ಅಡ್ರಸ್‌ ಪ್ರೋಫ್‌ ಇಲ್ಲದೆಯೇ, ಈಗ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಕೊಳ್ಳಬಹುದು: ಅದು ಹೇಗೆ? ಇಲ್ಲಿದೆ ಮಾಹಿತಿ... ನೀವು ಮನೆ ಬದಲಾಯಿಸಿದ್ದೀರಾ? ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಸಬೇಕೇ? ಅಡ್ರಸ್‌ ಬದಲಾವಣೆಗೆ ನಿಮ್ಮ ಬಳಿ ಯಾವುದೇ ಪುರಾವೆಗಳಿಲ್ಲವೆ? ಬೆಂಗಳೂರು: ನೀವು ಮನೆ ಬದಲಾಯಿಸಿದ್ದೀರಾ? ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಸಬೇಕೇ? ಅಡ್ರಸ್‌ ಬದಲಾವಣೆಗೆ ನಿಮ್ಮ ಬಳಿ ಯಾವುದೇ ಪುರಾವೆಗಳಿಲ್ಲವೆ?ಆದರೂ, ಹೊಸ ಅಪ್‌ ಡೇಟ್‌ ಗಾಗಿ ಆ ವಿಳಾಸದ ಪ್ರೋಪ್‌ ಒದಗಿಸಬೇಕಾದ ಸಂಕಷ್ಟಗಳು ನಿವಾರಣೆಯಾಗಿವೆ. ಈಗ ನಿಮ್ಮ ಕುಟುಂಬದ ಸದಸ್ಯರ ಆಧಾರ್ ಕಾರ್ಡ್, ಸಂಪರ್ಕ ಸಂಖ್ಯೆಯೊಂದಿಗೆ ಆಧಾರ್ ವಿಳಾಸವನ್ನು ಬದಲಾಯಿಸಲು ನಿಮಗೆ ಯು ಐ ಡಿ ಎಐ ಅವಕಾಶ ಕಲ್ಪಿಸಿದೆ.ವಾಸ್ತವವಾಗಿ, ಆಧಾರ್ ಕಾರ್ಡ್‌ನಲ್ಲಿ ವಿಳಾಸದ ವಿವರ ಬದಲಾಯಿಸಲು, ಕಡ್ಡಾಯವಾಗಿ ಯು ಐ ಡಿ ಎ ಐ (ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ) ವೆಬ್‌ಸೈಟ್‌ನಲ್ಲಿ ಪಾಸ್‌ಪೋರ್ಟ್, ಬ್ಯಾಂಕ್ ಪಾಸ್‌ಬುಕ್, ಪಡಿತರ ಚೀಟಿ, ಮತದಾರರ , ಚಾಲನಾ ಪರವಾನಗಿಯಂತಹ ನಿರ್ದಿಷ್ಟಪಡಿಸಿದ ದಾಖಲೆಗಳ ಪ್ರತಿಯನ್ನು ಅಪ್‌ಲೋಡ್ ಮಾಡುವುದು ಅಗತ್ಯವಾಗಿತ್ತು. ಆದರೆ ಈಗ ಇವುಗಳ ಅಗತ್ಯವಿಲ್ಲದೆ ಕುಟುಂಬದ ಸದಸ್ಯರು, ಸ್ನೇಹಿತರು, ಸಂಬಂಧಿಕರ ಆಧಾರ್‌ ವಿಳಾಸವನ್ನು ಬದಲಾಯಿಸಬಹುದು.ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ಈ ರೀತಿ ಬದಲಾಯಿಸಿಕೊಳ್ಳಿ: