ಭಾರತ- ನ್ಯೂಜಿಲ್ಯಾಂಡ್ ಟಿ20 ಸರಣಿ: ಕೆಎಲ್ ರಾಹುಲ್ ಗೆ ನಾಯಕತ್ವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಈ ವರೆಗಿನ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ನ್ಯೂಜಿಲ್ಯಾಂಡ್-ಭಾರತ ಟಿ20 ಟೂರ್ನಮೆಂಟ್ ಗೆ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಈ ವರೆಗಿನ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ನ್ಯೂಜಿಲ್ಯಾಂಡ್-ಭಾರತ ಟಿ20 ಟೂರ್ನಮೆಂಟ್ ಗೆ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.ಬಬಲ್ ಜೀವನದಿಂದ ಬೇಸತ್ತಿರುವ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಮುಂದಿನ ಟೂರ್ನಮೆಂಟ್ ಗೆ ಕೆಎಲ್ ರಾಹುಲ್ ಗೆ ನಾಯಕತ್ವ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.ಈ ಬಗ್ಗೆ ಮಾಹಿತಿ ಇರುವ ಮೂಲಗಳು ಎಎನ್ಐ ಜೊತೆ ಮಾತನಾಡಿದ್ದು, ನಾಯಕತ್ವದ ವಿಷಯದಲ್ಲಿ ರಾಹುಲ್ ಮುಂಚೂಣಿಯಲ್ಲಿದ್ದಾರೆ. ಹಿರಿಯ ಆಟಾಗಾರರಿಗೆ ವಿಶ್ರಾಂತಿಯಲ್ಲಿರಲಿದ್ದಾರೆ. ಖಂಡಿತವಾಗಿಯೂ ಕೆಎಲ್ ರಾಹುಲ್ ಅವರು ಟಿ20 ತಂಡದ ಅವಿಭಾಜ್ಯ ಅಂಗ. ಅವರೇ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.ಈ ಬಾರಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ. ಆದರೆ ಕೋವಿಡ್-19 ನ ಶಿಷ್ಟಾಚಾರಗಳನ್ನು ಪಾಲಿಸಬೇಕು. ಈ ಬಾರಿ ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಅನುಮತಿ ನೀಡುತ್ತೇವೆ. ಆದರೆ ಪೂರ್ಣ ಪ್ರಮಾಣದಲ್ಲಿ ಅಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಕುಳಿತು ಯೋಜನೆ ರೂಪಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.ತಂಡದ ಹಲವಾರು ಆಟಗಾರರು ವಿಶ್ರಾಂತಿಯ ಬಗ್ಗೆ ಮಾತನಾಡಿದ್ದಾರೆ. ಕಿವೀಸ್ ವಿರುದ್ಧದ ಸೋಲಿನ ನಂತರ ಜಸ್ಪ್ರೀತ್ ಬೂಮ್ರಾ ಈ ಬಗ್ಗೆ ಮಾತನಾಡಿದ್ದು, ಕೆಲವೊಮ್ಮೆ ವಿಶ್ರಾಂತಿ ಬೇಕೆನಿಸುತ್ತದೆ. ಕುಟುಂಬದ ಅನುಪಸ್ಥಿತಿ ಕಾಡುತ್ತದೆ. ಕುಟುಂಬದಿಂದ ದೂರವಿದ್ದು 6 ತಿಂಗಳಾಗಿದೆ. ಅವೆಲ್ಲವೂ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕ್ರೀಡಾಂಗಣದಲ್ಲಿರುತ್ತೀರಿ. ಆಗ ಅವುಗಳ ಬಗ್ಗೆ ಗಮನ ಹೋಗುವುದಿಲ್ಲ. ಯಾವುದನ್ನೂ ನಿಯಂತ್ರಿಸುವುದಿಲ್ಲ ಎಂದು ಬೂಮ್ರಾ ಹೇಳಿದ್ದಾರೆ.ನ್ಯೂಜಿಲ್ಯಾಂಡ್-ಭಾರತ ಟಿ20 ಸರಣಿಯ ನಂತರ ಎರಡು ಟೆಸ್ಟ್ ಪಂದ್ಯಗಳಿದ್ದು. ಟಿ20 ಪಂದ್ಯಗಳು ನ.17 ರಂದು ಜೈಪುರದಲ್ಲಿ, ನ.19 ರಂದು ರಾಂಚಿ ಹಾಗೂ ನ.21 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಟೆಸ್ಟ್ ಪಂದ್ಯಗಳು ಕಾನ್ಪುರ (ನ.25-29) ಹಾಗೂ ಮುಂಬೈ (ಡಿ.3-7) ರಂದು ನಡೆಯಲಿದೆ.