ವಿಂಡೀಸ್ ವಿರುದ್ಧ ಮತ್ತೊಂದು ಸರಣಿ ಜಯ; ಕ್ರಿಕೆಟ್ ಇತಿಹಾಸದ ಅಪರೂಪದ ದಾಖಲೆ ಬರೆದ ಭಾರತ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿರುವ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ತಂಡವೊಂದರ ವಿರುದ್ಧ ಅತೀ ಹೆಚ್ಚು ಸತತ ಸರಣಿ ಜಯ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಕ್ವೀನ್ಸ್ ಪಾರ್ಕ್ ಓವಲ್: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿರುವ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ತಂಡವೊಂದರ ವಿರುದ್ಧ ಅತೀ ಹೆಚ್ಚು ಸತತ ಸರಣಿ ಜಯ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.ಇಂದಿನ ಸರಣಿ ಜಯದ ಮೂಲಕ ಭಾರತದ ಖಾತೆಗೆ ವಿಂಡೀಸ್ ವಿರುದ್ಧ ಮತ್ತೊಂದು ಸರಣಿ ಜಯ ದಾಖಲಾಗಿದ್ದು, ಇದು ಭಾರತಕ್ಕೆ ವಿಂಡೀಸ್ ವಿರುದ್ಧ 12ನೇ ಸತತ ಸರಣಿ ಜಯವಾಗಿದೆ. ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡವೊಂದರ ವಿರುದ್ಧ ಮತ್ತೊಂದು ತಂಡ ಸತತವಾಗಿ ಹೆಚ್ಚು ಸರಣಿ ಗೆದ್ದ ಪಟ್ಟಿಯಲ್ಲಿ ಭಾರತ ಇದೀಗ ಅಗ್ರ ಸ್ಥಾನಕ್ಕೇರಿದೆ.ಇದನ್ನೂ ಓದಿ: 2ನೇ ಏಕದಿನ ಪಂದ್ಯ: ಅಕ್ಸರ್ ಪಟೇಲ್ ಭರ್ಜರಿ ಬ್ಯಾಟಿಂಗ್ ಭಾರತಕ್ಕೆ 2 ವಿಕೆಟ್ ಗಳ ರೋಚಕ ಜಯವಿಂಡೀಸ್ ವಿರುದ್ಧದ ಭಾರತ ಸತತ ಜೈತ್ರಯಾತ್ರೆ 2007ರಲ್ಲಿ ಪ್ರಾರಂಭವಾಗಿತ್ತು. ಅಂದು ಇಂದಿಗೂ ಅಜೇಯವಾಗಿ ಮುಂದುವರೆದಿದೆ. ಈ ಹಿಂದೆ ಈ ಸ್ಥಾನದಲ್ಲಿ ಪಾಕಿಸ್ತಾನವಿತ್ತು. ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ ಸತತ 11 ಸರಣಿಗಳಲ್ಲಿ ಜಯಗಳಿಸಿದೆ. 1996ರಿಂದ 2021ರವರೆಗೆ ಪಾಕ್ ಜಿಂಬಾಬ್ವೆ ವಿರುದ್ದ 11 ಸರಣಿಗಳನ್ನು ಗೆದ್ದು ಈ ಸಾಧನೆ ಮಾಡಿತ್ತು. ಇದೀಗ ಭಾರತ ತನ್ನ 12ನೇ ಸರಣಿ ಜಯದ ಮೂಲಕ ಈ ದಾಖಲೆಯನ್ನು ಹಿಂದಿಕ್ಕೆ ಅಗ್ರಸ್ಥಾನಕ್ಕೇರಿದೆ. 12 (2007-2022)* 11 (1996-2021) 10 (1999-2022) 9 (1995-2018) 9 (2007-2021)