ನಾನು ಸುಖಿ ಸಿಂಪಲ್ಲಾಗ್, ನೀಟಾಗಿ ಡ್ರೆಸ್ ಮಾಡ್ಕೊಂಡ ಆಕೆಯೇ ಅಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್. ಹಾಗಂತ ಅವಳೇನೂ ತ್ರಿಪುರ ... ಸಿಂಪಲ್ಲಾಗ್, ನೀಟಾಗಿ ಡ್ರೆಸ್ ಮಾಡ್ಕೊಂಡ ಆಕೆಯೇ ಅಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್. ಹಾಗಂತ ಅವಳೇನೂ ತ್ರಿಪುರ ಸುಂದರಿಯಲ್ಲ. ಮಂದಸ್ಮಿತೆ. ಆತ್ಮವಿಶ್ವಾಸ ತುಂಬಿದ ಮುಖ. ಅದೊಂದು ದೊಡ್ಡ ಪಾರ್ಟಿ, ಕಂಪನಿಗೆ ಹೊಸದಾಗಿ ಬಂದ ನಿರ್ದೇಶಕರೊಬ್ಬರನ್ನು ಸ್ವಾಗತಿಸಲು ಎಲ್ಲರೂ ಸೇರಿದ್ದರು. ಆಕೆ ಆ ನಿರ್ದೇಶಕನ ಪತ್ನಿ. ಪ್ರತಿಷ್ಠಿತ ಕಂಪನಿಯೊಂದರ ಡೈರಕ್ಟರ್ ಎಂದ್ಮೇಲೆ ಹಣಕ್ಕೇನೂ ಕೊರತೆ ಇಲ್ಲ. ಅದಕ್ಕೆ ಖುಷ್ ಖುಷಿಯಾಗಿದ್ದಾಳೆ ಎನ್ನುವ ಗುಸುಗುಸು ಕೇಳಿ ಬರುತ್ತಿತ್ತು ಹೆಂಗಳೆಯರ ಮಧ್ಯೆ. ಅವರೊಡನೆಯೇ ಒಬ್ಬಳಾದಳಾಕೆ. ಅವರೆಲ್ಲ ಏನು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಕೇಳಿಸುವಷ್ಟು ದೂರದಲ್ಲಿ ಆ ಡೈರಕ್ಟರ್ ನಿಂತಿದ್ದ. ಮಹಿಳೆಯೊಬ್ಬಳು ಕೇಳಿಯೇ ಬಿಟ್ಟಳು, 'ನಿಮ್ಮ ಖುಷಿಗೆ ಕಾರಣ ನಿಮ್ಮ ಗಂಡನಾ?' ಡೈರೆಕ್ಟರ್ ಎದೆಯಲ್ಲಿ ಢವಢವ. ಮದ್ವೆಯಾದಾಗಿನಿಂದಲೂ ಬೆಂಬಲಿಸುತ್ತಿರುವ ಪತ್ನಿಗೆ ತನ್ನ ಮೇಲೆ ಯಾವ ಅಭಿಪ್ರಾಯವಿದೆ ಎಂಬೋದು ಪಕ್ಕಾ ಗೊತ್ತಿದ್ದರೂ ಎಲ್ಲರೆದರೂ ಏನು ಹೇಳ್ತಾಳೆಂದು ಕೇಳುವ ಸಹಜ ಕುತೂಹಲ. ಅದೂ, ಅವನ ವೃತ್ತಿ ಬದುಕಿನ ಅತ್ಯಂತ ಪ್ರಮುಖ ಪಾರ್ಟಿಯೊಂದರಲ್ಲಿ. ಹೆಮ್ಮೆಯಿಂದ, ಭದ್ರತಾ ಭಾವದೊಂದಿಗೆ ಸ್ರ್ಟೈಟ್ ಆಗಿ ಕೂತ. 'ಇಲ್ಲ, ನನ್ನ ಖುಷಿಗೆ ಕಾರಣ ಗಂಡನಲ್ಲ...' ಸೂಜಿ ಬಿದ್ದರೂ ಕೇಳಿಸುವಷ್ಟು ನೀರವತೆ ಆವರಿಸತಲ್ಲಿ, ಏನಿದು? ತಲ್ಲಣನಾದ ಗಂಡ, ಹೆಂಡ್ತಿಯದ್ದು ಇದೆಂಥಾ ತಮಾಷೆ? ಆಕೆ ಮುಂದುವರಿಸಿದಳು. 'ನನ್ನೀ ಸಂತೋಷಕ್ಕೆ ನಾನೇ ಕಾರಣ. ಜೀವನದ ಪ್ರತಿ ಕ್ಷಣವೂ ಖುಷಿಯಾಗಿರ್ಬೇಕೆಂದು ಕೊಂಡಿದ್ದೇನೆ. ಅಪ್ಪಿ ತಪ್ಪಿಯೂ ಈ ಸಂತೋಷ ಇನ್ನೊಬ್ಬರ ಮೇಲೋ, ಯಾವುದೋ ವಸ್ತುವಿನ ಮೇಲಾಗಲಿ, ಸಂದರ್ಭಗಳ ಮೇಲಾಗಲಿ ಅವಲಂಬಿಸೋಲ್ಲ, ಹಾಗಾಗಿದ್ದರೆ, ನನ್ನ ಕಥೆ ಎಂದೋ ಮುಗಿದಿರುತ್ತಿತ್ತು. ಹವಾಮಾನ, ನಮ್ಮ ಫಿಸಿಕ್, ದುಡ್ಡು, ಜನರು.....ಹೀಗೆ ಎಲ್ಲವೂ ಬದುಕಲ್ಲಿ ಬದಲಾಗ್ತವೆ. ಉಳಿದದ್ದು ಅನುಭವ, ಸಹಕಾರ ಅರ್ಥ ಮಾಡಿಕೊಳ್ಳೋದು, ಕೇಳೋದು, ಸಮಾಧಾನ ಮಾಡೋದು, ಸ್ವೀಕರಿಸುವಂಥವು, ಸನ್ನಿವೇಶಗಳಿಗೆ ಬಿಟ್ಟಿದ್ದು, ಇವನ್ನು ಗಂಡನೊಂದಿಗೂ ಅಭ್ಯಾಸ ಮಾಡಿಕೊಂಡಿದ್ದೇನೆ. 'ಕ್ಷಮಿಸೋದ್ರಲ್ಲಿ ಸಂತೋಷವಿದೆ. ನೀವು ನಿಮ್ಮನ್ನು ಮತ್ತೆ ಬೇರೆಯವರನ್ನು ಪ್ರೀತಿಸೋದ್ರನ್ನೂ ಖುಷಿ ಇದೆ. ಖುಷಿಯಾಗಿಡೋದು ಗಂಡನ ಕೆಲ್ಸ ಅಲ್ಲವೇ ಅಲ್ಲ. ಅವನ ಸುಖ-ದುಖಃ ಯಶಸ್ಸಿಗೂ ಕಾರಣ ನಾನಲ್ಲ ಎನ್ನುವುದು ನಂಗರ್ಥವಾಗಿದೆ. ನಮ್ಮಿಬ್ಬರಲ್ಲೂ ಬದಲಾವಣೆಗಳಾಗಿವೆ. ಜೀವನದ ಕೆಲವು ಸನ್ನಿವೇಶಗಳಿಗೆ ಹೊರತಾಗಿಯೂ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಇಬ್ಬರಿಂದಲೂ ತಪ್ಪುಗಳಾಗುತ್ತವೆ. ಒಬ್ಬರನ್ನೊಬ್ಬರು ಕ್ಷಮಿಸಿಕೊಳ್ತೇವೆ. ತಪ್ಪನ್ನು ತಿದ್ದಿ ಕೊಂಡಿದ್ದೇವೆ. ಬದಲಾಗಿದ್ದು ಅನುಭವಗಳು ಮತ್ತು ಸನ್ನಿವೇಶಗಳು ಮಾತ್ರ. ಜೀವನದಲ್ಲಿ ಏರಿಳಿತಗಳು ಕಾಮನ್. ಅವೆಲ್ಲವೂ ಸಂಬಂಧವನ್ನು ಗಟ್ಟಿಗೊಳಿಸಿದೆ. ಇಂಧ ಬದಲಾವಣೆಗಳೇ ಇಲ್ಲದಿದ್ದರೆ, ನಮ್ಮದು ಲಿವಿಂಗ್ ಟುಗೆದರ್ ಎನಿಸುತ್ತಿತ್ತು.' 'ಈ ಸಣ್ಣ ವಿಷ್ಯಗಳನ್ನು ಅರ್ಥ ಮಾಡಿಕೊಳ್ಳದ ಕೆಲವರು ಡಿವೋರ್ಸ್ ಮೊರೆ ಹೋಗ್ತಾರೆ. ಅದು ಸುಲಭವೂ ಹೌದು. ಏಕಂದ್ರೆ ನೈಜ ಪ್ರೀತಿ ಸುಲಭವಾಗಿರೋಲ್ಲ. ಬದುಕ್ಲಿಕ್ಕೆ ಒಬ್ಬರಿಗೊಬ್ಬರು ಕಂಡೀಶಷನ್‌ಗಳಿಲ್ಲದೆ ಕ್ಷಮಿಸ್ಕೋಬೇಕು. ಬಂದದ್ದನ್ನು ಎದುರಿಸಬೇಕು. ಒಟ್ಟಾಗಿ ಎದುರಿಸಿದರೆ ಶಿಕ್ಷೆಯಲ್ಲಿಯೂ ಸಂತೋಷವಿರುತ್ತೆ.' 'ಹುಷಾರಿಲ್ಲ, ದುಡ್ಡಿಲ್ಲ, ಕ್ಲೈಮೇಟ್ ಸರಿಯಿಲ್ಲ, ಇನ್‌ಸಲ್ಟ್ ಮಾಡಿದ್ರು, ಅವ್ರು ಪ್ರೀತಿಸೋಲ್ಲ, ಮಾಡಿದ ಕೆಲ್ಸವನ್ನು ಮೆಚ್ಚೋಲ್ಲ....ಹೀಗೆ ಹೇಳ್ತಾನೆ ಇರ್ತಾರೆ ಎಲ್ಲರೂ. ಆದ್ರೆ, ಪರಿಸ್ಥಿತಿ ಹೇಗೇ ಇರಲಿ, ಸುಖವಾಗಿರೋದು, ಖುಷಿಯಾಗಿರ್ಬೇಕು ಎನ್ನೋದು ಒಂದು ಭಾವವಷ್ಟೇ.' ದುಡ್ಡಿದೆ, ಖುಷಿಯಾಗಿದಾಳೆ ಎನ್ನೋರಿಗೆ ಆಕೆಯ ಉತ್ತರವಾಗಿತ್ತು ಇದು. ನಮ್ಮ ಸಂತೋಶಕ್ಕೆ ಇನ್ನೊಬ್ಬರನ್ನು ಹೊಣೆಯಾಗಿಸೋದ್ರಲ್ಲಿ ಏನಿದೆ ಅರ್ಥ? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಬದಲು ಸಾಧ್ಯವಾದಷ್ಟು ಖುಷ್ ಖುಷಿಯಾಗಿಯೇ ಇರುವ ಬದುಕನ್ನು ಅನುಭವಿಸಬೇಕು ಅಲ್ಲವೇ? ಯಶಸ್ವಿ ನಾರಿಯ ಗುಟ್ಟು ರಟ್ಟು 'ಸೆವೆನ್ ಹ್ಯಾಬಿಟ್ಸ್ ಆಫ್ ಹೈಲಿ ಎಫೆಕ್ಟಿವ್ ಪೀಪಲ್‌' ಪುಸ್ತಕದ ಲೇಖಕ ಡಾ.ಸ್ಟೀಫನ್ ಕೋವೆ ಸಂತೋಶವಾಗಿರುವ ನಾರಿಯ ಉತ್ತರವನ್ನು ಹೀಗೆ ವಿಶ್ಲೇಷಿಸುತ್ತಾನೆ.... ' ಬದುಕಿನಲ್ಲಿ ನೀನು ನನ್ನ ವೃತ್ತಿ, ಕುಟುಂಬವನ್ನು ಎರಡು ಚಕ್ರಗಳಂತೆ ಭಾವಿಸುತ್ತೇನೆ. ನಾನು, ನನ್ನ ಗಂಡ, ಸ್ನೇಹಿತರು, ಮಕ್ಕಳು ಎಲ್ಲರೂ ಸಂತೋಷವಾಗಿ ಕಳೆಯಲು ನನ್ನ ಮನೆಯನ್ನು ಪ್ರಶಾಂತವಾಗಿ ತೀಡಿಸಿಟ್ಟು ಕೊಂಡಿದ್ದೇನೆ. ಅಲ್ಲಿ ಕೇವಲ ಆನಂದ, ಸಂತೋಷ, ಶಾಂತಿ ಮಾತ್ರವೇ ಇರುತ್ತದೆ. ಆ ವಾತಾವರಣವೆಲ್ಲ ತುಂಬಾ ಕ್ಲೀನಾಗಿ, ಆಹ್ಲಾದವಾಗಿರಬೇಕೆಂದು ನಿರಂತರ ಶ್ರಮಿಸುತ್ತೇನೆ. ನನ್ನ ಮಕ್ಕಳಿಗೆ ನಾನು ಪ್ರೇಮವನ್ನು ಕಲಿಸುತ್ತೇನೆ. ಜ್ಞಾನವನ್ನು ಸಂಪಾದಿಸುಲು ಯತ್ನಿಸುತ್ತೇನೆ. ನನ್ನ ಕೋರಿಕೆಗಳಿಗಿಂತಲೂ 'ಅಗತ್ಯ' ಗಳು ಮುಖ್ಯವೆಂದುಕೊಳ್ತೇನೆ. ಸಂಪಾದನೆಗಿಂತಲೂ ಖರ್ಚನ್ನು ಕಡಿಮೆ ಮಾಡಿ. ಸ್ವಲ್ಪ ಬಂಡವಾಳವನ್ನು ಸೇರಿಸಿಕೊಳ್ಳುತ್ತೇನೆ. ನನ್ನ ಗಂಡನಿಗೆ ಎಲ್ಲ ರೀತಿಯಿಂದಲೂ ಸಹಕರಿಸುತ್ತೇನೆ. ಆದರೆ, ಅದರಲ್ಲಿ ನೀನು, ನನ್ನ ಗೌರವವನ್ನು ಎಂದಿಗೂ ಕಳೆದು ಕೊಳ್ಳುವುದಿಲ್ಲ.' ಹೀಗೆ ಚಿಂತಿಸುವ ಆತ್ಮವಿಶ್ವಾಸವಿರುವ ನಾರಿಯ ಬದುಕು ಸ್ವರ್ಗಕ್ಕೆ ಸಮ. -ಕೆ. ಎಸ್ . ನಿರುಪಮಾ