ಏಷ್ಯಾ ಕಪ್ ಟಿ20 ಟೂರ್ನಿಗೆ ಮುನ್ನ ಭಾರತ ತಂಡಕ್ಕೆ ಆಘಾತ: ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಗೆ ಕೊರೋನಾ ಪಾಸಿಟಿವ್ ಯುನೈಟೆಡ್ ಅರಬ್ ಎಮಿರೇಟ್ಸ್ ()ಯಲ್ಲಿ ಏಷ್ಯಾ ಕಪ್ ಟಿ20 ಟೂರ್ನಿಯ ಭಾರತದ ಆರಂಭಿಕ ಅಭಿಯಾನಕ್ಕೆ ಮುನ್ನ ತಂಡಕ್ಕೆ ಭಾರೀ ಹಿನ್ನಡೆ ಕಂಡು ಬಂದಿದ್ದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಮುಂಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ()ಯಲ್ಲಿ ಏಷ್ಯಾ ಕಪ್ ಟಿ20 ಟೂರ್ನಿಯ ಭಾರತದ ಆರಂಭಿಕ ಅಭಿಯಾನಕ್ಕೆ ಮುನ್ನ ತಂಡಕ್ಕೆ ಭಾರೀ ಹಿನ್ನಡೆ ಕಂಡು ಬಂದಿದ್ದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ.ಇತ್ತೀಚೆಗೆ ಮುಗಿದ ಏಕದಿನ ಅಂತಾರಾಷ್ಟ್ರೀಯ ಸರಣಿಯ ಮೂರು ಪಂದ್ಯಗಳಿಗೆ ಜಿಂಬಾಬ್ವೆಗೆ ರಾಹುಲ್ ದ್ರಾವಿಡ್ ಅವರು ಹೋಗಿರಲಿಲ್ಲ. ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿಯಿಂದಾಗಿ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಸೇರಿದಂತೆ ಕೋಚಿಂಗ್ ಸಿಬ್ಬಂದಿಗೆ ಹಿರಿಯ ಆಯ್ಕೆ ಸಮಿತಿಯು ವಿಶ್ರಾಂತಿ ನೀಡಿತ್ತು. ಕೆಎಸ್ ರಾಹುಲ್ ನೇತೃತ್ವದ ತಂಡ 3-0 ಅಂತರದಿಂದ ಗೆದ್ದುಕೊಂಡಿತ್ತು.ಭಾರತ ತಂಡವು ಇದೇ 28 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಏಷ್ಯಾಕಪ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಕಳೆದ ವರ್ಷ ಯುಎಇಯಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್‌ನಲ್ಲಿ ಬಾಬರ್ ಅಜಮ್ ತಂಡದ ವಿರುದ್ಧ 10 ವಿಕೆಟ್‌ಗಳ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಇದಿರು ನೋಡುತ್ತಿದೆ. ಇದನ್ನೂ ಓದಿ: ಮೂರನೇ ಏಕದಿನ ಪಂದ್ಯ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು; ಸರಣಿ ವೈಟ್ ವಾಶ್ರಾಹುಲ್ ದ್ರಾವಿಡ್ ನಿರ್ಣಾಯಕ ಆರಂಭಿಕ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳುತ್ತಾರೆಯೇ ಅಥವಾ ಭಾರತೀಯ ಕ್ರಿಕೆಟ್ ಮಂಡಳಿಯ ವೈದ್ಯಕೀಯ ಸಿಬ್ಬಂದಿಯಿಂದ ಸಂಪೂರ್ಣ ಸ್ಪಷ್ಟೀಕರಣವನ್ನು ಪಡೆದ ನಂತರ ಯುಎಇಗೆ ಪ್ರಯಾಣಿಸುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ () ರಾಹುಲ್ ದ್ರಾವಿಡ್ ಅವರ ಕೋವಿಡ್-ಪಾಸಿಟಿವ್ ಸ್ಥಿತಿಗತಿ ಬಗ್ಗೆ ದೃಢಪಡಿಸಿಲ್ಲ.