ಐಪಿಎಲ್ 2021: ಕೆಎಲ್ ರಾಹುಲ್ ಅಬ್ಬರದ ಬ್ಯಾಟಿಂಗ್, ಮುಂಬೈ ವಿರುದ್ಧ ಪಂಜಾಬ್ ಗೆ ಗೆಲುವು! ಸತತ ಸೋಲಿನಿಂದ ಕಂಗಾಲಾಗಿದ್ದ ಪಂಜಾಬ್ ಕಿಂಗ್ಸ್ ತಂಡ ಇದೀಗ ಮುಂಬೈ ವಿರುದ್ಧ 9 ವಿಕೆಟ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಚೆನ್ನೈ: ಸತತ ಸೋಲಿನಿಂದ ಕಂಗಾಲಾಗಿದ್ದ ಪಂಜಾಬ್ ಕಿಂಗ್ಸ್ ತಂಡ ಇದೀಗ ಮುಂಬೈ ವಿರುದ್ಧ 9 ವಿಕೆಟ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡದ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 131 ರನ್ ಪೇರಿಸಿತ್ತು. ಮುಂಬೈ ನೀಡಿದ 132 ರನ್ ಗಳ ಸುಲಭ ಗುರಿ ಬೆನ್ನಟ್ಟಿದ ಪಂಜಾಬ್ ಪರ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಮಾಡಿದ್ದು 60 ರನ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.ಮುಂಬೈ ಪರ ರೋಹಿತ್ ಶರ್ಮಾ 63, ಸೂರ್ಯಕುಮಾರ್ ಯಾದವ್ 33, ಮತ್ತು ಕೀರನ್ ಪೊಲಾರ್ಡ್ ಅಜೇಯ 16 ಬಾರಿಸಿದ್ದರು. ಪಂಜಾಬ್ ಪರ ಕೆಎಲ್ ರಾಹುಲ್ ಅಜೇಯ 60 ರನ್ ಹಾಗೂ ಕ್ರಿಸ್ ಗೇಯ್ಲ್ ಅಜೇಯ 43 ರನ್ ಬಾರಿಸಿ ಇನ್ನು 14 ಎಸೆತ ಬಾಕಿರುವಂತೆ ಗೆಲುವು ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಐದು ಪಂದ್ಯಗಳನ್ನಾಡಿರುವ ಪಂಜಾಬ್ ಎರಡಲ್ಲಿ ಗೆಲುವು ಸಾಧಿಸಿದೆ.