ಟಿ20 ವಿಶ್ವಕಪ್ ಸೆಮಿಫೈನಲ್ ಗೂ ಮೊದಲೇ ಟೀಂ ಇಂಡಿಯಾಗೆ ಡಬಲ್ ಶಾಕ್: ನೆಟ್ಸ್ ನಲ್ಲಿ ಕೊಹ್ಲಿ, ರೋಹಿತ್ ಶರ್ಮಾಗೆ ಗಾಯ! ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಟೀಂ ಇಂಡಿಯಾಗೆ ಡಬಲ್ ಆಘಾತ ಎದುರಾಗಿದ್ದು, ನೆಟ್ ಪ್ರಾಕ್ಚಿಸ್ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಟೀಂ ಇಂಡಿಯಾಗೆ ಡಬಲ್ ಆಘಾತ ಎದುರಾಗಿದ್ದು, ನೆಟ್ ಪ್ರಾಕ್ಚಿಸ್ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಗಾಯಕ್ಕೆ ತುತ್ತಾಗಿದ್ದಾರೆ.ಇಂಗ್ಲೆಂಡ್ ವಿರುದ್ಧದ ಟಿ 20 ವಿಶ್ವಕಪ್ ಸೆಮಿಫೈನಲ್‌ಗೆ ಮುನ್ನ, ನೆಟ್ಸ್‌ನಲ್ಲಿ ತರಬೇತಿ ಪಡೆಯುವಾಗ ಭಾರತೀಯ ಸ್ಟಾರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ಮಂಗಳವಾರವಷ್ಟೇ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಇವರ ಬೆನ್ನಲ್ಲೇ ಇದೀಗ ವಿರಾಟ್ ಕೊಹ್ಲಿ ಕೂಡ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.ಇದನ್ನೂ ಓದಿ: ಐಸಿಸಿ ಟಿ20 ವಿಶ್ವಕಪ್: ಬಲಿಷ್ಠ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಪಾಕಿಸ್ತಾನ ಫೈನಲ್ ಗೆ ಲಗ್ಗೆಬುಧವಾರ, ವಿರಾಟ್ ಕೊಹ್ಲಿ ತಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರ ಹರ್ಷಲ್ ಪಟೇಲ್ ಅವರೊಂದಿಗೆ ನೆಟ್ ಪ್ರಾಕ್ಟಿಸ್ ವೇಳೆ ಅವರು ಎಸೆದ ಎಸೆತ ಕೊಹ್ಲಿ ಅವರ ತೊಡೆಸಂದಿಗೆ ಬಿದ್ದು, ನೋವಿಗೆ ತುತ್ತಾಗಿದ್ದರು. ನಂತರ ಅವರನ್ನು ತಂಡದ ಫಿಸಿಯೋ ಚಿಕಿತ್ಸೆಗೊಳಪಡಿಸಿದರಾದರೂ ಕೊಹ್ಲಿ ನೆಟ್‌ ಅಭ್ಯಾಸ ತೊರೆದು ಹೊರ ನಡೆದರು. ಇದು ತಂಡದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ ತಂಡದ ಆಡಳಿತ ಮಂಡಳಿ ಕೊಹ್ಲಿ ಪೆಟ್ಟು ಗಂಭೀರವಾಗಿಲ್ಲ, ಆತಂಕಪಡುವಂಥದ್ದೇನೂ ಇಲ್ಲ.. ಅಡಿಲೇಡ್ ಓವಲ್‌ನಲ್ಲಿ ನಾಳೆ ಅಂದರೆ ಗುರುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದ್ದಾರೆ ಎಂದು ಸ್ಪಷ್ಟನೆ ನೀಡಿದೆ. . .#