ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಗೆ ಭಾರತ ತಂಡ ಪ್ರಕಟ: ಬ್ರುಮ್ರಾ ಇನ್, ಕೆಎಲ್ ರಾಹುಲ್ ಔಟ್! ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಪ್ರಕಟಿಸಲಾಗಿದ್ದು, ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಪ್ರಕಟಿಸಲಾಗಿದ್ದು, ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.ಈ ಕುರಿತು ಬಿಸಿಸಿಐ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ತಂಡಕ್ಕೆ ಜಸ್ ಪ್ರೀತ್ ಬುಮ್ರಾ ತಂಡಕ್ಕೆ ಪುನಾರಗಮನವಾಗಿದ್ದು, ಗಾಯದಿಂದ ಬಳಲುತ್ತಿರುವ ಕೆಎಲ್ ರಾಹುಲ್ ಮಾರ್ಚ್ 7 ರಂದು ಧರ್ಮಶಾಲಾದಲ್ಲಿ ಆರಂಭವಾಗಲಿರುವ ಅಂತಿಮ ಹಾಗೂ 5ನೇ ಪಂದ್ಯದಿಂದ ದೂರ ಉಳಿದಿದ್ದಾರೆ.ಏತನ್ಮಧ್ಯೆ, ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ಗೆ ವಿಶ್ರಾಂತಿ ಪಡೆದ ಉಪನಾಯಕ ಬುಮ್ರಾ ಅವರನ್ನು ಧರ್ಮಶಾಲಾ ಟೆಸ್ಟ್‌ಗೆ ಮತ್ತೆ ಬುಲಾವ್ ನೀಡಲಾಗಿದೆ. ಇತ್ತ ರನ್ ಗಳಿಸಲು ಹರಸಾಹಸ ಪಡುತ್ತಿರುವ ರಜತ್ ಪಾಟಿದಾರ್ ಅವರನ್ನು ತಂಡ ಉಳಿಸಿಕೊಂಡಿದೆ. ಇದು ಐದನೇ ಟೆಸ್ಟ್‌ನಲ್ಲಿ ದೇವದತ್ ಪಡಿಕ್ಕಲ್‌ಗೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ.ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸೋತ ನಂತರ ಭಾರತ ತಂಡ ಉತ್ತಮ ರೀತಿಯ ಕಮ್ ಬ್ಯಾಕ್ ಮಾಡಿದ್ದು, ಈಗಾಗಲೇ ಸತತ ಮೂರು ಪಂದ್ಯಗಳನ್ನು ಗೆದ್ದು ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕೈವಶಮಾಡಿಕೊಂಡಿದೆ.ಮಾರ್ಚ್ 2 ರಿಂದ ಮುಂಬೈ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ಪರ ಆಡಲು ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು. "ಅಗತ್ಯವಿದ್ದರೆ ಐದನೇ ಟೆಸ್ಟ್‌ಗಾಗಿ ದೇಶೀಯ ಪಂದ್ಯ ಮುಗಿದ ನಂತರ ಅವರು ಭಾರತ ತಂಡವನ್ನು ಸೇರಿಕೊಳ್ಳುತ್ತಾರೆ" ಎಂದು ಬಿಸಿಸಿಐ ಹೇಳಿದೆ. ಅಲ್ಲದೆ ಮೊಹಮ್ಮದ್ ಶಮಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಫೆಬ್ರವರಿ 26 ರಂದು ತಮ್ಮ ಬಲ ಹಿಮ್ಮಡಿ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಪುನರ್ವಸತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಶೀಘ್ರದಲ್ಲೇ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ತೆರಳಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.🚨 🚨#' 5th @ . 🔽 # ://./SO0RXjS2dK