ಮೊದಲ ಟಿ20: ಲಂಕಾಗೆ 163 ರನ್ ಗುರಿ ನೀಡಿದ ಟೀಂ ಇಂಡಿಯಾ ಅತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 162 ರನ್ ಪೇರಿಸಿದೆ. ವಾಂಖೆಡೆ(ಮುಂಬೈ): ಅತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 162 ರನ್ ಪೇರಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಪೇರಿಸಿದೆ. ಇದನ್ನೂ ಓದಿ: ಗಂಟೆಗೆ 161 ಕಿ.ಮಿ ವೇಗದಲ್ಲಿ ಬೌಲಿಂಗ್‌?; ಶೊಯೆಬ್ ಅಖ್ತರ್ ದಾಖಲೆ ಮುರಿಯುವ ಕುರಿತು ಭಾರತದ ವೇಗಿ ಉಮ್ರಾನ್ ಮಲ್ಲಿಕ್ ಹೇಳಿದ್ದೇನು?ಭಾರತ ಪರ ಇಶಾನ್ ಕಿಶನ್ 37, ಶುಭ್ಮನ್ ಗಿಲ್ 7, ಸೂರ್ಯಕುಮಾರ್ ಯಾದವ್ 7, ಸಂಜು ಸ್ಯಾಮ್ಸನ್ 5, ನಾಯಕ ಹಾರ್ದಿಕ್ ಪಾಂಡ್ಯ 29 ರನ್ ಸಿಡಿಸಿದ್ದರೆ ದೀಪಕ್ ಹೂಡಾ ಅಜೇಯ 41 ಮತ್ತು ಅಕ್ಷರ್ ಪಟೇಲ್ ಅಜೇಯ 31 ರನ್ ಪೇರಿಸಿದ್ದಾರೆ. ಲಂಕಾ ಪರ ಬೌಲಂಗ್ ದಿಲ್ಶನ್ ಮಧುಶಂಕ, ಮಹೇಶ್ ತೀಕ್ಷಣ, ಚಾಮಿಕಾ ಕರುಣಾರತ್ನೆ, ಧನಂಜಯ್ ಡಿ ಸಿಲ್ವ ಹಾಗೂ ವನಿಂದು ಹಸರಂಗ ಡಿ ಸಿಲ್ವ ತಲಾ 1 ವಿಕೆಟ್ ಪಡೆದಿದ್ದಾರೆ.