ಕಟ್ಟಾ ಅಭಿಮಾನಿಗಳೇ... 'ಈ ಸಲ ಕಪ್ ನಮ್ದೆ ಅಲ್ಲ, ಈ ಸಲ ಕಪ್ ನಮ್ದು': ನಾಯಕಿ ಸ್ಮೃತಿ ಮಂದಾನ ಚೊಚ್ಚಲ ಕಪ್ ಗೆಲ್ಲುವ ಮೂಲಕ ನಾಯಕಿ ಸ್ಮೃತಿ ಮಂದಾನ ಅಭಿಮಾನಿಗಳ ಬಹು ವರ್ಷಗಳ ಐಪಿಎಲ್ ಟ್ರೋಫಿ ಬರ ನೀಗಿಸಿದ್ದಾರೆ. ನವದೆಹಲಿ: ಚೊಚ್ಚಲ ಕಪ್ ಗೆಲ್ಲುವ ಮೂಲಕ ನಾಯಕಿ ಸ್ಮೃತಿ ಮಂದಾನ ಅಭಿಮಾನಿಗಳ ಬಹು ವರ್ಷಗಳ ಐಪಿಎಲ್ ಟ್ರೋಫಿ ಬರ ನೀಗಿಸಿದ್ದಾರೆ.ಚಾಂಪಿಯನ್ ಟೋಫ್ರಿ ಎತ್ತಿ ಹಿಡಿದಿರುವ ಸ್ಮೃತಿ ಮಂದಾನ ಅವರು ಕಟ್ಟಾ ಅಭಿಮಾನಿಗಳೇ 'ಈ ಸಲ ಕಪ್ ನಮ್ದೆ ಅಲ್ಲ, ಈ ಸಲ ಕಪ್ ನಮ್ದು ಎಂದು ಹೇಳುವ ಮೂಲಕ ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದಾರೆ.ಈ ಪಂದ್ಯದಲ್ಲಿ ಸ್ಮೃತಿ ಮಂದಾನ 31 ರನ್ ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದ್ದರು. ನಂತರ ಸೋಫಿ ಡಿವೈನ್ 32 ರನ್ ಬಾರಿಸಿ ಔಟಾದರು. ಈ ವೇಳೆ ಬಂದ ಎಲ್ಲಿಸ್ ಪೇರಿ ಮತ್ತು ರಿಚ್ಚ ಘೋಷ್ ಅತ್ಯುತ್ತಮ ಬ್ಯಾಟಿಂಗ್ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಆರ್ ಸಿಬಿ ಮೂರು ಎಸೆತಗಳು ಬಾಕಿ ಇರುವಂತೆ 115 ರನ್ ಬಾರಿಸಿ ಗೆಲುವಿನ ನಗೆ ಬೀರಿತು. . - .../UnaWzQlV1o