ಟಿ-20 ವಿಶ್ವಕಪ್: ಚಾಂಪಿಯನ್ ಇಂಗ್ಲೆಂಡ್ ಗೆ ಸಿಕ್ಕ ನಗದು ಬಹುಮಾನ ಎಷ್ಟು ಗೊತ್ತಾ? ಆಸ್ಟ್ರೇಲಿಯಾದಲ್ಲಿ ಭಾನುವಾರ ಮುಕ್ತಾಯವಾದ ಐಸಿಸಿ ಟಿ-20 ವಿಶ್ವಕಪ್ 2022 ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ 13.84 ಕೋಟಿ ರೂ. ಬಹುಮಾನ ಸಿಕ್ಕಿದೆ. ರನ್ನರ್ ಆಫ್ ಪಾಕಿಸ್ತಾನ ತಂಡ ರೂ. 7.4 ಕೋಟಿ ಪಡೆದಿದೆ. ನವದೆಹಲಿ: ಆಸ್ಟ್ರೇಲಿಯಾದಲ್ಲಿ ಭಾನುವಾರ ಮುಕ್ತಾಯವಾದ ಐಸಿಸಿ ಟಿ-20 ವಿಶ್ವಕಪ್ 2022 ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ 13.84 ಕೋಟಿ ರೂ. ಬಹುಮಾನ ಸಿಕ್ಕಿದೆ. ರನ್ನರ್ ಆಫ್ ಪಾಕಿಸ್ತಾನ ತಂಡ ರೂ. 7.4 ಕೋಟಿ ಪಡೆದಿದೆ. ಸೆಮಿಫೈನಲ್ ನಲ್ಲಿ ಸೋತ ಭಾರತ ತಂಡ 4.50 ಕೋಟಿ, ನ್ಯೂಜಿಲೆಂಡ್ 4.19 ಕೋಟಿ, ಆಸ್ಟ್ರೇಲಿಯಾ 1.53 ಕೋಟಿ, ದಕ್ಷಿಣ ಆಫ್ರಿಕಾ 1.20 ಕೋಟಿ, ಬಾಂಗ್ಲಾದೇಶ 1.20 ಕೋಟಿ, ಶ್ರೀಲಂಕಾ 1.85 ಕೋಟಿ ನಗದು ಬಹುಮಾನ ಪಡೆದುಕೊಂಡಿದೆ.ಇದನ್ನೂ ಓದಿ: T20 ವಿಶ್ವಕಪ್ 2022: ಪಂದ್ಯಾವಳಿಯ ಅತ್ಯುತ್ತಮ 11 ಆಟಗಾರರ ತಂಡ ಪ್ರಕಟ, ಭಾರತದ ಇಬ್ಬರಿಗೆ ಸ್ಥಾನ!ಇನ್ನೂ ವೆಸ್ಟ್ ಇಂಡೀಸ್ 64.40 ಲಕ್ಷ ರೂ. ಅಫ್ಘಾನಿಸ್ತಾನ 56.35 ಲಕ್ಷ ಮತ್ತು ಜಿಂಬಾಬ್ವೆ 88.50 ಲಕ್ಷ ರೂ. ಬಹುಮಾನ ಪಡೆದಿರುವುದಾಗಿ ವರದಿಯಾಗಿದೆ.