T20 : ಸೂಪರ್‌-8 ಮುನ್ನವೇ ಟೀಂ ಇಂಡಿಯಾ ಇಬ್ಬರು ಆಟಗಾರರು ಭಾರತಕ್ಕೆ ವಾಪಸ್! ಶುಭಮನ್ ಗಿಲ್ ಮತ್ತು ಅವೇಶ್ ಖಾನ್ ಭಾರತಕ್ಕೆ ಮರಳಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ವರದಿಯ ಪ್ರಕಾರ, ಇನ್ನಿಬ್ಬರು ಮೀಸಲು ಆಟಗಾರರಾದ ರಿಂಕು ಸಿಂಗ್ ಮತ್ತು ಖಲೀಲ್ ಅಹ್ಮದ್ ತಂಡದಲ್ಲಿಯೇ ಉಳಿಯಲಿದ್ದಾರೆ. ಭಾರತ ಕ್ರಿಕೆಟ್ ತಂಡವು ಈಗಾಗಲೇ 2024ರ ಟಿ20 ವಿಶ್ವಕಪ್‌ನ ಸೂಪರ್ 8ನೇ ಹಂತಕ್ಕೆ ತಲುಪಿದೆ. ಪಾಕಿಸ್ತಾನದ ವಿರುದ್ಧ ಒಂದು ಪಂದ್ಯ ಸೇರಿದಂತೆ ಆಡಿರುವ ಮೂರು ಪಂದ್ಯಗಳಲ್ಲಿಯೂ ಗೆಲುವು ಸಾಧಿಸುವುದರೊಂದಿಗೆ ರೋಹಿತ್ ಶರ್ಮಾ ನೇತೃತ್ವದ ತಂಡವು ಯುಎಸ್‌ಎಯಲ್ಲಿ ಈವರೆಗೂ ಅಜೇಯವಾಗಿ ಉಳಿದಿದೆ. ಸೂಪರ್ 8 ಮತ್ತು ನಂತರದ ನಾಕೌಟ್ ಹಂತಕ್ಕಾಗಿ ವೆಸ್ಟ್ ಇಂಡೀಸ್‌ಗೆ ತೆರಳುವ ಮುನ್ನ USAನಲ್ಲಿ ಇನ್ನೊಂದು ಪಂದ್ಯವನ್ನು ಆಡಬೇಕಿದೆ. ಆದಾಗ್ಯೂ, ಕ್ರಿಕ್‌ಬಜ್‌ನಲ್ಲಿನ ವರದಿ ಪ್ರಕಾರ, ಜೂನ್ 15ರಂದು ಯುಎಸ್ಎನಲ್ಲಿನ ಪಂದ್ಯ ಮುಗಿದ ನಂತರ ಟೀಂ ಇಂಡಿಯಾದ ಇಬ್ಬರು ಆಟಗಾರರು ಭಾರತಕ್ಕೆ ಮರಳಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.ಶುಭಮನ್ ಗಿಲ್ ಮತ್ತು ಅವೇಶ್ ಖಾನ್ ಭಾರತಕ್ಕೆ ಮರಳಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ವರದಿಯ ಪ್ರಕಾರ, ಇನ್ನಿಬ್ಬರು ಮೀಸಲು ಆಟಗಾರರಾದ ರಿಂಕು ಸಿಂಗ್ ಮತ್ತು ಖಲೀಲ್ ಅಹ್ಮದ್ ತಂಡದಲ್ಲಿಯೇ ಉಳಿಯಲಿದ್ದಾರೆ. ಸದ್ಯ, ಎಲ್ಲ ಮೀಸಲು ಆಟಗಾರರು ಫೋರ್ಟ್ ಲಾಡರ್‌ಡೇಲ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿದ್ದಾರೆ.ಈಮಧ್ಯೆ, ಸ್ಥಳ ಬದಲಾವಣೆಯೊಂದಿಗೆ ಭಾರತೀಯ ಬೌಲಿಂಗ್ ದಾಳಿಯ ಸಂಯೋಜನೆಯಲ್ಲಿ ಬದಲಾವಣೆಯನ್ನು ಕಾಣುವ ನಿರೀಕ್ಷೆಯಿದೆ ಮತ್ತು ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಕೆರಿಬಿಯನ್ ದ್ವೀಪಗಳಲ್ಲಿ ಪ್ರಾರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್‌ನ 'ಸೂಪರ್ 8' ಹಂತಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ 11ನಲ್ಲಿರಬೇಕು ಭಾರತದ ಮಾಜಿ ವೇಗಿ ಶ್ರೀಶಾಂತ್ ಹೇಳಿದರು.ಐಸಿಸಿ ಪುರುಷರ T20 ವಿಶ್ವಕಪ್ 2024 ಗಾಗಿ ಭಾರತ ನಾಲ್ಕು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದೆ. ಆದರೆ, ಪಂದ್ಯಾವಳಿಯ ಮೊದಲ ಮೂರು ಪಂದ್ಯಗಳಲ್ಲಿ ವೇಗಿಗಳನ್ನೇ ಬಳಸಿಕೊಂಡಿದೆ. ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಬುಧವಾರ ಯುನೈಟೆಡ್ ಸ್ಟೇಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ ಮೂರು ಓವರ್ ಮಾತ್ರ ಸ್ಪಿನ್ ಬೌಲಿಂಗ್ ಅನ್ನು ಬಳಸಿದರು. ಸದ್ಯ ನ್ಯೂಯಾರ್ಕ್ ಪಿಚ್‌ನಲ್ಲಿ ವೇಗದ ಬೌಲಿಂಗ್ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ಸ್ಪಿನ್ ಬೌಲಿಂಗ್ ಅನ್ನು ಬಳಸಿಕೊಂಡಿಲ್ಲ.'ಚಾಹಲ್ ಅವರು ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಬಹುದು. ರಾಹುಲ್ ದ್ರಾವಿಡ್ ಅವರಿಗೆ ವೆಸ್ಟ್ ಇಂಡೀಸ್‌ನಲ್ಲಿ ಏನೆಲ್ಲ ಬದಲಾವಣೆಗಳನ್ನು ಮಾಡಬೇಕೆಂದು ತಿಳಿದಿದೆ. ಅದಕ್ಕಾಗಿಯೇ ತಂಡದಲ್ಲಿ ನಾಲ್ಕು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಲಾಗಿದೆ. ನಾಲ್ವರು ಸ್ಪಿನ್ನರ್‌ಗಳನ್ನು ಏಕೆ ಆಯ್ಕೆ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಬಯಸುವುದಿಲ್ಲ ಎಂದು ರೋಹಿತ್ ಹೇಳಿದ್ದಾರೆ. ಆದರೆ ವಿಶೇಷವಾಗಿ ಸ್ಪಿನ್ನಿಂಗ್ ವಿಭಾಗದಲ್ಲಿ ಬದಲಾವಣೆಗಳಾಗಲಿವೆ. ಅಕ್ಷರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ರೀತಿಯಿಂದಾಗಿ ಯಾರನ್ನು ಕೈಬಿಡಬೇಕೆಂಬುದು ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದು ನಿಜವಾಗಿಯೂ ಕಷ್ಟಕರವಾದ ಕೆಲಸವಾಗಿದೆ' ಶ್ರೀಶಾಂತ್ ಸುದ್ದಿಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡುವಾಗ ಹೇಳಿದರು.