ಟಿ20 ರ‍್ಯಾಂಕಿಂಗ್‌: ನಾಲ್ಕನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ, ಆರನೇ ಸ್ಥಾನ ಉಳಿಸಿಕೊಂಡ ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅವರು ಬುಧವಾರ ಬಿಡುಗಡೆಯಾದ ಐಸಿಸಿ ಟಿ 20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರೀ ಜಿಗಿತ ಕಂಡಿದ್ದಾರೆ. ದುಬೈ: ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅವರು ಬುಧವಾರ ಬಿಡುಗಡೆಯಾದ ಐಸಿಸಿ ಟಿ 20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರೀ ಜಿಗಿತ ಕಂಡಿದ್ದಾರೆ.ಮೂರು ಪಂದ್ಯಗಳ ಸರಣಿಯಲ್ಲಿ 153 ರನ್ ಗಳಿಸುವ ಮೂಲಕ ಡಿ ಕಾಕ್ ವೃತ್ತಿಜೀವನದ ಅತ್ಯುತ್ತಮ ಎಂಟನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಮಂಗಳವಾರ ನಡೆದ ಮೂರನೇ ಮತ್ತು ಕೊನೆಯ ಟಿ 20 ಪಂದ್ಯದಲ್ಲಿ, ಅವರು 46 ಎಸೆತಗಳಲ್ಲಿ 59 ರನ್ ಗಳಿಸಿ ಅಜೇಯ ಅರ್ಧಶತಕ ಬಾರಿಸಿದರು ಮತ್ತು ತಂಡಕ್ಕೆ 10 ವಿಕೆಟ್ ಗಳ ಗೆಲುವಿನ ಮಾಲೆ ತೊಡಿಸಿದರು. ಏಕದಿನ ಮತ್ತು ಟೆಸ್ಟ್‌ಗಳಲ್ಲಿ ಅವರ ವೃತ್ತಿಜೀವನದ ಅತ್ಯುತ್ತಮ ಸ್ಥಾನಗಳು ಕ್ರಮವಾಗಿ ಮೂರು ಮತ್ತು ಆರನೆಯ ಸ್ಥಾನದಲ್ಲಿದ್ದರೂ. ಡಿ ಕಾಕ್ ಟಿ 20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ 10 ರಲ್ಲಿ ಪ್ರವೇಶಿಸಿದ್ದು ಇದೇ ಮೊದಲು.ಇದನ್ನು ಓದಿ: ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ಟೀಂ ಇಂಡಿಯಾ ನಾಯಕರಾಗಿ ಇರ್ತಾರೆ: ಬಿಸಿಸಿಐ ಸ್ಪಷ್ಟನೆಏಡನ್ ಮಾರ್ಕ್ರಮ್, ಶ್ರೀಲಂಕಾದ ಕುಶಾಲ್ ಪೆರೇರಾ ಮತ್ತು ನ್ಯೂಜಿಲ್ಯಾಂಡ್‌ನ ಟಾಮ್ ಲಾಥಮ್ ಮತ್ತು ಫಿನ್ ಅಲೆನ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದಾರೆ. ಮಾರ್ಕ್ರಮ್ 12 ಸ್ಥಾನ ಜಿಗಿದು 11ನೇ ಸ್ಥಾನಕ್ಕೆ, ಪೆರೇರಾ 10 ಸ್ಥಾನ ಜಿಗಿದು 38ನೇ ಸ್ಥಾನಕ್ಕೆ, ಲಾಥಮ್ 22 ಸ್ಥಾನ ಜಿಗಿದು 44ನೇ ಸ್ಥಾನಕ್ಕೆ ಮತ್ತು ಅಲೆನ್ 23 ಸ್ಥಾನ ಜಿಗಿದು 66ನೇ ಸ್ಥಾನಕ್ಕೆ ಏರಿದ್ದಾರೆ.ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದು, ಕೆ.ಎಲ್.ರಾಹುಲ್ ಅವರು ಆರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದರೆ ಭಾರತದ ಯಾವುದೇ ಬೌಲರ್‌ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ.ಬ್ಯಾಟ್ಸ್‌ಮನ್‌ಗಳ ವಿಭಾಗದ ಅಗ್ರ ಏಳು ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂಗ್ಲೆಂಡ್‌ನ ಡೇವಿಡ್‌ ಮಲಾನ್‌ ಮೊದಲನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೌಲರ್‌ಗಳ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ತಬ್ರೇಜ್ ಶಂಸಿ ಅಗ್ರಸ್ಥಾನದಲ್ಲಿದ್ದರೆ, ಶ್ರೀಲಂಕಾದ ವನಿಂದು ಹಸರಂಗ ಮತ್ತು ಅಫ್ಗಾನಿಸ್ತಾನದ ರಶೀದ್ ಖಾನ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿದ್ದಾರೆ.ಭಾರತದ ವೇಗಿ ಭುವನೇಶ್ವರ್ ಕುಮಾರ್‌ 12ನೇ ಮತ್ತು ಆಫ್‌ಸ್ಪಿನ್ನರ್‌ ವಾಷಿಂಗ್ಟನ್ ಸುಂದರ್‌ 18ನೇ ಸ್ಥಾನದಲ್ಲಿದ್ದಾರೆ. ಯಜುವೇಂದ್ರ ಚಾಹಲ್ 25ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.