ಉದ್ದೇಶಪೂರ್ವಕವಾಗಿ ಬ್ಯಾಟ್ಸ್‌ಮನ್ ತಡೆದ ಬುಮ್ರಾಗೆ ಐಸಿಸಿ ಛೀಮಾರಿ! ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಛೀಮಾರಿ ಹಾಕಿದೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಓಲಿ ಪೋಪ್ ರನ್ ತೆಗೆದುಕೊಳ್ಳುವಾಗ ಉದ್ದೇಶಪೂರ್ವಕವಾಗಿ ಅವರನ್ನು ತಡೆಯಲು ಜಸ್ ಪ್ರೀತ್ ಬುಮ್ರಾ ಪ್ರಯತ್ನಿಸಿದರು. ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಛೀಮಾರಿ ಹಾಕಿದೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಓಲಿ ಪೋಪ್ ರನ್ ತೆಗೆದುಕೊಳ್ಳುವಾಗ ಉದ್ದೇಶಪೂರ್ವಕವಾಗಿ ಅವರನ್ನು ತಡೆಯಲು ಜಸ್ ಪ್ರೀತ್ ಬುಮ್ರಾ ಪ್ರಯತ್ನಿಸಿದರು. ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಹೊಸ ಋತುವಿನ ಅಡಿಯಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಅಧಿಕೃತವಾಗಿ ವಾಗ್ದಂಡನೆ ಮಾಡಲಾಗಿದೆ.ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.12 ಅನ್ನು ಉಲ್ಲಂಘಿಸಿದ್ದಕ್ಕಾಗಿ ಜಸ್ಪ್ರೀತ್ ಬುಮ್ರಾ ತಪ್ಪಿತಸ್ಥರೆಂದು ಕಂಡುಬಂದಿದೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ ನೀವು ಯಾವುದೇ ಆಟಗಾರ, ಅಂಪೈರ್, ಬೆಂಬಲ ಸಿಬ್ಬಂದಿ, ಮ್ಯಾಚ್ ರೆಫರಿ ಅಥವಾ ಯಾವುದೇ ಇತರ ಅಧಿಕಾರಿ ಅಥವಾ ವ್ಯಕ್ತಿಯೊಂದಿಗೆ ಅನುಚಿತ ದೈಹಿಕ ಸಂಪರ್ಕವನ್ನು ಮಾಡಬಾರದು. ಆದರೆ ಬುಮ್ರಾ ಇದನ್ನು ಮಾಡಿದ್ದರು. ಇದೇ ಅಲ್ಲದೆ ಬುಮ್ರಾ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ. ಇದು 24 ತಿಂಗಳ ಅವಧಿಯಲ್ಲಿ ಬುಮ್ರಾರ ಮೊದಲ ಅಪರಾಧವಾಗಿದೆ.ಇದನ್ನೂ ಓದಿ: ಮೊದಲ ಟೆಸ್ಟ್: ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ಮಂಡಿಯೂರಿದ ಟೀಂ ಇಂಡಿಯಾ, 28 ರನ್‌ಗಳಿಂದ ಹೀನಾಯ ಸೋಲು!ಯಾವಾಗ ಏನಾಯಿತು? ಈ ಘಟನೆಯು ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನ 81 ನೇ ಓವರ್‌ನಲ್ಲಿ ನಡೆಯಿತು. ಬುಮ್ರಾ ಉದ್ದೇಶಪೂರ್ವಕವಾಗಿ ಓಲಿ ಪೋಪ್ ಅವರು ರನ್ ತೆಗೆದುಕೊಳ್ಳದಂತೆ ಅಡ್ಡ ಬಂದಿದ್ದರು. ಈ ಮೂಲಕ ಅನುಚಿತ ದೈಹಿಕ ಸಂಪರ್ಕಕ್ಕೆ ಕಾರಣರಾದರು. ಜಸ್ಪ್ರೀತ್ ಬುಮ್ರಾ ಅವರು ತಪ್ಪನ್ನು ಒಪ್ಪಿಕೊಂಡರು. ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ರಿಚಿ ರಿಚರ್ಡ್ಸನ್ ಅವರು ಪ್ರಸ್ತಾಪಿಸಿದ ಶಿಕ್ಷೆಯನ್ನು ಒಪ್ಪಿಕೊಂಡರು. ಹೀಗಾಗಿ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ.ಆನ್ ಫೀಲ್ಡ್ ಅಂಪೈರ್ ಗಳಾದ ಪಾಲ್ ರೈಫಲ್ ಮತ್ತು ಕ್ರಿಸ್ ಗಫ್ನಿ, ಮೂರನೇ ಅಂಪೈರ್ ಮರೈಸ್ ಎರಾಸ್ಮಸ್ ಮತ್ತು ನಾಲ್ಕನೇ ಅಂಪೈರ್ ರೋಹನ್ ಪಂಡಿತ್ ಅವರು ಬುಮ್ರಾ ವಿರುದ್ಧ ಈ ಆರೋಪಗಳನ್ನು ಮಾಡಿದ್ದರು. ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಳು ಅಧಿಕೃತ ವಾಗ್ದಂಡನೆಯ ಕನಿಷ್ಠ ದಂಡವನ್ನು ಮತ್ತು ಆಟಗಾರನ ಪಂದ್ಯದ ಶುಲ್ಕದ 50 ಪ್ರತಿಶತದಷ್ಟು ದಂಡವನ್ನು ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ಹೊಂದಿರುತ್ತದೆ. ಆದರೆ, ಬುಮ್ರಾಗೆ ಛೀಮಾರಿ ಹಾಕಲಾಗಿದೆ. ಅವರ ಪಂದ್ಯ ಶುಲ್ಕವನ್ನು ಕಡಿತಗೊಳಿಸಲಾಗಿಲ್ಲ.