ಏಷ್ಯಾ ಕಪ್ 2022: ಮೊಹಮ್ಮದ್‌ ರಿಝ್ವಾನ್‌ ಅಬ್ಬರ; ಟೀಂ ಇಂಡಿಯಾ ವಿರುದ್ಧ ಪಾಕ್ ಗೆ ರೋಚಕ ಗೆಲುವು ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ಟೀಂ ಇಂಡಿಯಾ ವಿರುದ್ಧ ಐದು ವಿಕೆಟ್ ಗಳ ರೋಚಕ... ದುಬೈ: ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ಟೀಂ ಇಂಡಿಯಾ ವಿರುದ್ಧ ಐದು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ.ಇದನ್ನು ಓದಿ: ಏಷ್ಯಾ ಕಪ್ 2022: ಕೊಹ್ಲಿ ಅರ್ಧಶತಕ, ಪಾಕ್ ಗೆ 182 ರನ್ ರನ್ ಗುರಿ ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 181 ರನ್ ಗಳಿಗೆ ಕಠಿಣ ಸವಾಲು ನೀಡಿತ್ತು. ಗೆಲುವಿಗೆ 182 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಪಾಕ್, ಆರಂಭದಲ್ಲೇ ಬಾಬರ್‌ ಆಝಮ್‌ (14) ವಿಕೆಟ್ ಪತನವಾದರೂ ಓಪನರ್‌ ಮೊಹಮ್ಮದ್‌ ರಿಝ್ವಾನ್‌, 51 ಎಸೆತಗಳಲ್ಲಿ 71 ರನ್‌ ಸಿಡಿಸಿ ಗೆಲುವಿನ ರೂವಾರಿಯಾದರು. ತೀವ್ರ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಕೊನೆಯ 2 ಓವರ್‌ನಲ್ಲಿ ಪಾಕಿಸ್ತಾನ ಗೆಲುವಿಗೆ 26 ರನ್ ಬೇಕಾಗಿತ್ತು. ಅಂತಿಮವಾಗಿ ಕೊನೆಯ 2 ಎಸೆತಗಳಲ್ಲಿ ಪಾಕ್ ಗೆಲುವಿಗೆ 2 ರನ್ ಬೇಕಾಗಿತ್ತು. ಪಾಕಿಸ್ತಾನ 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಸಿಡಿಸಿ ಗೆಲುವು ದಾಖಲಿಸಿದೆ.ಭಾರತದ ಪರ ರೋಹಿತ್‌ ಶರ್ಮಾ 28, ಕೆ.ಎಲ್ ರಾಹುಲ್ 28, ವಿರಾಟ್ ಕೊಹ್ಲಿ 60; ಶದಾಬ್ ಖಾನ್ 31ಕ್ಕೆ 2, ಮೊಹಮ್ಮದ್‌ ನವಾಝ್ 25ಕ್ಕೆ 1, ಹ್ಯಾರಿಸ್‌ ರೌಫ್ 35ಕ್ಕೆ 1 ವಿಕೆಟ್ ಪಡೆದರು.ಪಾಕಿಸ್ತಾನ ಪರ ಮೊಹಮ್ಮದ್‌ ರಿಝ್ವಾನ್‌ 71, ಮೊಹಮ್ಮದ್‌ ನವಾಝ್ 42, ಆಸಿಫ್‌ ಅಲಿ 16 ರನ್ ಪಡೆದರೆ, ರವಿ ಬಿಷ್ಣೋಯ್‌ 26ಕ್ಕೆ 1, ಅರ್ಷದೀಪ್ ಸಿಂಗ್‌ 27ಕ್ಕೆ 1 ವಿಕೆಟ್ ಪಡೆದರು.