2023: ಗುಜರಾತ್ ವಿರುದ್ಧ ಯುಪಿ ವಾರಿಯರ್ಸ್ ಗೆ 3 ವಿಕೆಟ್ ಗಳ ರೋಚಕ ಗೆಲುವು ನವಿ ಮುಂಬೈ ನ ಡಿವೈ ಪಾಟೀಲ್ ಸ್ಟೇಡಿಯಂ ನಲ್ಲಿ ನಡೆದ ಡಬ್ಲ್ಯುಪಿಎಲ್ ನ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ 3 ವಿಕೆಟ್ ಗಳ ಅಂತರದಿಂದ ಗೆದ್ದಿದೆ. ಮುಂಬೈ: ನವಿ ಮುಂಬೈ ನ ಡಿವೈ ಪಾಟೀಲ್ ಸ್ಟೇಡಿಯಂ ನಲ್ಲಿ ನಡೆದ ಡಬ್ಲ್ಯುಪಿಎಲ್ ನ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ 3 ವಿಕೆಟ್ ಗಳ ಅಂತರದಿಂದ ಗೆದ್ದಿದೆ.ಗುಜರಾತ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿತ್ತು. ಉತ್ತರ ಪ್ರದೇಶ ತಂಡ 19.5 ಓವರ್ ಗಳಲ್ಲಿ ಜಯ ಗಳಿಸಿತು. ಉತ್ತರ ಪ್ರದೇಶ ತಂಡದ ಪರ ಆಡಿದ ಆಲ್ ರೌಂಡರ್ ಗ್ರೇಸ್ ಹ್ಯಾರಿಸ್ (ಆಸ್ಟ್ರೇಲಿಯಾ ತಂಡ) ಗೆಲುವಿನ ಸಿಕ್ಸರ್ ಬಾರಿಸಿ 59 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಟಿ20 ಲೀಗ್‌ ನಲ್ಲಿ ಗುಜರಾತ್ ತಂಡದ ಸತತ 2 ನೇ ಸೋಲು ಇದಾಗಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 143 ರನ್‌ಗಳಿಂದ ಸೋಲು ಕಂಡಿತ್ತು. ಗುಜರಾತ್ ಪರ ಆರಂಭಿಕ ಆಟಗಾರ್ತಿ ಎಸ್ ಮೇಘನಾ 24 ರನ್ ಗಳಿಸಿದರೆ, ಹರ್ಲೀನ್ ಡಿಯೋಲ್ 46 ರನ್ ಗಳ ಉತ್ತಮ ಇನ್ನಿಂಗ್ಸ್ ಆಡಿದರು. ಇದನ್ನೂ ಓದಿ: ಮಹಿಳಾ ಐಪಿಎಲ್: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಆರ್ ಸಿಬಿ ವನಿತೆಯರು, ಡೆಲ್ಲಿ ಕ್ಯಾಪಿಟಲ್ಸ್ ಗೆ 60 ರನ್ ಗಳ ಭರ್ಜರಿ ಜಯರೋಚಕ ಪಂದ್ಯದಲ್ಲಿ ಕೊನೆಯ 3 ಓವರ್ ಗಳಲ್ಲಿ ಉತ್ತರ ಪ್ರದೇಶದ ಗೆಲುವಿಗೆ 53 ರನ್ ಗಳ ಅಗತ್ಯವಿತ್ತು. ಕಿಮ್ ಗಾರ್ತ್ ಅವರು ಬೌಲಿಂಗ್ ಮಾಡಿದ 18ನೇ ಓವರ್ ನಲ್ಲಿ ಹ್ಯಾರಿಸ್ ಸತತ 3 ಬೌಂಡರಿಗಳನ್ನು ಬಾರಿಸಿ ಉತ್ತರ ಪ್ರದೇಶ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಕೊನೆಯ ಓವರ್‌ನಲ್ಲಿ ತಂಡಕ್ಕೆ 19 ರನ್‌ಗಳ ಅಗತ್ಯವಿತ್ತು. ಹ್ಯಾರಿಸ್ ಸದರ್ ಲ್ಯಾಂಡ್ ಓವರ್ ನ ಮೊದಲ ಎಸೆತದಲ್ಲಿ ಸಿಕ್ಸರ್ ಭಾರಿಸಿದರು. 5ನೇ ಎಸೆತದಲ್ಲಿ ಹ್ಯಾರಿಸ್ ಮತ್ತೆ ಚೆಂಡನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡ ಗೆಲುವಿನ ಸಂಭ್ರಮಾಚರಣೆ ಮಾಡುವಂತೆ ಮಾಡಿದರು.