ಒತ್ತಡದ ಸನ್ನಿವೇಶದಲ್ಲಿ ಆಡುವುದನ್ನು ರಹಾನೆಯಿಂದ ಕಲಿತೆ: ಶುಭ್ ಮನ್ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ನಾಯಕ ಅಜಿಂಕ್ಯ ರಹಾನೆ ಅವರ ಅಜೇಯ ಶತಕವನ್ನು ಶ್ಲಾಘಿಸಿರುವ ಭಾರತ ಕ್ರಿಕೆಟ್ ತಂಡದ ಯುವ ಓಪನರ್ ಶುಭ್ ಮನ್ ಗಿಲ್, ಒತ್ತಡದ ಸಮಯದಲ್ಲಿ ಬ್ಯಾಟಿಂಗ್ ಮಾಡುವುದು ಹೇಗೆ ಎಂಬುದನ್ನು ಅವರಿಂದ ಕಲಿಯುತಿದ್ದೇನೆ ಎಂದಿದ್ದಾರೆ. ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ನಾಯಕ ಅಜಿಂಕ್ಯ ರಹಾನೆ ಅವರ ಅಜೇಯ ಶತಕವನ್ನು ಶ್ಲಾಘಿಸಿರುವ ಭಾರತ ಕ್ರಿಕೆಟ್ ತಂಡದ ಯುವ ಓಪನರ್ ಶುಭ್ ಮನ್ ಗಿಲ್, ಅವರ ಬ್ಯಾಟಿಂಗ್ ಮಾಡುವುದನ್ನು ನೋಡುವ ಮೂಲಕ ಒತ್ತಡದ ಸಮಯದಲ್ಲಿ ಬ್ಯಾಟಿಂಗ್ ಮಾಡುವುದು ಹೇಗೆದೆ ಎಂಬುದನ್ನು ಕಲಿಯುತಿದ್ದೇನೆ ಎಂದಿದ್ದಾರೆ.ಮೊದಲ ದಿನದ ಆಟದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಗಿಲ್, "ನಾಯಕ ಅಜಿಂಕ್ಯ ರಹಾನೆ ಅವರು ತಾಳ್ಮೆಯಿಂದ ಆಡುತ್ತಿದ್ದರು ಮತ್ತು ಅದು ಹೆಚ್ಚು ಮುಖ್ಯ. ನೀವು ಇಂತಹ ಉತ್ತಮ ಗುಣಮಟ್ಟದ ಬೌಲಿಂಗ್ ಅನ್ನು ಎದುರಿಸುವಾಗ, ಕೆಲವೊಮ್ಮೆ ನಿಮಗೆ ರನ್ ಗಳಿಸಲು ಸಾಧ್ಯವಾಗುವುದಿಲ್ಲ. ಅವರು ಅದ್ಭುತ ಇನ್ನಿಂಗ್ಸ್ ಆಡಿದರು" ಎಂದು ಹೇಳಿದ್ದಾರೆ."ರಹಾನೆ ಒತ್ತಡದ ಸಮಯದಲ್ಲಿ ಬ್ಯಾಟಿಂಗ್ ಮಾಡುವುದು ಹೇಗೆ ಮತ್ತು ಅವಕಾಶವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿದರು" ಎಂದು ಹೇಳಿದರು. ಗಿಲ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 45 ರನ್ ಗಳಿಸಿದರು, ಆಸ್ಟ್ರೇಲಿಯಾದ ಎರಡನೇ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಟೆಸ್ಟ್ ಗೆ ಪದಾರ್ಪಣೆ ಮಾಡಿದ್ದು, ಅರ್ಧಶತಕವನ್ನು ತಪ್ಪಿಸಿಕೊಂಡರು."ನಾನು ಬ್ಯಾಟಿಂಗ್ ಮಾಡಲು ಹೋದಾಗ, ಪಿಚ್ ಬೌಲರ್‌ಗಳಿಗೆ ಸಂಪೂರ್ಣ ಬೆಂಬಲವನ್ನು ನೀಡಿತು. ಪಿಚ್‌ನಲ್ಲಿ ಅಥವಾ ಅದರ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಾನು ಅರಿತುಕೊಂಡೆ, ನಾನು ನನ್ನ ಆಟವನ್ನು ಆಡಿದೆ. ಮತ್ತು ಪೂರ್ಣ ಸಾಮರ್ಥ್ಯದೊಂದಿಗೆ ಆಡುತ್ತೇನೆ. ಬ್ಯಾಟಿಂಗ್ ಮಾಡುವಾಗ ನಾನು ಯೋಚಿಸುತ್ತಿದ್ದೆ" ಎಂದಿದ್ದಾರೆ.“ನಾನು ಕಳೆದ ನಾಲ್ಕು-ಐದು ಟೆಸ್ಟ್ ಸರಣಿಯಲ್ಲಿ ತಂಡದೊಂದಿಗೆ ಇದ್ದೆ. ತಂಡದೊಂದಿಗೆ ಇರುವುದರಿಂದ ನನಗೆ ಸಾಕಷ್ಟು ಲಾಭ ಸಿಕ್ಕಿದೆ. ನೆಟ್ಸ್‌ನಲ್ಲಿ ಅಗ್ರ ಬೌಲಿಂಗ್ ದಾಳಿಯ ವಿರುದ್ಧ ಆಡುವುದು ಯುವ ಆಟಗಾರನಿಗೆ ಆತ್ಮವಿಶ್ವಾಸ ತುಂಬುತ್ತದೆ" ಎಂದು ಗಿಲ್ ಹೇಳಿದ್ದಾರೆ.