ಗಟ್ಟಿಮೇಳಕ್ಕೆ ಬಿಟ್ಟಿ ಮಗು! ರೊಮ್ಯಾನ್ಸು ಮಗು ಮತ್ತು ಮದ್ವೆ, ಮದ್ವೆಗೂ ಮುನ್ನ ಲವ್ವಲ್ಲಿ ಬೀಳೋದು, ಕಿಸ್... ಮದ್ವೆಗೂ ಮುನ್ನ ಲವ್ವಲ್ಲಿ ಬೀಳೋದು, ಕಿಸ್ ಬಕೇಟಿನಲ್ಲೇ ಸ್ನಾನ ಮಾಡೋದು, ಲೈಟಾಗಿ ರೊಮ್ಯಾನ್ಸಿನಲ್ಲಿ ಮುಳುಗೋದು ಇಂದು ದೊಡ್ಡ ಮಾತಲ್ಲವೇ ಅಲ್ಲ. ಭಾರತದಲ್ಲಿ ಈ ಪರಂಪರೆ ಹುಟ್ಟು ಹಾಕಿದ ಕ್ರೆಡಿಟ್ಟು ಸಲ್ಲಬೇಕಾಗಿರೋದು ಬಾಲಿವುಡ್‌ಗೆ ಅಂದರೂ ಯಾರೂ ಬೇಜಾರಾಗಲ್ಲ. ಇದೇ ತಾರೆಯರೀಗ ಒಂದು ಸ್ಟೆಪ್ಪು ಮುಂದೆ ಹೋಗಿದ್ದಾರೆ. ಮದ್ವೆಗೂ ಮುನ್ನ ಮಗು ಹೆರುವ ಆಸೆ ಅವರಿಗಂತೆ. ಅದೂ ಪಬ್ಲಿಕ್ಕಾಗಿಯೇ ಹೇಳಿಕೊಳ್ಳೋದು ಅವರಿಗೆ ಪಬ್ಲಿಸಿಟಿಯೂ ಹೌದು, ಲೈಫಿನ ಸಿಂಪ್ಲಿಸಿಟಿಯೂ ಹೌದಂತೆ. ಈಗ ವಿವಾಹಕ್ಕೂ ಮುನ್ನ ಮಗು ಹೆರುತ್ತೇನೆ ಎಂದು ಹರಕೆ ಹೊತ್ತವಳು ಶ್ರುತಿ ಹಾಸನ್ .ಅಪ್ಪ ಕಮಲ್ ಹಾಸನ್‌ರ ಪ್ರಭಾವದಿಂದಲೇ ಬಾಲಿವುಡ್‌ನಲ್ಲಿ ತಳವೂರಿದ ಈ ಬೆಣ್ಣೆ ಮುದ್ದೆ ಈಗ್ಯಾಕೋ ವಾತ್ಸಲ್ಯದ ಬಿಸಿಗೆ ಕರಗುತಿದೆ. ಅಪ್ಪ-ಅಮ್ಮನ ರೀತಿಯೇ ಮಗು ಹೆರುತ್ತೇನೆ ಎನ್ನುವ ಮೂಲಕ 'ಹಾಸನ್ ಮಾದರಿ'ಗೆ ಮರುಚಾಲನೆ ನೀಡುತ್ತಿದ್ದಾಳೆ. ಮದುವೆಗೆ ಮುನ್ನವೇ ಮಗು ಹೆತ್ತೂ ನನ್ನ ಅಪ್ಪ-ಅಮ್ಮ ಅತ್ಯುತ್ತಮ ದಂಪತಿ ಎನಿಸಿಕೊಂಡರು' ಎಂದು ಹೆಮ್ಮೆ ವ್ಯಕ್ತಪಡಿಸುವ ಶ್ರುತಿಗೆ ಈ ಆಸೆಯ ವಿಚಾರ ಮುಂದಿಡಲು ಮುಜುಗರ ಆಗಿಲ್ಲವಂತೆ. ಏಕೆಂದರೆ ಬಾಲಿವುಡ್ ಈ ಹಿಂದೆಯೇ ಇಂಥ ಪರಂಪರೆಗೆ ಹಾಲೆರೆದಿದೆ. ಮದ್ವೆಗೂ ಮುನ್ನ ಶ್ರೀದೇವಿ ತುಂಬು ಗರ್ಭಿಣಿ ಆಗಿದ್ದಳೆನ್ನುವುದು ಹರಿಶ್ಚಂದ್ರನೇ ಹೇಳಬೇಕಾದ ಸತ್ಯವೇನಲ್ಲ. ನಿರ್ಮಾಪಕ ಬೋನಿ ಕಪೂರ್‌ನ್ನು ಆಕೆ ಮದುವೆ ಆಗುವಾಗ ಮಾಧ್ಯಮಗಳು ಇಷ್ಟೊಂದು ಸಂಖ್ಯೆಯಲ್ಲಿದ್ದು ಸುದ್ದಿಯನ್ನೂ ಮಾಡಲಿಲ್ಲ ಬಿಡಿ. ಏಳು ತಿಂಗಳ ಗರ್ಭಿಣಿ ಆಗಿದ್ದ ಶ್ರೀದೇವಿಗೂ ಇದು ನಾಚಿಕೆಯ ವಿಚಾರವಾಗಿರಲಿಲ್ಲ. ಕೊರಳಿಗೆ ತಾಳಿ ಬೀಳುವ ಮುನ್ನವೇ ಗರ್ಭವತಿ ಆಗಿದ್ದ ಟಾಲಿವುಡ್ ನಟಿ ರೇಣು ದೇಶಾಯ, ನಟ ಪವನ್ ಕಲ್ಯಾಣ್ ಜೊತೆಗೆ ಬಿಂದಾಸ್ ಆಗಿ ಸಂಸಾರ ನಡೆಸುತ್ತಿದ್ದರು. ಇವರ ಮದುವೆಗೆ ಮಗುವೂ ಸಾಕ್ಷಿ ಆಗಿತ್ತು. ಹಿಂದಿ ನಟಿ ಮಹಿಮಾ ಚೌಧರಿ ಕಥೆಯೂ ಅಷ್ಟೇ. ಗರ್ಭಿಣಿ ಆಗಿ ಹಸೆಮಣೆ ಏರಿದ್ದು ಬೇಸರದ ವಿಚಾರವೇ ಆಗಲಿಲ್ಲ ಎನ್ನುವುದು ಇವತ್ತಿಗೂ ಮಹಿಮಾಳ ಮಾಮೂಲಿ ಡೈಲಾಗ್. ಅನೌಷ್ಕ ಶಂಕರ್ , ಬ್ರಿಟಿಷ್ ಸಿನಿಮಾ ನಿರ್ಮಾಪಕ ಜಿಯಾ ರೈಟ್‌ರನ್ನು ವರಿಸುವಾಗಲೂ ಹೊಟ್ಟೆಯಲ್ಲಿ ಮಗು ಇತ್ತು. ಆರು ತಿಂಗಳ ಗರ್ಭಿಣಿ ಆಗಿದ್ದ ಕೊಂಕಣಾ ಸೇನ್, ರಣವೀರ್ ಶೋರೆಯನ್ನು ಕೈಹಿಡಿಯುವಾಗ ಕೊಂಚ ಸಂಕೋಚಕ್ಕೆ ಗುರಿಯಾಗಿದ್ದಳೆನ್ನುವುದು ಆಕೆಯ ಆಲ್ಬಂ ಫೋಟೋ ನೋಡಿದಾಗ ಗೊತ್ತಾಗುತ್ತದೆ. ಬಾಯ್‌ಫ್ರೆಂಡ್ ಪೀಟರ್ ಜೊತೆ ಚರ್ಚಿನಲ್ಲಿ ಉಂಗುರ ಬದಲಿಸುವಾಗ ಸೆಲೀನಾ ಜೇಟ್ಲಿಯ ಗರ್ಭದಲ್ಲಿ ಅವಳಿ ಜವಳಿ ಮಕ್ಕಳಿದ್ದವು. ಶಕೀಲ ಲಡಕ ಅವರನ್ನು ಗುಟ್ಟಾಗಿ ಮದುವೆಯಾದ ಗರ್ಭಿಣಿ ಅಮೃತಾ ಅರೋರಾಗೆ ತಾನ್ಯಾವಾಗ ಮದುವೆ ಆಗ್ತೀನೋ ಎಂಬ ತಲೆಬಿಸಿ ಇತ್ತು. ಅದೇನೇ ಇರಲಿ...ಅವರದ್ದೆಲ್ಲ ಬೇರೇನೇ ಕಥೆ. ಆದರೆ ಶ್ರುತಿಯ ಈ ಹಾದಿ ಅವರ ಅಪ್ಪ -ಅಮ್ಮನದ್ದು. ಅಪ್ಪ-ಅಮ್ಮನ ಮದುವೆಗೆ ತಾನು ಹೇಗೆ ಸಾಕ್ಷಿಯೋ, ಹಾಗೆ ತನ್ನ ಮಗುವೂ ಈಕೆಯ ಮದುವೆಗೆ ಸಾಕ್ಷಿಯಾಗಲಿ ಎಂಬ ಪುಟ್ಟಾಸೆ. ಬದುಕಿವ ಶ್ರುತಿ ಮೀಟುವ ಬಗೆ ಬಲ್ಲವರೇ ಬಲ್ಲ ಅಂತ ತೆಪ್ಪಗಾಗೋದು ನಮ್ಮ ಸರದಿಯಷ್ಟೇ.