ಹಲವು ಭಾಷೆಗಳನ್ನು ಕೇಳುತ್ತಾ ಬೆಳೆಯುವ ಮಕ್ಕಳಲ್ಲಿ ಉತ್ತಮ ಸಂವಹನಶೀಲತೆ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕೇಳುವ ಮಕ್ಕಳು ಉತ್ತಮ ಸಂವಹನಕಾರರಾಗುತ್ತಾರೆ ಎನ್ನುತ್ತದೆ ನೂತನ ಅಧ್ಯಯನ. ನ್ಯೂಯಾರ್ಕ್: ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕೇಳುವ ಮಕ್ಕಳು ಉತ್ತಮ ಸಂವಹನಕಾರರಾಗುತ್ತಾರೆ ಎನ್ನುತ್ತದೆ ನೂತನ ಅಧ್ಯಯನವೊಂದು. ಮಕ್ಕಳು ಹೆಚ್ಚು ಭಾಷೆಗಳನ್ನು ತಾವೇ ಬಲ್ಲವರಾಗಿರಬೇಕಿಲ್ಲ. ಹಲವು ಭಾಷೆಗಳನ್ನು ಕೇಳುತ್ತಾ ಬೆಳೆದರೆ ಸಾಕು ಒಳ್ಳೆಯ ಸಾಮಾಜಿಕ ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ ಎನ್ನುತ್ತದೆ ಅಧ್ಯಯನ. "ಬಹುಭಾಷಾ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಒಬ್ಬರು ಮತ್ತೊಬ್ಬರ ಜೊತೆ ಏನು ಮಾತನಾಡುತ್ತಾರೆ ಹಾಗು ಬಳಸುವ ಭಾಷೆಯ ಮೇಲೆ ಸಾಮಾಜಿಕ ಸ್ವರೂಪಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಾರೆ" ಎಂದು ಶಿಕಾಗೋ ವಿಶ್ವವಿದ್ಯಾಲಯದ ಮನಃಶಾಸ್ತ್ರದ ಸಹ ಉಪನ್ಯಾಸಕ ಕ್ಯಾಥರೀನ್ ಕಿಂಜ್ಲರ್ ತಿಳಿಸಿದ್ದಾರೆ. ಉತ್ತಮ ಸಂವಹನಕ್ಕೆ ಇತರರ ದೃಷ್ಟಿಕೋನವನ್ನು ತಿಳಿದುಕೊಳ್ಳುವುದು ಅತಿ ಮುಖ್ಯ ಹಾಗೂ ತಮ್ಮ ಮಾತೃಭಾಷೆಯನ್ನಷ್ಟೇ ಕೇಳುವ ಮಕ್ಕಳಿಗಿಂತಲೂ ಬಹುಭಾಷೆಗಳ ಮಧ್ಯ ಬೆಳೆಯುವ ಮಕ್ಕಳಿಗೆ ಬೇರೆಯವರ ಮಾತನ್ನು ಗ್ರಹಿಸುವ ಶಕ್ತಿ ಹೆಚ್ಚಿರುತ್ತದೆ ಎಂದಿದೆ ಅಧ್ಯಯನ.