ಕನ್ನಡ ಕಂಡಕ್ಟರ್ರು... ಇಲ್ಲೊಬ್ಬ ಕಂಡಕ್ಟರ್‌ಗೆ ಕನ್ನಡವೇ ಸತ್ಯ, ಕನ್ನಡವೇ ನಿತ್ಯಾ. ಇದು ವರುಷದ... ಇಲ್ಲೊಬ್ಬ ಕಂಡಕ್ಟರ್‌ಗೆ ಕನ್ನಡವೇ ಸತ್ಯ, ಕನ್ನಡವೇ ನಿತ್ಯಾ. ಇದು ನವೆಂಬರ್ ಮಾಸದಂದು ಮಾತ್ರ ಉಕ್ಕುವ ಪ್ರೇಮವಲ್ಲ. ವರುಷದ ಹನ್ನೆರಡು ತಿಂಗಳೂ ಹೀಗೆಯೇ. ಹೊನ್ನಾಳಿ ತಾಲೂಕಿನ ಕುಂದೂರಿನ ಕಂಡಕ್ಟರ್ ನಟರಾಜ್, ಕನ್ನಡ ನಟರಾಜ್ ಅಂತಲೇ ಪ್ರಸಿದ್ದಿ. ಹೀಗೆ ಸತತ ಹನ್ನೊಂದು ವರ್ಷಗಳಿಂದ ಕೆಎಸ್ಸಾರ್ಟಿಸಿಯ ಗುಂಡ್ಲುಪೇಟೆ ಘಟಕದಲ್ಲಿ ನಿರ್ವಾಹಕರಾಗಿರುವ ನಟರಾಜ್, ಗುಂಡ್ಲುಪೇಟೆ-ಮೈಸೂರು-ಶಿವಮೊಗ್ಗ-ದಾವಣಗೆರೆ ಮಾರ್ಗದ ಬಸ್ಸಿನಲ್ಲಿ ಕಂಡಕ್ಟರ್ ಕೆಲಸದ ಜೊತೆಗೆ ಪ್ರತಿಯೊಬ್ಬರಲ್ಲೂ ಕನ್ನಡ ಪ್ರತಿಯನ್ನು ತುಂಬಿಸುತ್ತಿದ್ದಾರೆ. ಪ್ರೇರಣೆ ಏನು? ಗುಂಡ್ಲುಪೇಟೆ ಕೇರಳ ಅಂಚಿಗೂ ಮತ್ತು ಇನ್ನೊಂದು ಕಡೆ ತಮಿಳುನಾಡು ಅಂಚಿಗೆ ಹೊಂದಿಕೊಂಡಿರುವ ಕನ್ನಡ ಸೀಮೆ, ಮೊದಲು ಈ ರಾಜ್ಯಗಳಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ನಿರ್ವಾಹಕರಾಗಿದ್ದರು ನಟರಾಜ್. ಆಗ ಅಲ್ಲಿನವರ ಭಾಷಾಭಿಮಾನ ಕಂಡು ಇವರು ದಂಗಾಗಿ ಹೋದರು. ಕೂಡಲೇ ಇದರ ಕಿಂಚಿತ್ ಭಾಗದಷ್ಟಾದರೂ ನಾನು ಕನ್ನಡಕ್ಕೇನಾದರೂ ಕೊಡುಗೆ ನೀಡಬೇಕು ಅಂತ ತೀವ್ರವಾಗಿ ಅನ್ನಿಸಿತ್ತಂತೆ. ಕ್ರಮೇಣ ಇವರು ಬಸ್ಸಿನಲ್ಲಿ ಪ್ರಯಾಣಿಕರೊಂದಿಗೆ ಕನ್ನಡದಲ್ಲೇ ಮಾತನಾಡಲಾರಂಭಿಸಿದರು. ತೀರಾ ಅನಿವಾರ್ಯವಾದರಷ್ಟೇ ಬೇರೆ ಭಾಷೆ ಬಳಿಸಿದರು. ಚಿತ್ರ, ಲೇಖನ: ಟಿ.ಶಿವಕುಮಾರ್