ಫೇಸ್‌ಬುಕ್‌ನ 5 ಸ್ಟಾರ್ ಕವಿಗಳು ಫೇಸ್‌ಬುಕ್‌ನಲ್ಲಿ ಅತ್ಯಂತ ಸತ್ವಯುತ ಕವಿಗಳು ಹಲವರಿದ್ದಾರೆ. ಫೇಸ್ ಬುಕ್ಕಿನಲ್ಲಿ ಸಾಹಿತ್ಯ ರಚನೆ ಕುರಿತಾದ ಚರ್ಚೆಗಳೇನೇ ಇದ್ದರೂ ಇದರಿಂದ ಬೆಳೆಯುತ್ತಿರುವುದು ಕನ್ನಡ ಎಂಬುದು ನಿರ್ವಿವಾದ. ಬದಲಾದ ಈ ಕಾಲದಲ್ಲಿ ಫೇಸ್ ಬುಕ್ಕಿನಲ್ಲಿ ನಮಗೆ ಉತ್ತಮವೆನಿಸಿದ ಐವರು ಕವಿಗಳ ರಚನೆ ಮತ್ತು ಕಿರುಪರಿಚಯ ಒಂದು ಹೊಸ ಆಕರ್ಷಣೆ- ಫೇಸ್‌ಬುಕ್‌ನ 5 ಸ್ಟಾರ್ ಕವಿಗಳನ್ನು ಓದಿ, ಪ್ರೋತ್ಸಾಹಿಸಿ...