ಐಪಿಎಲ್ ನಲ್ಲಿ 4 ಸಾವಿರ ರನ್ ಗಳಿಸಿದ 4ನೇ ವಿದೇಶಿ ಆಟಗಾರ ಡುಪ್ಲೆಸಿಸ್ ಐಪಿಎಲ್ ನಲ್ಲಿ ಆರ್ ಸಿಬಿ ಆಟಗಾರ ಫಾಫ್ ಡುಪ್ಲೆಸಿಸ್ ಮಹತ್ವದ ಸಾಧನೆ ಮಾಡಿದ್ದು, ಮಿಲಿಯನ್ ಡಾಲರ್ ಟೂರ್ನಿಯಲ್ಲಿ 4 ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಜೈಪುರ: ಐಪಿಎಲ್ ನಲ್ಲಿ ಆರ್ ಸಿಬಿ ಆಟಗಾರ ಫಾಫ್ ಡುಪ್ಲೆಸಿಸ್ ಮಹತ್ವದ ಸಾಧನೆ ಮಾಡಿದ್ದು, ಮಿಲಿಯನ್ ಡಾಲರ್ ಟೂರ್ನಿಯಲ್ಲಿ 4 ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದಾರೆ.ಇಂದು ಜೈಪುರದಲ್ಲಿ ನಡೆಯುತ್ತಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ 44 ಎಸೆತಗಳಲ್ಲಿ 55 ರನ್ ಗಳಿಸಿದ್ದು ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ 4000 ರನ್ ಗಳಿಕೆ ಸಾಧನೆ ಮಾಡಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ 4 ಸಾವಿರ ರನ್ ಗಳಿಸಿದ 4ನೇ ವಿದೇಶಿ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.ಇದನ್ನೂ ಓದಿ: ಐಪಿಎಲ್ ನಲ್ಲಿ ಸ್ಫೋಟಕ ಬ್ಯಾಟಿಂಗ್: ಯಶಸ್ವಿ ಜೈಸ್ವಾಲ್ ಮೇಲೆ ಆಯ್ಕೆಗಾರರ ಕಣ್ಣು, ಶೀಘ್ರ ಭಾರತ ತಂಡಕ್ಕೆ: ರವಿಶಾಸ್ತ್ರಿಇದಕ್ಕೂ ಮೊದಲು ಡೇವಿಡ್ ವಾರ್ನರ್ (6265 ರನ್), ಎಬಿಡಿವಿಲಿಯರ್ಸ್ (5162 ರನ್) ಮತ್ತು ಕ್ರಿಸ್ ಗೇಯ್ಲ್ (4965 ರನ್) ಈ ಸಾಧನೆ ಮಾಡಿದ್ದಾರೆ. 4000- 6265 - 5162 - 4965 - 4008* -