ಐಪಿಎಲ್ 2020: 5 ವಿಕೆಟ್ ಗಳಿಂದ ಆರ್ ಸಿಬಿಯನ್ನು ಮಣಿಸಿದ ಸನ್ ರೈಸರ್ಸ್ ಹೈದ್ರಾಬಾದ್ ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 52ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಐದು ವಿಕೆಟ್ ಗಳ ಅಂತರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದೆ. ಶಾರ್ಜಾ: ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 52ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಐದು ವಿಕೆಟ್ ಗಳ ಅಂತರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದೆ.ಆರ್ ಸಿಬಿ ನೀಡಿದ 121 ರನ್ ಗಳ ಸುಲಭ ಗುರಿಯನ್ನು ಕೇವಲ 14. 1 ಓವರ್ ಗಳಲ್ಲೇ ತಲುಪಿದ ಸನ್ ರೈಸರ್ಸ್ ತಂಡ, ಐದು ವಿಕೆಟ್ ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಫ್ಲೇ ಆಫ್ ಸ್ಪರ್ಧೆಯಲ್ಲಿ ಉಳಿದುಕೊಂಡಿದೆ.ವೃದ್ಧಿಮಾನ್ ಸಾಹ (39) ಮನೀಷ್ ಪಾಂಡೆ (26) ಮತ್ತು ಜೇಸನ್ ಹೋಲ್ಡರ್ ( ಅಜೇಯ 26) ರನ್ ಗಳಿಸುವ ಮೂಲಕ ತಮ್ಮ ತಂಡಕ್ಕೆ ಗೆಲುವು ದೊರಕಿಸಿಕೊಡುವಲ್ಲಿ ನೆರವಾದರು.ಆರ್ ಸಿಬಿ ಪರ ಯಜುವೇಂದ್ರ ಚಾಹಲ್ ಎರಡು ವಿಕೆಟ್ ಗಳನ್ನು ಪಡೆದುಕೊಂಡರೆ, ವಾಷಿಂಗ್ಟನ್ ಸುಂದರ್, ಇಸುರು ಉದಾನ ಮತ್ತು ನವದೀಪ್ ಸೈನಿ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.ನವೆಂಬರ್ 2 ರಂದು ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು, ಗೆದ್ದ ತಂಡ ಫ್ಲೇ ಆಫ್ ತಲುಪಲಿದೆ. ಸೋತ ತಂಡದ ಭವಿಷ್ಯ ಉಳಿದ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಿದೆ.