ವೀಲ್ ಚೇರ್ ಆಸರೆಯಲ್ಲಿದ್ದವರೂ ಬೀಚ್ ಸೌಂದರ್ಯ ಸವಿಯಬಹುದು: ಮರೀನಾ ಬೀಚಿನಲ್ಲಿ ವಿಕಲಾಂಗ ಸ್ನೇಹಿ ಮಾರ್ಗ ನಿರ್ಮಾಣ ಈ ತಾತ್ಕಾಲಿಕ ಮಾರ್ಗವನ್ನು ಮರದ ಹಲಗೆ ಬಳಸಿ ನಿರ್ಮಾಣ ಮಾಡಲಾಗಿದೆ. ಅದರ ಮೇಲೆ ವೀಲ್ ಚೇರ್ ಸಲೀಸಾಗಿ ಚಾಲನೆ ಮಾಡಬಹುದಾಗಿದೆ. ಚೆನ್ನೈ: ವೀಲ್ ಚೇರ್ ಆಸರೆಯಲ್ಲಿದ್ದವರು ಸಮುದ್ರ ತೀರದ ಸೊಬಗನ್ನು ಸವಿಯಲು ಅನುಕೂಲ ಮಾಡಿಕೊಡುವ ಸಲುವಾಗಿ ಚೆನ್ನೈ ನಗರದ ಮರೀನಾ ಬೀಚಿನಲ್ಲಿ ತಾತ್ಕಾಲಿಕ ಮಾರ್ಗವನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ಹೆತ್ತವರೇ ತಿರಸ್ಕರಿಸಿದರೂ ಧೃತಿಗೆಡದ ಪಂಜಾಬ್ ಸಯಾಮಿಗಳು: ಇವರ ಶ್ರಮದ ಬದುಕು ಎಲ್ಲರಿಗೂ ಸ್ಫೂರ್ತಿ!ಈ ತಾತ್ಕಾಲಿಕ ಮಾರ್ಗವನ್ನು ಮರದ ಹಲಗೆ ಬಳಸಿ ನಿರ್ಮಾಣ ಮಾಡಲಾಗಿದೆ. ಅದರ ಮೇಲೆ ವೀಲ್ ಚೇರ್ ಸಲೀಸಾಗಿ ಚಾಲನೆ ಮಾಡಬಹುದಾಗಿದೆ. ಈ ಮಾರ್ಗ ಮಂಗಳವಾರ ಉದ್ಘಾಟನೆಯಾಗಲಿದೆ. ಇದನ್ನೂ ಓದಿ: ಹೇಗಿದ್ಳು ಹೇಗಾದ್ಳು ಗೊತ್ತಾ?: 1 ಕೋಟಿ ರೂ. ಬಹುಮಾನದ ಜಾಗತಿಕ ಮಟ್ಟದ ಫಿಟ್ನೆಸ್ ಚಾಲೆಂಜ್ ಗೆದ್ದ ಜೈಪುರದ ಮಹಿಳೆವಿಕಲಾಂಗ ಸ್ನೇಹಿ ಮಾರ್ಗ ನಿರ್ಮಾಣ ಕುರಿತಾಗಿ ನಗರದ ವಿಕಲಾಂಗ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ. ಅಲ್ಲದೆ ನಗರಪಾಲಿಕೆಯ ಕೆಲಸಕ್ಕೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಇದನ್ನೂ ಓದಿ: ಪ್ರತಿಷ್ಟಿತ ಶಿಕಾಗೊ ವಿವಿಯಿಂದ 3 ಕೋಟಿ ರೂ. ವಿದ್ಯಾರ್ಥಿವೇತನ: ಭಾರತೀಯ ರೈತನ ಮಗಳ ಮಹತ್ಸಾಧನೆ