ಇರ್ಫಾನ್ ಪಠಾಣ್ ನಿವಾಸದಲ್ಲಿ ಅಫ್ಘಾನ್ ಕ್ರಿಕೆಟ್ ತಂಡಕ್ಕೆ ಔತಣಕೂಟ! ವಿಡಿಯೋ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಫ್ಘಾನಿಸ್ತಾನದ ಕ್ರಿಕೆಟ್ ತಂಡಕ್ಕೆ ಔತಣಕೂಟ ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ. ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಫ್ಘಾನಿಸ್ತಾನದ ಕ್ರಿಕೆಟ್ ತಂಡಕ್ಕೆ ಔತಣಕೂಟ ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ. ಆಸೀಸ್ ವಿರುದ್ಧದ ಪಂದ್ಯಕ್ಕಾಗಿ ಮುಂಬೈಗೆ ಆಗಮಿಸಿದ ಅಫ್ಘಾನ್ ಆಟಗಾರರಿಗೆ ಇರ್ಫಾನ್ ಪಠಾಣ್, ತಮ್ಮ ನಿವಾಸದಲ್ಲಿ ಏರ್ಪಡಿಸಿದ ಭೋಜನ ಕೂಟದಲ್ಲಿ ರಶೀದ್ ಖಾನ್, ನವೀನ್ ಉಕ್ ಹಕ್ ಅವರಂತಹ ಸ್ಟಾರ್ ಆಟಗಾರರು ಪಾಲ್ಗೊಂಡು ಬಗೆ ಬಗೆಯ ಖಾದ್ಯ ಸವಿದಿದ್ದಾರೆ.ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಮೊದಲ ಅಫ್ಘಾನ್ ಬ್ಯಾಟ್ಸ್‌ಮನ್ ಇಬ್ರಾಹಿಂ ಜದ್ರಾನ್! ಇರ್ಪಾನ್ ಪಠಾಣ್ ಹೇಳಿದ್ದು ಹೀಗೆಈ ಸಂದರ್ಭದಲ್ಲಿ ಇರ್ಫಾನ್ ಪಠಾಣ್ ಅವರ ಸಹೋದರ ಯೂಸುಫ್ ಪಠಾಣ್, ಗಾಯಕ ಅದ್ನಾನ್ ಸಾಮಿ, ಹಿರಿಯ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮುಂತಾದ ಪ್ರಮುಖ ವ್ಯಕ್ತಿಗಳು ಕೂಡಾ ಉಪಸ್ಥಿತರಿರುವ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ. (@)2023ರ ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಅಫ್ಘಾನಿಸ್ತಾನದ ಬೆಂಬಲಕ್ಕೆ ನಿಂತಿರುವ ಇರ್ಫಾನ್ ಪಠಾಣ್, ಇತ್ತೀಚಿಗೆ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಪಾಕ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಅಫ್ಘಾನಿಸ್ತಾದ ಬ್ಯಾಟರ್ ರಶೀದ್ ಖಾನ್ ಅವರೊಂದಿಗೆ ಪಠಾಣ್ ಭರ್ಜರಿ ಡ್ಯಾನ್ಸ್ ಮಾಡುವ ವಿಡಿಯೋ ಭಾರಿ ವೈರಲ್ ಆಗಿತ್ತು. , . # # ../hoqTZiVlbFಶ್ರೀಲಂಕಾ ಹಾಗೂ ನೆದರ್ ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲೂ ಅಫ್ಘಾನಿಸ್ತಾನ ಗೆಲುವು ಸಾಧಿಸಿದ ಬಳಿಕ ಪಠಾಣ್ ಡ್ಯಾನ್ಸ್ ಮಾಡಿದ್ದರು.