ಸಿಬಿಐ ನಿರ್ದೇಶಕರ ಕಾರ್ಯವೈಖರಿ ಅನಿಲ್ ಕುಮಾರ್ ಸಿನ್ಹಾ ಅವರು ಸಿಬಿಐ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ ಕಳೆದ ವಾರವಷ್ಟೇ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಗೆ ಹೊಸ ನಿರ್ದೇಶಕರ ಆಯ್ಕೆಯಾಗಿದೆ. ಅನಿಲ್ ಕುಮಾರ್ ಸಿನ್ಹಾ ಅವರು ಸಿಬಿಐ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ 10 ಸಿಬಿಐ ನಿರ್ದೇಶಕರ ಕಾರ್ಯವೈಖರಿ ಬಗ್ಗೆ ಒಂದಿಷ್ಟು ಮಾಹಿತಿ. 1. ಅನಿಲ್ ಸಿನ್ಹಾ * 1979ರ ಬ್ಯಾಚ್‌ನ ಐಪಿಎಸ್ ಅಧಿಕಾರಿ * 2014ರ ಡಿ.2ರಿಂದ ಸಿಬಿಐ ನಿರ್ದೇಶಕರು * ಅನೇಕ ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿ ಪ್ರಕರಣಗಳ ತನಿಖೆ 2. ರಂಜಿತ್ ಸಿನ್ಹಾ * 1974ರ ಬ್ಯಾಚ್‌ನ ಐಪಿಎಸ್ ಅಧಿಕಾರಿ * ಹಲವು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಕರಣಗಳ ತೀರ್ಪುಗಳು ಇವರು ಕೈಗೊಂಡ ತನಿಖೆಗಳ ಫಲ * 2ಜಿ, ಕಲ್ಲಿದ್ದಲು ಹಗರಣ ಆರೋಪಿಗಳ ರಕ್ಷಣೆಗೆ ಯತ್ನ, ಅವರೊಂದಿಗೆ ಮಾತುಕತೆ ನಡೆಸಿದ್ದು ಇವರಿಗೆ ಕಪ್ಪುಚುಕ್ಕೆ 3. ಅಮರ್ ಪ್ರತಾಪ್ ಸಿಂಗ್ * 1974ರ ಬ್ಯಾಚ್‌ನ ಐಪಿಎಸ್ ಅಧಿಕಾರಿ * 2010ರ ನ.30ರಿಂದ 2012ರ ನ.30ರ ವರೆಗೆ ಸಿಬಿಐ ನಿರ್ದೇಶಕರು * 2ಜಿ ಹಗರಣ, ಆರುಷಿ ಹತ್ಯೆ, ಆದರ್ಶ ಹಗರಣ, ಗುಜರಾತ್ ನಕಲಿ ಎನ್‌ಕೌಟಂರ್ ಪ್ರಕರಣಗಳ ತನಿಖೆ 4. ಅಶ್ವನಿ ಕುಮಾರ್ * 1973ರ ಬ್ಯಾಚ್‌ನ ಐಪಿಎಸ್ ಅಧಿಕಾರಿ * 2008 ಆ.2ರಿಂದ 2010ರ ನ.30ರ ವರೆಗೆ ಸಿಬಿಐ ನಿರ್ದೇಶಕರು * ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆ 5. ವಿಜಯಶಂಕರ್ ತಿವಾರಿ * 1969ರ ಬ್ಯಾಚ್‌ನ ಐಪಿಎಸ್ ಅಧಿಕಾರಿ * 2005ರ ಡಿ.12ರ ಜು.31ರ ವರೆಗೆ ಸಿಬಿಐ ನಿರ್ದೇಶಕರು * ಭೂಗತ ಪಾತಕಿ ಅಬು ಸಲೇಂನನ್ನು ಭಾರತದ ವಶಕ್ಕೆ ತರುವಲ್ಲಿ ಇವರ ಪಾತ್ರ ಮಹತ್ವದ್ದು, 1993ರ ಮುಂಬೈ ಸ್ಫೋಟ ಪ್ರಕರಣದ ತನಿಖೆ 6. ಯು.ಎಸ್.ಮಿಶ್ರಾ * 1968ರ ಬ್ಯಾಚ್‌ನ ಐಪಿಎಸ್ ಅಧಿಕಾರಿ * 2003ರ ಡಿ.6ರಿಂದ 2005ರ ಡಿ.6ರ ವರೆಗೆ ಸಿಬಿಐ ನಿರ್ದೇಶಕರು * ಬಾಬ್ರಿ ಮಸೀದಿ ಧ್ವಂಸ, ಛಾಪಾ ಕಾಗದ ಪ್ರಕರಣಗಳ ತನಿಖೆ 7. ಪಿ.ಸಿ.ಶರ್ಮಾ * 1966ರ ಬ್ಯಾಚ್‌ನ ಐಪಿಎಸ್ ಅಧಿಕಾರಿ * 2001ರ ಏ.30ರಿಂದ 2003ರ ಡಿ.6ರ ವರೆಗೆ ಸಿಬಿಐ ನಿರ್ದೇಶಕರು * ಭೂಗತ ಪಾತಕಿ ಅಪು ಸಲೇಂನನ್ನು ಭಾರತದ ವಶಕ್ಕೆ ತರುವಲ್ಲಿ ಇವರ ಪಾತ್ರವೂ ಇತ್ತು 8. ಆರ್.ಕೆ.ರಾಘವನ್ * 1999ರ ಜ.4-2001ರ ಏ.30ರ ವರೆಗೆ ಸಿಬಿಐ ನಿರ್ದೇಶಕರು * 2002ರ ನರಹತ್ಯೆಗೆ ಸಂಬಂಧಿಸಿದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದರು * 1991ರಲ್ಲಿ ರಾಜೀವ್ ಗಾಂಧಿ ಹತ್ಯೆ ವೇಳೆ ಭದ್ರತಾ ಲೋಪಕ್ಕೆ ದಂಡಿಸಲಾದ 3 ಪೊಲೀಸ್ ಅಧಿಕಾರಿಗಳಲ್ಲಿ ಇವರೂ ಒಬ್ಬರು 9. ಟಿ.ಎನ್.ಮಿಶ್ರಾ * 1965ರ ಬ್ಯಾಚ್‌ನ ಐಪಿಎಸ್ ಅಧಿಕಾರಿ * 1998ರ ಮಾ.31ರಿಂದ 1999ರ ಜ.4ರ ವರೆಗೆ ಸಿಬಿಐ ನಿರ್ದೇಶಕರು * ಬೋಫೋರ್ಸ್ ಹಗರಣದ ತನಿಖೆ ಕೈಗೊಂಡು, ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಾಟ್ರೋಕಿ ಸೆರೆಗೆ ಕಾರಣರು 10. ಡಿ.ಆರ್.ಕಾರ್ತಿಕೇಯನ್ * 1964ರ ಬ್ಯಾಚ್‌ನ ಐಪಿಎಸ್ ಅಧಿಕಾರಿ * 1998ರಲ್ಲಿ ಸಿಬಿಐ ನಿರ್ದೇಶಕರು * ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆ. ರಾಜೀವ್ ಹತ್ಯೆ ಹಿಂದಿನ ಸಂಚು ಮತ್ತು ನಂತರದ ವಿದ್ಯಮಾನಗಳ ಬಗ್ಗೆ 'ಟ್ರೈಯಂಪ್ ಆಫ್ ಟ್ರುತ್‌' ಎಂಬ ಪುಸ್ತಕ ಬರೆದಿದ್ದರು