ವಿಶ್ವಕಪ್: ಪಾಕ್ ಪತ್ರಕರ್ತರಿಗೆ ಸಿಕ್ಕಿಲ್ಲ ವೀಸಾ, ಆದರೆ ವಾಟ್ಸ್ ಆಪ್ ಮೂಲಕ ಪ್ರಶ್ನೆ ಕೇಳಲು ಅವಕಾಶ! ಭಾರತದಲ್ಲಿ ಕ್ರಿಕೆಟ್ ವಿಶ್ವಕಪ್ ಪಂದ್ಯ ನಡೆಯುತ್ತಿದ್ದು, ಪಾಕ್ ಪತ್ರಕರ್ತರಿಗೆ ಇನ್ನೂ ವೀಸಾ ಲಭ್ಯವಾಗಿಲ್ಲ. ಆದರೆ ಅವರಿಗೆ ವಾಟ್ಸ್ ಆಪ್ ಮೂಲಕ ಪ್ರಶ್ನೆ ಕೇಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಐಸಿಸಿ ಮಾಧ್ಯಮ ನಿರ್ವಾಹಕರು ಮಾಹಿತಿ ನೀಡಿದ್ದಾರೆ. ನವದೆಹಲಿ: ಭಾರತದಲ್ಲಿ ಕ್ರಿಕೆಟ್ ವಿಶ್ವಕಪ್ ಪಂದ್ಯ ನಡೆಯುತ್ತಿದ್ದು, ಪಾಕ್ ಪತ್ರಕರ್ತರಿಗೆ ಇನ್ನೂ ವೀಸಾ ಲಭ್ಯವಾಗಿಲ್ಲ. ಆದರೆ ಅವರಿಗೆ ವಾಟ್ಸ್ ಆಪ್ ಮೂಲಕ ಪ್ರಶ್ನೆ ಕೇಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಐಸಿಸಿ ಮಾಧ್ಯಮ ನಿರ್ವಾಹಕರು ಮಾಹಿತಿ ನೀಡಿದ್ದಾರೆ. ಪಾಕ್ ಪತ್ರಕರ್ತರು ಕೇಳುವ ಪ್ರಶ್ನೆಗಳನ್ನು ಪಾಕ್ ತಂಡದ ಆಟಗಾರರಿಗೆ ಕೇಳಲಾಗುತ್ತದೆ ಎಂದು ಐಸಿಸಿ ಹೇಳಿದೆ. ಇದನ್ನೂ ಓದಿ: ಅತಿ ವೇಗದ 50 ವಿಕೆಟ್‌; ಐಸಿಸಿ ವಿಶ್ವಕಪ್ ನಲ್ಲಿ ದಾಖಲೆ ಬರೆದ ಆಸಿಸ್ ವೇಗಿ ಮಿಚೆಲ್ ಸ್ಟಾರ್ಕ್ಪಾಕ್ ತಂಡ ಹೈದರಾಬಾದ್ ನಲ್ಲಿ ನಾಳೆ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಇದಕ್ಕೂ ಮುನ್ನ ತರಬೇತಿ ನಡೆಯಲಿದೆ. ಬಳಿಕ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪತ್ರಿಕಾ ಸಂವಾದ ನಡೆಯಲಿದೆ.ಇದಕ್ಕೂ ಮೊದಲು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೋಮವಾರ ಐಸಿಸಿಗೆ ಪತ್ರ ಬರೆದಿದ್ದು, ವಿಶ್ವಕಪ್‌ಗೆ ಆಗಮಿಸಲು ಪತ್ರಕರ್ತರು ಮತ್ತು ಅಭಿಮಾನಿಗಳಿಗೆ ಇನ್ನೂ ವೀಸಾ ಸಿಗದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿತ್ತು.