2 ಹೊಸ ಐಪಿಎಲ್ ತಂಡಗಳ ಸೇರ್ಪಡೆ: ಅಹಮದಾಬಾದ್, ಲಖನೌ ತಂಡಗಳ ಹರಾಜಿನಿಂದ 12,960 ಕೋಟಿ ರೂ. ಸಂಗ್ರಹ ಇವೆರಡೂ ಹೊಸ ಐಪಿಎಲ್ ತಂಡಗಳ ಹರಾಜಿನಿಂದ ಬಿಸಿಸಿಐ 10,000 ಕೋಟಿ ರೂ. ಗಳಿಕೆಯ ಲೆಕ್ಕಾಚಾರದಲ್ಲಿತ್ತು. ದುಬೈ: ಕೋಲ್ಕತಾ ಮೂಲದ ಆರ್ ಪಿ ಎಸ್ ಜಿ ಉದ್ಯಮ ಸಂಸ್ಥೆಗಳ ಮಾಲೀಕ ಉದ್ಯಮಿ ಸಂಜೀವ್ ಗೋಯೆಂಕಾ ಅವರು ಲಖನೌ ಐಪಿಎಲ್ ತಂಡವನ್ನು ಖರೀದಿಸಿದ್ದಾರೆ. ಈ ಸಂಬಂಧ ಹರಾಜಿನಲ್ಲಿ ಪಾಲ್ಗೊಂಡ ಅವರು 7,090 ಕೋಟಿ ರೂ. ಮೊತ್ತಕ್ಕೆ ತಂಡವನ್ನು ಖರೀದಿಸಿದ್ದಾರೆ. ಇದನ್ನೂ ಓದಿ: ನೆಟ್ಟಿಗರಿಂದ ಅವಾಚ್ಯ ಶಬ್ದಗಳಿಂದ ನಿಂದನೆ; ವೇಗಿ ಮೊಹಮ್ಮದ್ ಬೆಂಬಲಕ್ಕೆ ನಿಂತ ಕ್ರಿಕೆಟಿಗರುಅಂತಾರಾಷ್ಟ್ರೀಯ ಹೂಡಿಕೆ ಸಂಸ್ಥೆ ಸಿವಿಸಿ ಕ್ಯಾಪಿಟಲ್ ಅಹಮದಾಬಾದ್ ಐಪಿಎಲ್ ತಂಡವನ್ನು 5,600 ಕೋಟಿ ರೂ. ಗಳಿಗೆ ಖರೀದಿಸಿದೆ.ಇದನ್ನೂ ಓದಿ: ಟಿ20 ವಿಶ್ವಕಪ್: ಪಾಕ್ ವಿರುದ್ಧ ಭಾರತದ ಸೋಲಿನ ಬಗ್ಗೆ ಇತರ ಆಟಗಾರರು ಹೇಳಿದ್ದೇನು?ಇವೆರಡೂ ಹೊಸ ತಂಡಗಳ ಐಪಿಎಲ್ ಹರಾಜಿನಿಂದ ಬಿಸಿಸಿಐ 10,000 ಕೋಟಿ ರೂ. ಗಳಿಕೆಯ ಲೆಕ್ಕಾಚಾರದಲ್ಲಿತ್ತು. ಆದರೆ ಅಚ್ಚರಿಯೆಂಬಂತೆ ಬಿಸಿಸಿಐ ಹಾಕಿಕೊಂಡಿದ್ದ ಗುರಿಯನ್ನೂ ಮೀರಿ 12,960 ಕೋಟಿ ರೂ. ಹರಾಜಿನಿಂದ ಸಂಗ್ರಹವಾಗಿದೆ.ಇದನ್ನೂ ಓದಿ: ಸೋಮವಾರಪೇಟೆ: ಭಾರತ- ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಣೆ ವೇಳೆ ಹೃದಯಾಘಾತದಿಂದ ಕ್ರಿಕೆಟ್ ಪ್ರೇಮಿ ಸಾವುಸಂಜೀವ್ ಗೋಯೆಂಕಾ ಅವರು ಈ ಹೀಂದೆ ರೈಸಿಂಗ್ ಪುಣೆ ಐಪಿಎಲ್ ತಂಡದ ಮಾಲೀಕರಾಗಿದ್ದರು. ಆ ಹಿನ್ನೆಲೆಯಲ್ಲಿ ಸಂಜೀವ್ ಗೋಯೆಂಕಾ ಹರಾಜು ಗೆಲ್ಲುವ ಮುನ್ಸೂಚನೆಯನ್ನು ಪರಿಣತರು ಈ ಹಿಂದೆಯೇ ವ್ಯಕ್ತಪಡಿಸಿದ್ದರುಇದನ್ನೂ ಓದಿ: ಟಿ20 ವಿಶ್ವಕಪ್ ನಲ್ಲಿ ಭಾರತದ ಭವಿಷ್ಯ: ಪ್ರತಿ ಪಂದ್ಯ ಗೆಲ್ಲಲೇಬೇಕಾ?; ಸೋತರೆ ಏನಾಗಲಿದೆ? ಫೈನಲ್ ಗೆ ಹೋಗುತ್ತಾ ಟೀಂ ಇಂಡಿಯಾ?ದೀಪಾವಳಿಯಲ್ಲಿ ಪಟಾಕಿ ನಿಷೇಧ ಹಿಂದೆ ಬೂಟಾಟಿಕೆ: ವೀರೇಂದ್ರ ಸೆಹ್ವಾಗ್ಅತಿಯಾದ ಆತ್ಮವಿಶ್ವಾಸ ಬೇಡ: ತಂಡಕ್ಕೆ ಪಾಕ್‌ ನಾಯಕ ಬಾಬರ್ ಆಜಂ ಎಚ್ಚರಿಕೆಬಿಸಿಸಿಐನ ಆ ವ್ಯಕ್ತಿಗೆ 'ಬುದ್ದು' ಪ್ರಶಸ್ತಿ ನೀಡಬೇಕು; ಪಾಕ್ ಜೊತೆ ಟೀಂ ಇಂಡಿಯಾ ಆಡಲೇಬಾರದು: ಸುಬ್ರಮಣಿಯನ್ ಸ್ವಾಮಿT20 : ಪಾಕ್ ವಿರುದ್ಧದ ಹೀನಾಯ ಸೋಲಿನ ನಂತರ ಟೀಂ ಇಂಡಿಯಾ ನಡೆಗೆ ಐಸಿಸಿ ಶ್ಲಾಘನೆ, ವಿಡಿಯೋಟಿ-20 ವಿಶ್ವಕಪ್; ಕೊಹ್ಲಿ ಪ್ರೆಸ್ ಕಾನ್ಫರೆನ್ಸ್; ಪಾಕ್ ಪತ್ರಕರ್ತನ ಬೆವರಿಳಿಸಿದ ವಿರಾಟ್