ್ ನಾಜಿ ಸರ್ವಾಧಿಕಾರಿಯಾಗಿ ಮೇಲೇರುವುದಕ್ಕೂ ಮೊದಲು ಕಲಾಕಾರನಾಗಿ ಬದುಕಲು ಪ್ರಯತ್ನಿಸುತ್ತಿದ್ದಾಗ ಸುಮಾರು ೧೯೧೪ ರಲ್ಲಿ ರಚಿಸಿದ್ದಿರಬಹುದು ಎಂದು ನಂಬಲಾಗಿದೆ. ೧೯೧೬ ರಲ್ಲಿ ಇದನ್ನು ಖರೀದಿ ಮಾಡಿದ್ದ ಒಬ್ಬ ವ್ಯಕ್ತಿಯ ಮೊಮ್ಮಕ್ಕಳು ಇದನ್ನು ಮಾರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆಕ್ಷನ್ ಹೌಸ್ ನ ನಿರ್ದೇಶಕಿ ಕ್ಯಾಥರೀನ್ ವೈಲ್ಡರ್ ಪ್ರಕಾರ ವಿಶ್ವದಾದ್ಯಂತ ಇದು ಗಮನ ಸೆಳೆದಿದೆ ಹಾಗೂ ಹೂಡಿಕೆಗಾಗಿ ಜನ ಎದುರು ನೋಡುತ್ತಿದ್ದಾರೆ ಎಂದಿದ್ದಾರೆ. ಈ ಕಲಾಕೃತಿಯ ಪ್ರಾರಂಭ ಬೆಲೆ ೪೫೦೦ ಯೂರೋ.