'40 ಓವರ್, 458 ರನ್, 1 ಶತಕ, 3 ಅರ್ಧಶತಕ': ಭಾರತ-ಆಫ್ರಿಕಾ 2ನೇ ಟಿ20 ಪಂದ್ಯದಲ್ಲಿ ಹಲವು ದಾಖಲೆಗಳ ಪತನ ಭಾರತ ಮತ್ತು ದಕ್ಷಿಣಆಫ್ರಿಕಾ ನಡುವಿನ 2ನೇ ಟಿ20 ಪಂದ್ಯದಲ್ಲಿ ಭಾರತ 16 ರನ್ ಗಳ ವಿರೋಚಿತ ಜಯ ದಾಖಲಿಸಿದ್ದು, ಇದೇ ಒಂದು ಪಂದ್ಯ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದೆ. ಗುವಾಹತಿ: ಭಾರತ ಮತ್ತು ದಕ್ಷಿಣಆಫ್ರಿಕಾ ನಡುವಿನ 2ನೇ ಟಿ20 ಪಂದ್ಯದಲ್ಲಿ ಭಾರತ 16 ರನ್ ಗಳ ವಿರೋಚಿತ ಜಯ ದಾಖಲಿಸಿದ್ದು, ಇದೇ ಒಂದು ಪಂದ್ಯ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದೆ. ಹೌದು.. ಭಾರತ ನೀಡಿದ 238ರನ್ ಗಳ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ ಡೇವಿಡ್ ಮಿಲ್ಲರ್ (ಅಜೇಯ 106ರನ್) ಮತ್ತು ಕ್ವಿಂಟನ್ ಡಿಕಾಕ್ (ಅಜೇಯ 69) ಮುರಿಯದ ನಾಲ್ಕನೇ ವಿಶ್ವ ದಾಖಲೆಯ ಜೊತೆಯಾಟದ ನೆರವಿನಿಂದ ಭಾರತದ ವಿರೋಚಿತ ಪ್ರದರ್ಶನ ನೀಡಿತು. ಇದನ್ನೂ ಓದಿ: 2ನೇ ಟಿ20: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ವಿರೋಚಿತ ಜಯ, ಸರಣಿ ಕೈವಶವಿಶ್ವದಾಖಲೆಯ ಶತಕದ ಜೊತೆಯಾಟ ಈ ಪಂದ್ಯದಲ್ಲಿ ಈ ಜೋಡಿ 174 ರನ್ ಗಳ ವಿಶ್ವ ದಾಖಲೆಯ ಜೊತೆಯಾಟವಾಡಿತು. ಇದು ಟಿ20 ಕ್ರಿಕೆಟ್ ನಲ್ಲಿ 4 ಅಥವಾ ಅದಕ್ಕಿಂತ ಕೆಳ ಕ್ರಮಾಂಕದದಲ್ಲಿ ದಾಖಲಾದ ಗರಿಷ್ಠ ಜೊತೆಯಾಟ ಎಂಬ ಕೀರ್ತಿಗೆ ಭಾಜನವಾಗಿದೆ.174* & T20 teamಅಜೇಯ ಶತಕ, ಮಿಲ್ಲರ್ 2ನೇ ಆಟಗಾರ ಅಂತೆಯೇ ಈ ಪಂದ್ಯದಲ್ಲಿ ಆಫ್ರಿಕಾ ಪರ ಅಜೇಯ 106ರನ್ ಗಳಿಸಿದ ಮಿಲ್ಲರ್ ದಾಖಲೆ ನಿರ್ಮಿಸಿದ್ದು, ಬೃಹತ್ ಮೊತ್ತದ ಚೇಸಿಂಗ್ ವೇಳೆ ಅಜೇಯ ಶತಕ ಸಿಡಿಸಿದ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದಕ್ಕೂ ಮೊದಲು 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೆಎಲ್ ರಾಹುಲ್ ಅಜೇಯ 110 ರನ್ ಗಳಿಸಿದ್ದರು. ಅಂದಿನ ಬೃಹತ್ ಮೊತ್ತದ ಪಂದ್ಯದಲ್ಲಿ ಭಾರತ ಸೋತಿತ್ತು. T20Is 110* 2016 106* 2022ಇದನ್ನೂ ಓದಿ: 2ನೇ ಟಿ20: ಭಾರತ ತಂಡ ಬೃಹತ್ ಮೊತ್ತ, ಭರ್ಜರಿ ಬ್ಯಾಟಿಂಗ್ ಮೂಲಕ 2 ದಾಖಲೆ ನಿರ್ಮಿಸಿದ ಸೂರ್ಯಕುಮಾರ್ ಯಾದವ್ಡೆತ್ ಓವರ್ ನಲ್ಲಿ ಗರಿಷ್ಠ ಇನ್ನು ಈ ಪಂದ್ಯದ ಉಭಯ ಇನ್ನಿಂಗ್ಸ್ ನ ಡೆತ್ ಓವರ್ ನಲ್ಲಿ ದಾಖಲೆಯ ರನ್ ಗಳು ದಾಖಲಾಗಿದ್ದು, ಅಂದರೆ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ ತನ್ನ ಪಾಲಿನ ಡೆತ್ ಓವರ್ ನಲ್ಲಿ ಅಂದರೆ 16 ರಿಂದ 20ನೇ ಓವರ್ ವರೆಗೂ 82 ರನ್ ಪೇರಿಸಿದರೆ, ದಕ್ಷಿಣ ಆಫ್ರಿಕಾ ತಂಡ ಇದೇ ಅವಧಿಯಲ್ಲಿ 78 ರನ್ ಕಲೆ ಹಾಕಿತು. ಆ ಮೂಲಕ ಉಭಯ ತಂಡಗಳ ಡೆತ್ ಓವರ್ ಗಳಿಕೆ 160 ರನ್ ಗಳಾಗಿದ್ದು, ಆ ಮೂಲಕ ಈ ಪಂದ್ಯ ಟಿ20 ಕ್ರಿಕೆಟ್ ಇತಿಹಾಸದಲೇ ಡೆತ್ ಓವರ್ ನಲ್ಲಿ ಗರಿಷ್ಠ ರನ್ ದಾಖಲಾದ ಪಂದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ 2010ರಲ್ಲಿ ಪಾಕಿಸ್ತಾನ (73) ಮತ್ತು ಆಸ್ಚ್ರೇಲಿಯಾ (75) ತಂಡಗಳ ಪಂದ್ಯ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು. ಆ ಪಂದ್ಯದಲ್ಲಿ ಉಭಯ ತಂಡಗಳು ಡೆತ್ ಓವರ್ ನಲ್ಲಿ 148 ರನ್ ಕಲೆಹಾಕಿದ್ದವು. (16-20) T20I 160 (82) (78) 2022 148 (73) (75) 2010 145 (80) (65) 2007ಇದನ್ನೂ ಓದಿ: 2ನೇ ಟಿ20: ಬೃಹತ್ ಮೊತ್ತ ಪೇರಿಸಿದ ಭಾರತ, ದಾಖಲೆ ಬರೆದ ಕೊಹ್ಲಿ-ಸೂರ್ಯಕುಮಾರ್ ಯಾದವ್ ಜೋಡಿತವರಿನಲ್ಲಿ ಭಾರತಕ್ಕೆ ಮೊದಲ ಟಿ20 ಸರಣಿ ಜಯ ಇನ್ನು ಈ ಪಂದ್ಯದಲ್ಲಿ ವಿರೋಚಿತ ಜಯದ ಮೂಲಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಗೆಲುವಿನ ಬರವನ್ನು ನೀಗಿಸಿಕೊಂಡಿದೆ. ಭಾರತ ನೆಲದಲ್ಲಿ ಈ ವರೆಗೂ ಟೀಂ ಇಂಡಿಯಾ ಟಿ20 ಸರಣಿ ಜಯ ಕಂಡಿರಲಿಲ್ಲ. ಇಂದಿನ ಗೆಲುವಿನ ಮೂಲಕ ಭಾರತ ತಂಡ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ 3 ಟಿ20 ಸರಣಿಗಳು ನಡೆದಿದ್ದವು. ಈ ಪೈಕಿ 1 ಸರಣಿ ಸೋತಿದ್ದ ಭಾರತ, 2 ಸರಣಿಯಲ್ಲಿ ಸಮಬಲ ಸಾಧಿಸಿತ್ತು. T20I 2-0 2015 1-1 2019 2-2 2022 2-0* 2022ಇದನ್ನೂ ಓದಿ: 2ನೇ ಟಿ20: ಬೃಹತ್ ಮೊತ್ತ ಪೇರಿಸಿದ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವ ದಾಖಲೆ ನಿರ್ಮಾಣಕಳೆದ 7 ಸರಣಿಗಳಲ್ಲಿ ದಕ್ಷಿಣ ಆಫ್ರಿಕಾಗೆ ಮೊದಲ ದ್ವಿಪಕ್ಷೀಯ ಸರಣಿ ಸೋಲು ಇನ್ನು ಈ ಪಂದ್ಯದ ಸೋಲಿನ ಮೂಲಕ ದಕ್ಷಿಣ ಆಫ್ರಿಕಾ ತಂಡ ಸರಣಿ ಕೈ ಚೆಲ್ಲಿದ್ದು ಆ ಮೂಲಕ ತನ್ನದೇ ದಾಖಲೆಯ ಸರಪಳಿಯನ್ನು ಕಳಚಿಕೊಂಡಿದೆ. ದಕ್ಷಿಣ ಆಫ್ರಿಕಾ ತಂಡ ಕಳೆದ 7 ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳಲ್ಲಿ ಸೋಲು ಕಂಡಿರಲಿಲ್ಲ. ಆದರೆ ಭಾರತದ ವಿರುದ್ಧ ಟಿ20 ಸರಣಿಯಲ್ಲಿ ಸೋಲು ಕಾಣುವ ಮೂಲಕ ಈ ಗೆಲುವಿನ ನಾಗಾಲೋಟದ ಅಜೇಯ ಸರಪಳಿಯನ್ನು ಕಳಚಿಕೊಂಡಿದೆ.: series5ನೇ ಕ್ರಮಾಂದಲ್ಲಿ ಶತಕ ದಾಖಲೆ ನಿರ್ಮಿಸಿದ ಡೇವಿಡ್ ಮಿಲ್ಲರ್ ಇನ್ನು ಆಫ್ರಿಕಾ ಪರ 5ನೇ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದ ಡೇವಿಡ್ ಮಿಲ್ಲರ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 5 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿದ ಮತ್ತು ಗರಿಷ್ಟ ವೈಯುಕ್ತಿಕ ಗರಿಷ್ಛ ರನ್ ದಾಖಲಿಸಿದ ಜಗತ್ತಿನ ಮೊದಲ ಬ್ಯಾಟರ್ ಎಂಬ ಕೀರ್ತಿಗೂ ಮಿಲ್ಲರ್ ಭಾಜನರಾಗಿದ್ದಾರೆ. - T20I #5 101*(36) 2017 106*(47) 2022ಇದನ್ನೂ ಓದಿ: ಭಾರತ ದ.ಆಫ್ರಿಕಾ: ದಾಖಲೆ ಬರೆದ ರೋಹಿತ್-ರಾಹುಲ್ ಜೋಡಿಭಾರತದ ವಿರುದ್ಧ ಭರ್ಜರಿ ಜೊತೆಯಾಟ; ದಾಖಲೆ ಬರೆದ ಡೇವಿಡ್ ಮಿಲ್ಲರ್-ಡಿಕಾಕ್ ಜೋಡಿ ಅಂತೇಯ ಈ ಪಂದ್ಯದಲ್ಲಿ ಸೋಲಿನ ದವಡೆಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಭರ್ಜರಿ ಬ್ಯಾಟಿಂಗ್ ಮೂಲಕ ಗೆಲುವಿನ ತುದಿಗೆ ತಂದು ನಿಲ್ಲಿಸಿದ್ದ ಡೇವಿಡ್ ಮಿಲ್ಲರ್-ಡಿಕಾಕ್ ಜೋಡಿ ಕೂಡ ವಿಶ್ವ ದಾಖಲೆ ನಿರ್ಮಿಸಿದೆ. ಈ ಪಂದ್ಯದಲ್ಲಿ ಈ ಜೋಡಿ ಅಜೇಯ 154ರನ್ ಗಳ ಬೃಹತ್ ಜೊತೆಯಾಟವಾಡಿದ್ದು, ಇದು ಭಾರತದ ವಿರುದ್ಧ ದಾಖಲಾದ ಗರಿಷ್ಛ ರನ್ ಗಳ ಜೊತೆಯಾಟ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಹಿಂದೆ 2021ರಲ್ಲಿ ದುಬೈನಲ್ಲಿ ಪಾಕಿಸ್ತಾನದ ಬಾಬರ್ ಅಜಂ ಮತ್ತು ಮಹಮದ್ ರಿಜ್ವಾನ್ ಜೋಡಿ 152ರನ್ ಕಲೆಹಾಕಿತ್ತು. ಇದು ಭಾರತದ ವಿರುದ್ಧ ದಾಖಲಾದ ಈ ವರೆಗಿನ ಗರಿಷ್ಠ ರನ್ ಗಳ ಜೊತೆಯಾಟವಾಗಿತ್ತು. T20Is 154* - 2022 152* - 2021 133 - 2012 131* - 2022