ಭಾರತ-ಅಫ್ಘಾನಿಸ್ತಾನ ಪಂದ್ಯದ ವೇಳೆ ಮೈದಾನದಲ್ಲೇ ಕೈ-ಕೈ ಮಿಲಾಯಿಸಿದ ಫ್ಯಾನ್ಸ್ ಐಪಿಎಲ್ ನಲ್ಲಿ ಶುರುವಾಗಿದ್ದ ವಿರಾಚ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಜಗಳ ಕೊನೆಗೂ ವಿಶ್ವಕಪ್ ಟೂರ್ನಿಯಲ್ಲಿ ಅಂತ್ಯವಾಗಿರುವಂತೆಯೇ ಇತ್ತ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಮಾತ್ರ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ನವದೆಹಲಿ: ಐಪಿಎಲ್ ನಲ್ಲಿ ಶುರುವಾಗಿದ್ದ ವಿರಾಚ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಜಗಳ ಕೊನೆಗೂ ವಿಶ್ವಕಪ್ ಟೂರ್ನಿಯಲ್ಲಿ ಅಂತ್ಯವಾಗಿರುವಂತೆಯೇ ಇತ್ತ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಮಾತ್ರ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ.ಹೌದು.. ಏಕದಿನ ವಿಶ್ವಕಪ್‌ ಟೂರ್ನಿಯ ( 2023) ಭಾರತ ಹಾಗೂ ಅಫಘಾನಿಸ್ತಾನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿದೆ. ../qFSm6dufCrಹಾಗೆಯೇ, ವಿರಾಟ್‌ ಕೊಹ್ಲಿ ( ) ಅಫಘಾನಿಸ್ತಾನದ ನವೀನ್‌ ಉಲ್‌ ಹಕ್‌ ಅವರು ಸಿಟ್ಟು, ಸೆಡವು ಮರೆತು ಒಂದಾಗಿದ್ದಾರೆ. ಆದರೆ, ಮೈದಾನದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಭಾರತದ ಕ್ರಿಕೆಟ್‌ ಅಭಿಮಾನಿಗಳು ( ) ಮಾತ್ರ ಹೊಡೆದಾಡಿಕೊಂಡಿದ್ದಾರೆ.ಇದನ್ನೂ ಓದಿ: ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ; ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಶತಕಭಾರತ-ಅಫಘಾನಿಸ್ತಾನ ಪಂದ್ಯದ ವೇಳೆ ಭಾರತದ ಕ್ರಿಕೆಟ್‌ ಅಭಿಮಾನಿಗಳ ಮಧ್ಯೆಯೇ ಜಗಳ ನಡೆದಿದೆ. ಕೆಲವರು ಭಾರತ ಕ್ರಿಕೆಟ್‌ ತಂಡದ ಜೆರ್ಸಿ ತೊಟ್ಟಿದ್ದು, ಇನ್ನೂ ಕೆಲವರು ಸಾಮಾನ್ಯ ಉಡುಪಿನಲ್ಲಿದ್ದಾರೆ. ಎರಡು ಗುಂಪುಗಳ ಮಧ್ಯೆ ಮೊದಲು ವಾಗ್ವಾದ ಆರಂಭವಾಗಿದೆ. ಇದಾದ ಬಳಿಕ ಕೈ ಕೈ ಮಿಲಾಯಿಸಿಕೊಳ್ಳುವಷ್ಟರ ಮಟ್ಟಿಗೆ ಜಗಳ ತಾರಕಕ್ಕೇರಿದೆ.ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಜನರಿಂದ ಟೀಕೆಗಳು ವ್ಯಕ್ತವಾಗಿವೆ. ಮೈದಾನದಲ್ಲಿ ಪ್ರತಿಸ್ಪರ್ಧಿ ಆಟಗಾರರೊಂದಿಗೇ ಭಾರತದ ಆಟಗಾರರು ಸೌಹಾರ್ದತಯುತವಾಗಿ ಇರುವಾಗ, ನಾವೇ ಹೀಗೆ ಕಿತ್ತಾಡಿಕೊಂಡರೆ ಹೇಗೆ ಎಂದು ಕಿಡಿಕಾರಿದ್ದಾರೆ.