ಜಾನುವಾರುಗಳಿಗೆ ಚಾಕಲೇಟ್ ಕೇಕ್: ವಿನೂತನ ಪ್ರಯೋಗದಿಂದ ಹಾಲಿನ ಇಳುವರಿ ಹೆಚ್ಚಳದ ಭರವಸೆ ಬಡ ರೈತರಿಗೆ ನೆರವಾಗುವ ಸಲುವಾಗಿ ಜಾನುವಾರುಗಳಿಗೆ ಅಗತ್ಯವಿರುವ ಪೋಷಕಾಂಶಗಳು ಹಾಗೂ ನಾಲಗೆಗೆ ರುಚಿಸುವ ಪದಾರ್ಥಗಳನ್ನು ಸೇರಿಸಿ ಸಂಶೋಧಕರು ಚಾಕಲೇಟ್ ಕೇಕ್ ತಯಾರಿಸಿದ್ದಾರೆ. ಒಂದೊಂದು ಗಟ್ಟಿಯೂ 2.5- 3 ಕೆ.ಜಿ ತೂಕವಿದೆ. ಭೋಪಾಲ್: ಮಕ್ಕಳು ಆಸೆ ಪಟ್ಟು ಚಾಕಲೇಟ್ ಗಾಗಿ ತಿನ್ನುವುದು ಸಹಜ. ಹದಿಹರೆಯದ ಕಾಲೇಜು ತರುಣಿಯರೂ ಉಡುಗೊರೆಯಾಗಿ ಚಾಕಲೇಟನ್ನು ಅಪೇಕ್ಷಿಸುವುದೂ ಸಹಜವೇ. ಮುಂದಿನ ದಿನಗಳಲ್ಲಿ ಮನುಷ್ಯರು ಮಾತ್ರವಲ್ಲದೆ ಜಾನುವಾರುಗಳೂ ಚಾಕಲೇಟಿಗಾಗಿ ಬೇಡಿಕೆ ಇಡುವ ಕಾಲವೂ ಸನ್ನಿಹಿತವಾಗಿದೆ. ಅದಕ್ಕೆ ಮುನ್ನುಡಿ ಬರೆದಿದೆ ಮಧ್ಯಪ್ರದೇಶದ, ಜಬಲ್ಪುರದಲ್ಲಿರುವ ನಾನಾಜಿ ಪಶುವೈದ್ಯಕೀಯ ಕೇಂದ್ರದ () ಸಂಶೋಧಕರು. ಅವರು ಜಾನುವಾರುಗಳಿಗಾಗಿ ಚಾಕಲೇಟ್ ಕೇಕ್(ಗಟ್ಟಿ) ಗಳನ್ನು ತಯಾರಿಸುವಲ್ಲಿ ಸಫಲರಾಗಿದ್ದಾರೆ. ಇದನ್ನೂ ಓದಿ: ಜಾನುವಾರುಗಳ ಕೃತಕ ಸಂತಾನೋತ್ಪತ್ತಿ ಕ್ರೂರ ಕೃತ್ಯ: ಮದ್ರಾಸ್ ಹೈಕೋರ್ಟ್ಹೈನುಗಾರಿಕೆಯಲ್ಲಿ ತೊಡಗಿರುವ ಬಡ ರೈತರಿಗೆ ಈ ಚಾಕಲೇಟ್ ಗಟ್ಟಿಗಳು ವರದಾನವಾಗಬಲ್ಲುದು ಎಂದು ಸಂಶೋಧಕರು ತಿಳಿಸಿದ್ದಾರೆ. ನಿಜ ಹೇಳಬೇಕೆಂದರೆ ಈ ಜಾನುವಾರುಗಳ ಚಾಕಲೇಟ್ ಅಭಿವೃದ್ಧಿಯ ಉದ್ದೇಶವೇ ಅದು. ಇದನ್ನೂ ಓದಿ: ವನ್ಯಪ್ರಾಣಿಗಳಿಂದ ಉಂಟಾಗುವ ಹಸು ಪ್ರಾಣಹಾನಿಗೆ ಪರಿಹಾರ 10 ಸಾವಿರದಿಂದ 75 ಸಾವಿರಕ್ಕೆ ಹೆಚ್ಚಳ: ಸಚಿವ ಅರವಿಂದ ಲಿಂಬಾವಳಿಹಾಲಿನ ಇಳುವರಿ ಹೆಚ್ಚಿಸಬೇಕೆಂದರೆ ಜಾನುವಾರುಗಳಿಗೆ ಚೆನ್ನಾಗಿ ಮೇವು ಹಾಕಬೇಕು. ಬಡ ರೈತರು ಮೇವು ಒದಗಿಸಲು ಸಾಧ್ಯವಾಗದೆ ಜಾನುವಾರುಗಳಿಂದ ಹಾಲಿನ ಇಳುವರಿ ಪಡೆಯುವಲ್ಲಿ ಹಿಂದೆ ಬೀಳುತ್ತಿರುವುದು ಸಂಶೋಧಕರ ಗಮನಕ್ಕೆ ಬಂದಿತ್ತು. ಇದನ್ನೂ ಓದಿ: ವಿಧಾನ ಪರಿಷತ್ ನಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರಬಡ ರೈತರಿಗೆ ನೆರವಾಗುವ ಸಲುವಾಗಿ ಜಾನುವಾರುಗಳಿಗೆ ಅಗತ್ಯವಿರುವ ಪೋಷಕಾಂಶಗಳು ಹಾಗೂ ನಾಲಗೆಗೆ ರುಚಿಸುವ ಪದಾರ್ಥಗಳನ್ನು ಸೇರಿಸಿ ಸಂಶೋಧಕರು ಚಾಕಲೇಟ್ ಕೇಕ್ ತಯಾರಿಸಿದ್ದಾರೆ. ಒಂದೊಂದು ಗಟ್ಟಿಯೂ 2.5- 3 ಕೆ.ಜಿ ತೂಕವಿದೆ. ಇದನ್ನೂ ಓದಿ: ಒಂದು ಸಮಾಜದ ಮೆಚ್ಚುಗೆ ಗಳಿಸಲು ಕಾಂಗ್ರೆಸ್ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿದೆ: ಕಟೀಲ್ಈ ಉತ್ಪನ್ನ ಐ ಎಸ್ ಒ ಮತ್ತು ಬಿಐಎಸ್ ಸಂಸ್ಥೆಗಳಿಂದ ಪ್ರಮಾಣೀಕೃತಗೊಂಡಿದೆ. ಈ ಚಾಕಲೇಟ್ ಕೇಕ್ ಗೆ ನರ್ಮದಾ ವಿಟಮಿನ್ ಲಿಕ್ ಎಂದು ನಾಮಕರಣ ಮಾಡಲಾಗಿದೆ. ಈ ಚಾಕಲೇಟು ಸೇವನೆಯಿಂದ ಜಾನುವಾರುಗಳು ಶೇ.15- 20 ಪ್ರತಿಶತ ಹೆಚ್ಚಿನ ಪ್ರಮಾಣದ ಹಾಲನ್ನು ನೀಡುವ ಭರವಸೆಯನ್ನು ಸಂಶೋಧಕರು ನೀಡಿದ್ದಾರೆ. ಈ ಉತ್ಪನ್ನ ಕೇವಲ ಜಾನುವಾರುಗಳಿಗೆ ಮಾತ್ರ ಸೀಮಿತವಾಗಿಲ್ಲ. ಎಮ್ಮೆ, ಆಡು, ಕುರಿ, ಹಂದಿಗಳ ಪೋಷಣೆಗೂ ನೆರವಾಗುವುದರಿಂದ ಅವುಗಳಿಗೂ ನೀಡಬಹುದಾಗಿದೆ. ಇದನ್ನೂ ಓದಿ: ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ: ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್; ಹಣ, ವಾಹನ, ಜಾನುವಾರು, ಚಿನ್ನ ಪಣಕ್ಕೆ!ರಾಜ್ಯಕ್ಕೆ 275 ಪಶು ಚಿಕಿತ್ಸಾ ವಾಹನ ನೀಡಲು ಕೇಂದ್ರ ಒಪ್ಪಿಗೆ; ಮೋದಿ-ಬೊಮ್ಮಾಯಿ ಸಹಕಾರದಿಂದ ಯಶಸ್ವಿ: ಸಚಿವ ಪ್ರಭು ಚೌಹಾಣ್ಡಿಜೆ ಹಳ್ಳಿ: ಹತ್ಯೆಗಾಗಿ ಕರೆತರಲಾಗಿದ್ದ ಆರು ಜಾನುವಾರುಗಳ ರಕ್ಷಣೆಜಾನುವಾರುಗಳಲ್ಲಿ ಕಾಲುಬಾಯಿ ರೋಗ ಹೆಚ್ಚಳ: ಕೊರೋನಾ ನಡುವೆ ರಾಜ್ಯದಲ್ಲಿ ಮತ್ತೊಂದು ತಲೆನೋವು!ಜಾನುವಾರು ಸಂರಕ್ಷಣೆಯ ಹೆಸರಿನಲ್ಲಿ ಸಂವಿಧಾನ ಬಾಹಿರ ಸುಗ್ರಿವಾಜ್ಞೆ: ಎಸ್ಡಿಪಿಐಕೃಷಿ ಚಟುವಟಿಕೆಗಳಿಗೆ ಜಾನುವಾರು ಸಾಗಿಸುವವರ ಮೇಲೆ ಕ್ರಮವಿಲ್ಲ; ಹೈಕೋರ್ಟ್'ಗೆ ಸರ್ಕಾರಬ್ರಿಟನ್ ನಲ್ಲಿ ಜಾನುವಾರುಗಳಿಗೆ ಹುಚ್ಚು ಕಾಯಿಲೆ ಹರಡುವ ಭೀತಿ: ಮೊದಲ ಬಲಿ