ಕೈದಿಗಳೇ ಮಾಡಿದ ಗಣೇಶ ಮೂರ್ತಿಗಳು ಭರ್ಜರಿ ಮಾರಾಟ: ಐದೇ ನಿಮಿಷಗಳಲ್ಲಿ ಎಲ್ಲಾ ಸೇಲ್ ಮುಂಬರುವ ದಿನಗಳಲ್ಲಿ ಸಾವಯವ ಕೃಷಿ ಉತ್ಪನ್ನ, ಬೇಕರಿ, ಕ್ಯಾಂಟೀನ್ ಮತ್ತು ಗೋಶಾಲೆ ನಿರ್ಮಾಣ ಯೋಜನೆಯನ್ನು ಕಾರಾಗೃಹ ಅಧಿಕಾರಿಗಳು ಹೊಂದಿದ್ದಾರೆ. ಪುದುಚೆರಿ: ಗಣೇಶ ಚತುರ್ಥಿಯ ದಿನ ಸಕಲರಿಗೂ ಒಳ್ಳೆಯದನ್ನು ಮಾಡುವುದೆಂಬ ನಂಬಿಕೆ ಪುದುಚೆರಿ ಕೈದಿಗಳ ವಿಚಾರದಲ್ಲಿ ನಿಜವಾಗಿದೆ. ಅವರು ತಯಾರಿಸಿದ್ದ 51 ಮೂರ್ತಿಗಳು ಕೇವಲ ಐದೇ ನಿಮಿಷಗಳಲ್ಲಿ ಸೇಲಾಗಿರುವುದು ಅದಕ್ಕೆ ಸಾಕ್ಷಿ. ಕೈದಿಗಳ ಸುಧಾರಣಾ ಕಾರ್ಯಕ್ರಮದ ಅಂಗವಾಗಿ ಕಾರಾಗೃಹ ಅಧಿಕಾರಿಗಳು ಕೈದಿಗಳ ಕೈಲಿ ವಿಗ್ರಹಗಳನ್ನು ಮಾಡಿಸಿದ್ದರು.ಇದನ್ನೂ ಓದಿ: 500 ರೂ. ಕೊಟ್ಟು ಈ ಜೈಲಿಗೆ ಹೋಗಿ... ಒಂದು ದಿನ ವಾಸ್ತವ್ಯಕ್ಕೆ ಇಲ್ಲಿದೆ ಅವಕಾಶ!ಪುದುಚೆರಿ ಜೈಲಿನಲ್ಲಿ ವಿಗ್ರಹ ರಚನೆ ಸೇರಿದಂತೆ ಬಟ್ಟೆ ಹೊಲಿಯುವುದು, ಯೋಗ ಮತ್ತಿತರ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಅರಬಿಂದೊ ಸೊಸೈಟಿ ಸಹಯೋಗದಲ್ಲಿ ಜೈಲು ಸುಧಾರಣಾ ಕಾರ್ಯಕ್ರಮ ನಡೆಸಲಾಗುತ್ತಿದೆ.ಗಣೇಶ ವಿಗ್ರಹ ಮಾರಾಟದಿಂದ ಸಂತುಷ್ಟರಾಗಿರುವ ಅಧಿಕಾರಿ ವರ್ಗ ವಿಗ್ರಹಗಳಿಗೆ ಇನ್ನೂ ಬೇಡಿಕೆ ಬರುತ್ತಲೇ ಇದೆ ಎಂದು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಾವಯವ ಕೃಷಿ ಉತ್ಪನ್ನ, ಬೇಕರಿ, ಕ್ಯಾಂಟೀನ್ ಮತ್ತು ಗೋಶಾಲೆ ನಿರ್ಮಾಣ ಯೋಜನೆಯನ್ನು ಕಾರಾಗೃಹ ಅಧಿಕಾರಿಗಳು ಹೊಂದಿದ್ದಾರೆ. ಇದನ್ನೂ ಓದಿ: ತಿಹಾರ್ ಜೈಲಿನಲ್ಲಿ ಡಾಕ್ಟರ್ ಆಗಿ ಕೆಲಸ ಮಾಡಲು ಕೋರ್ಟ್ ಅನುಮತಿ ಕೇಳಿದ ಅಲ್ ಖೈದಾ ಉಗ್ರ!ಪೆರೋಲ್ ಅವಧಿ ಮುಗಿದರೂ ಬೆಳಗಾವಿಯ ಹಿಂಡಲಗಾ ಜೈಲಿಗೆ ಮರಳದ ಇಬ್ಬರು ಕೈದಿಗಳು!ಸಾಂತ್ವನ ಕೇಂದ್ರದಿಂದ ಐವರು ವಿದೇಶಿ ಮಹಿಳಾ ಕೈದಿಗಳು ಪರಾರಿಒಳಗಿನವರಿಂದಲ್ಲ, ಹೊರಗಿನಿಂದ ಬರುತ್ತಿರುವ ಕೈದಿಗಳಿಂದ ಕಾರಾಗೃಹದಲ್ಲಿ ಕೊರೋನಾ ಹೆಚ್ಚುತ್ತಿದೆ!ಜೈಲನ್ನೂ ಬಿಡದ ಲವ್ ಸೆಕ್ಸ್ ಔರ್ ಧೋಖಾ; ತಿತಿಲಾಘಡ್ ಜೈಲಲ್ಲಿ ಮಹಿಳಾ ಕೈದಿ ಆರೋಪ!70 ವರ್ಷಕ್ಕಿಂತ ಮೇಲ್ಪಟ್ಟ ಕೈದಿಗಳ ಬಿಡುಗಡೆಗೆ ಸುಪ್ರೀಂ ಮೆಟ್ಟಿಲೇರಿದ ಹೋರಾಟಗಾರ್ತಿ ಮೇಧಾ ಪಾಟ್ಕರ್