ಕನ್ನಡನುಡಿ ಪರ್ವ: ಭಾಷೆಯಾಗಿ ಕನ್ನಡದ ಸ್ಥಿತಿ-ಗತಿ ಮತ್ತು ಸ್ವಾಸ್ಥ್ಯ ಕೆಳಗಿನ ಹೇಳಿಕೆಗಳನ್ನು ಕುರಿತು ಯೋಚಿಸಿ... ಈ ಕೆಳಗಿನ ಹೇಳಿಕೆಗಳನ್ನು ಕುರಿತು ಯೋಚಿಸಿ ಅದರ ಅಂಕಿ ಅಂಶಗಳನ್ನು ಕೆದಕಿದರೆ/ಚಿತ್ರಿಸಿಕೊಂಡರೆ ಕನ್ನಡ ನಿಧಾನವಾಗಿ ಕನ್ನಡಿಗರ ಮನ ಮನೆಗಳಿಂದ ದೂರವಾಗುತ್ತಿರುವುದನ್ನು ಗಮನಿಸಬಹುದು.ಕರ್ನಾಟಕದ ಜನಸಂಖ್ಯೆ-ಕನ್ನಡಿಗರ ಸಂಖ್ಯೆಕನ್ನಡ ಮಾತನಾಡುವವರ ಸಂಖ್ಯೆಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳುಕನ್ನಡ ಮೊದಲ ಭಾಷೆಯಾಗಿ ಕಲಿಯುತ್ತಿರುವ ಮಕ್ಕಳುಕನ್ನಡ ನಿರರ್ಗಳ ಮಾತನಾಡಬಲ್ಲ ಕನ್ನಡಿಗರುಕನ್ನಡವನ್ನು ಸುಲಭವಾಗಿ ಬರೆಯಬಲ್ಲವರ ಸಂಖ್ಯೆ.ಕನ್ನಡ ನಿಯತ ಕಾಲಿಕೆ/ ದಿನಪತ್ರಿಕೆ ಓದಬಲ್ಲ ಯುವ ಪೀಳಿಗೆಕನ್ನಡ ಪುಸ್ತಕಗಳನ್ನು ಓದಬಲ್ಲ ಮಕ್ಕಳುಮನೆಯಲ್ಲಿ ಕನ್ನಡ ವ್ಯವಹಾರಿಕ ಭಾಷೆಮನೆಯಲ್ಲಿ ಕಂಗ್ಲೀಶ್ ವ್ಯವಹಾರಿಕ ಭಾಷೆಮನೆಯಲ್ಲಿ ಬಹುತೇಕ ಇಂಗ್ಲೀಶ್ ವ್ಯವಹಾರಿಕ ಭಾಷೆಶಾಲೆ- ಹೊರಗಡೆ ಬಹುತೇಕ ಇಂಗ್ಲೀಷ್ ಬಳಸುವವರ ಸಂಖ್ಯೆಕನ್ನಡ ದಿನಪತ್ರಿಕೆಗಳ ಮಾರಾಟದ ಒಟ್ಟು ಸಂಖ್ಯೆನಿಯತಕಾಲಿಕೆಗಳ ಮಾರಾಟದ ಒಟ್ಟು ಸಂಖ್ಯೆ.ಬದಲಾಗುತ್ತಿರುವ ಜನಸಂಖ್ಯಾ ಚಿತ್ರಣ ಮತ್ತು ಅದರ ಪರಿಣಾಮಗಳುಕುಟುಂಬ ಕಲ್ಯಾಣ ಯೋಜನೆಒಂದು ಅಥವಾ ಎರಡು ಮಕ್ಕಳುಸಣ್ಣ ಪ್ರಮಾಣದ ಮಕ್ಕಳ ಸಂಖ್ಯೆಹೆಚ್ಚುತ್ತಿರುವ ಕನ್ನಡ ವಿಮುಖತೆಸಂಕುಚಿತಗೊಂಡ ಯುವ ಪೀಳಿಗೆಯ ಜನಸಂಖ್ಯೆಸಂಕುಚಿತಗೊಂಡ ಕನ್ನಡವನ್ನು ಸಮರ್ಪಕವಾಗಿ ಬಳಸಬಲ್ಲ ಯುವಪೀಳಿಗೆಯ ಪ್ರಮಾಣಸಂಕುಚಿತ ಭಾಷಾ ಬಳಕೆದಾರರ ಸಂಖ್ಯೆಕನ್ನಡ ಭಾಷಾ ಅಲ್ಪ ಸಂಖ್ಯಾತರುಕನ್ನಡ ಭಾಷೆಯ ನಿರ್ವಹಣೆ ಸರಕಾರಗಳಿಗೆ ಅರ್ಥಿಕ ಹೊರೆಕನ್ನಡ ಭಾಷೆಗೆ ಸರಕಾರಗಳ ನಿರ್ಲಕ್ಷ್ಯಕನ್ನಡ ಭಾಷಾ ಮರಣ ಶಾಸನ!!ಇವೆಲ್ಲ ಪ್ರಶ್ನೆಗಳು ಕನ್ನಡದ ವತಿಯಿಂದ ಬಹಳ ಮುಖ್ಯವಾದವುಗಳು. ಕಾರಣ, ಕನ್ನಡ ಒಂದು ಪ್ರಾದೇಶಿಕ ಭಾಷೆ. ಅದಕ್ಕೆ ಸೀಮಿತ ಸಂಖ್ಯೆಯ ಜನರು ಮಾತ್ರವೇ ವಾರಸುದಾರರು. ಕನ್ನಡಕ್ಕೆ ಇಂಗ್ಲೀಷಿಗಿರುವಂತೆ ಜಾಗತಿಕ ವೇದಿಕೆ ಇಲ್ಲ.ಕನ್ನಡದ ಪುಸ್ತಕಗಳನ್ನು ಕನ್ನಡದವರು ಮಾತ್ರವೇ ಓದುವುದು. ಹೀಗಾಗಿ ಸಂಖ್ಯಾ ಪ್ರಮಾಣ ಕಡಿಮೆಯಿರುವಲ್ಲಿ ಪ್ರತಿಯೊಂದು ಸದಸ್ಯನಿಗೂ ಪ್ರಾಮುಖ್ಯತೆ ಬರುತ್ತದೆ ಹಾಗೂ ಅವರ ಕೊಡುಗೆಗೆ ಮಹತ್ವ ಇದೆ. ಇದನ್ನೇ ಇನ್ನೊಂದು ರೀತಿ ಹೇಳ ಬೇಕೆಂದರೆ, ಕನ್ನಡನುಡಿಯಿಂದ ವಿಮುಖನಾಗುವ ಪ್ರತಿಯೊಬ್ಬ ಪ್ರಜೆಯೂ ಕನ್ನಡವನ್ನು ವಿನಾಶದೆಡೆಗೆ ತಳ್ಳುತ್ತಿದ್ದಾನೆ/ಳೆ ಎಂದೆನ್ನಬಹುದು.ಈ ಹಿನ್ನೆಲೆಯಲ್ಲಿ ನುಡಿಯ ಬಗೆಗೆ ನಾವೇಕೆ ಇಷ್ಟೊಂದು ಆತಂಕ ತಾಳಬೇಕೆಂಬುದನ್ನು ಇಲ್ಲಿ ಪರೀಕ್ಷಿಸೋಣ.ನುಡಿಯ ಮಹತ್ವ:ಈಗ ನುಡಿಯ ಮಹತ್ವ ಏನು? ನಾವು ಏಕೆ ನಮ್ಮ ಭಾಷೆಯ ಕುರಿತು ಅಭಿಮಾನ ತಳೆಯಬೇಕೆಂಬುದನ್ನು ಸ್ವಲ್ಪ ಪರ್ಯಾವಲೋಚಿಸೋಣ