ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್: ಭಾರತದಿಂದ ಅತ್ಯಂತ ಕಡಿಮೆ ರನ್ ಗುರಿ! ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾದ ನಡುವಿನ ಮೊದಲನೇ ಟೆಸ್ಟ್ ನ ಮೂರನೇ ದಿನದ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾದ ವಿರುದ್ಧ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 90 ರನ್ ಗಳ ಗುರಿ ನೀಡಿದೆ. ಅಡಿಲೇಡ್ ಓವಲ್: ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾದ ನಡುವಿನ ಮೊದಲನೇ ಟೆಸ್ಟ್ ನ ಮೂರನೇ ದಿನದ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾದ ವಿರುದ್ಧ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 90 ರನ್ ಗಳ ಗುರಿ ನೀಡಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 9 ವಿಕೆಟ್ ಗಳ ನಷ್ಟಕ್ಕೆ 36 ರನ್ ಗಳಿಸಿದ್ದು ಭಾರತ ಸವಾಲು ನೀಡಿರುವ ಅತ್ಯಂತ ಕಡಿಮೆ ಮೊತ್ತದ ರನ್ ಆಗಿದೆ. 1st . 3.5: (14), 4 , 15/0 ://./fxaVmC6qAK #AUSvIND1974 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 42 ರನ್ ಗಳ ಗುರಿ ದಾಖಲೆಯ ಕಡಿಮೆ ರನ್ ಟಾರ್ಗೆಟ್ ಆಗಿತ್ತು. ಈಗ ಹೊನಲು ಬೆಳಕಿನ ಪಿಂಕ್ ಚೆಂಡಿನ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ನಷ್ಟಕ್ಕೆ 36 ರನ್ ಗಳನ್ನು ನೀಡಿರುವುದು ಇತ್ತೀಚಿನ ದಶಕಗಳಲ್ಲಿ ಅತ್ಯಂತ ಕಡಿಮೆ ಮೊತ್ತದ ರನ್ ಟಾರ್ಗೆಟ್ ಎಂಬ ದಾಖಲೆಯನ್ನು ನಿರ್ಮಿಸಿದೆ.