ಕೊರೋನಾ ಗೆದ್ದ 103 ವರ್ಷದ ಅಜ್ಜನ ಅನುಭವ ಕೇಳಿ! ಕೊರೋನಾ ಸೋಂಕಿಗೆ ತುತ್ತಾದ ಇಳಿವಯಸ್ಸಿನವರು ಆಸ್ಪತ್ರೆಗೆ ದಾಖಲಾದವರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದವರು ಕಡಿಮೆ ಮಂದಿ. ಅಂಥವರಲ್ಲಿ 103 ವರ್ಷದ ಈ ಅಜ್ಜ ಗುಣಮುಖರಾಗಿ ಮನೆಗೆ ಬಂದಿದ್ದು ತಮಗೆ ಸಿಕ್ಕಿದ ಚಿಕಿತ್ಸೆ ಅನುಭವವನ್ನು ಹೇಳಿಕೊಂಡಿದ್ದಾರೆ. ಬೆಂಗಳೂರು: ಕೊರೋನಾ ಸೋಂಕಿಗೆ ತುತ್ತಾದ ಇಳಿವಯಸ್ಸಿನವರು ಆಸ್ಪತ್ರೆಗೆ ದಾಖಲಾದವರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದವರು ಕಡಿಮೆ ಮಂದಿ. ಅಂಥವರಲ್ಲಿ 103 ವರ್ಷದ ಈ ಅಜ್ಜ ಗುಣಮುಖರಾಗಿ ಮನೆಗೆ ಬಂದಿದ್ದು ತಮಗೆ ಸಿಕ್ಕಿದ ಚಿಕಿತ್ಸೆ ಅನುಭವವನ್ನು ಹೇಳಿಕೊಂಡಿದ್ದಾರೆ.ಬೆಂಗಳೂರಿನ ಶಾಂತಿನಗರದಲ್ಲಿ ಪ್ರೈಮ್ ರೋಸ್ ಕೋವಿಡ್ ಕೇರ್ ಸೆಂಟರ್ ನಲ್ಲಿ 103 ವರ್ಷದ ಶರಣಯ್ಯ ಎಂಬುವವರು ದಾಖಲಾಗಿದ್ದರಂತೆ. ಸಮಯಕ್ಕೆ ಸರಿಯಾಗಿ ವೈದ್ಯರು ಮತ್ತು ದಾದಿಯರಿಂದ ಚಿಕಿತ್ಸೆ ದೊರಕಿ ಗುಣಮುಖರಾಗಿ ಬಂದಿದ್ದಾರೆ. ಈ ಕುರಿತು ಸ್ವತಃ ಅವರೇ ತಮ್ಮ ಅನುಭವ ಹಂಚಿಕೊಂಡಿದ್ದಾರೆ.ಆಸ್ಪತ್ರೆ ವೈದ್ಯರು, ನರ್ಸ್ ಗಳು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಉತ್ತಮವಾದ ವ್ಯವಸ್ಥೆ ಮಾಡಿದ್ದರು, ಆಸ್ಪತ್ರೆಯ ಕೊಡುಗೆ ಸ್ಮರಿಸುತ್ತೇನೆ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.103 ವರ್ಷದ ಈ ಹಿರಿಯಜ್ಜ ಕೋವಿಡ್ ನಿಂದ ಗುಣಮುಖರಾಗಿ ಬಂದಿದ್ದು ನೋಡಿದರೆ ಕೋವಿಡ್ ಸೋಂಕಿತ ಚಿಕ್ಕವಯಸ್ಸಿನವರಿಗೆ ಸ್ಪೂರ್ತಿಯಾಗಲೇಬೇಕು. ಧನಾತ್ಮಕ ಚಿಂತನೆ, ಗಟ್ಟಿ ಮನಸ್ಸು ಇಲ್ಲಿ ಮುಖ್ಯವಾಗುತ್ತದೆ ಎಂದು ಈ ಅಜ್ಜನನ್ನು ಕಂಡರೆ ಗೊತ್ತಾಗುತ್ತದೆಯಲ್ಲವೇ?103-- & Covid19 . & Covid19.# #BBMPFIGHTSCOVID19 ../3BCpuUG2m5