3ನೇ ಏಕದಿನ ಪಂದ್ಯ: ಸುದೀರ್ಘ ಕಾಲದ ಬಳಿಕ ಟೀಂ ಇಂಡಿಯಾಗೆ ಕಮ್ ಬ್ಯಾಕ್: ದಾಖಲೆ ಬರೆದ ಉನಾದ್ಕತ್ ವಿಂಡೀಸ್ ಪ್ರವಾಸದಲ್ಲಿ ವೇಗಿ ಉಮ್ರಾನ್ ಮಲಿಕ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಜಯದೇವ್ ಉನಾದ್ಕತ್ ತನ್ಮ ಕಮ್ ಬ್ಯಾಕ್ ಮೂಲಕವೇ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಟ್ರಿನಿಡಾಡ್: ವಿಂಡೀಸ್ ಪ್ರವಾಸದಲ್ಲಿ ವೇಗಿ ಉಮ್ರಾನ್ ಮಲಿಕ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಜಯದೇವ್ ಉನಾದ್ಕತ್ ತನ್ಮ ಕಮ್ ಬ್ಯಾಕ್ ಮೂಲಕವೇ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.ಹೌದು.. ಭಾರತದ ವೇಗಿ ಜಯದೇವ್ ಉನಾದ್ಕತ್ ಬರೊಬ್ಬರಿ 3,539 ದಿನಗಳ ಬಳಿಕ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ್ದು ಆ ಮೂಲಕ 27 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ. 2013ರ ಬಳಿಕ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದ ಉನಾದ್ಕತ್, 2 ಏಕದಿನ ಪಂದ್ಯಗಳ ನಡುವೆ ಸುದೀರ್ಘ ಅಂತರ ಕಾಯ್ದುಕೊಂಡ ಭಾರತದ ಮೊದಲ ಆಟಗಾರನೆಂಬ ದಾಖಲೆಗೆ ಪಾತ್ರರಾಗಿದ್ದಾರೆ.ಇದನ್ನೂ ಓದಿ: 3ನೇ ಏಕದಿನ ಪಂದ್ಯ: ವಿಂಡೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್, ಒಂದೇ ಒಂದು ಶತಕವಿಲ್ಲ.. ಆದರೂ ಹಲವು ದಾಖಲೆ ನಿರ್ಮಾಣ!ಉನಾದ್ಕತ್ಗೂ ಮುನ್ನ ಭಾರತದ ಮಾಜಿ ಆಟಗಾರ ರಾಬಿನ್ ಸಿಂಗ್ ( ) 2 ಏಕದಿನ ಪಂದ್ಯಗಳ ನಡುವೆ 7 ವರ್ಷ, 230 ದಿನಗಳ ಅಂತರದೊಂದಿಗೆ ಈ ದಾಖಲೆ ಹೊಂದಿದ್ದರು. ಆದರೀಗ ಉನದ್ಕತ್, 9 ವರ್ಷ 210 ದಿನಗಳ ಬಳಿಕ ಏಕದಿನ ಪಂದ್ಯ ಆಡಿದ್ದು, ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, ಆಡಿದ 2 ಏಕದಿನ ಪಂದ್ಯಗಳ ನಡುವೆ 6 ವರ್ಷ, 160 ದಿನಗಳ ಅಂತರವಿದ್ದು, ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಏಪ್ರಿಲ್ 2003ರಲ್ಲಿ ಕೊನೆ ಏಕದಿನ ಪಂದ್ಯವನ್ನಾಡಿದ್ದ ಅಮಿತ್ ಮಿಶ್ರಾ, 2009ರಲ್ಲಿ ಮತ್ತೆ ಏಕದಿನದಲ್ಲಿ ಅವಕಾಶ ಪಡೆದಿದ್ದರು. 196 (1998-2003) 192 (2013-23) * 191 (2004-10) 180 (2003-09) 162 (2008-14)