ಅವಮಾನಕ್ಕೆ ಸನ್ಮಾನ: ಭೋಜನಕ್ಕೆ ಕೆಎಲ್ ರಾಹುಲ್‌ ಆಹ್ವಾನಿಸಿದ ಮಾಲೀಕ ಸಂಜೀವ್ ಗೋಯೆಂಕಾ; ಫೋಟೋ ವೈರಲ್ ಲಖನೌ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರು ನಾಯಕ ಕೆಎಲ್ ರಾಹುಲ್ ಮೇಲೆ ಕ್ಯಾಮೆರಾಗಳ ಮುಂದೆಯೇ ನಿಂದಿಸುವ ಮೂಲಕ ಅವಮಾನಿಸಿದ್ದರು. ಈ ಘಟನೆ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿತ್ತು. ನವದೆಹಲಿ: ಲಖನೌ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರು ನಾಯಕ ಕೆಎಲ್ ರಾಹುಲ್ ಮೇಲೆ ಕ್ಯಾಮೆರಾಗಳ ಮುಂದೆಯೇ ನಿಂದಿಸುವ ಮೂಲಕ ಅವಮಾನಿಸಿದ್ದರು. ಈ ಘಟನೆ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೆ ಮಾಲೀಕ ಸಂಜೀವ್ ಗೋಯೆಂಕಾ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಇತ್ತೀಚಿನ ಪಂದ್ಯದಲ್ಲಿ ಲಖನೌ ತಂಡ ಹೀನಾಯವಾಗಿ ಸೋತಿತ್ತು. ಇದರಿಂದ ಕೋಪಗೊಂಡಿದ್ದ ಸಂಜೀವ್ ಗೋಯೆಂಕಾ ಅವರು ಮೈದಾನದಲ್ಲೇ ಕೆಎಲ್ ರಾಹುಲ್ ಅವರನ್ನು ಪ್ರಶ್ನಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಟೀಕೆಗಳು ವ್ಯಕ್ತವಾಗಿದ್ದವು. ಇದೇ ಅಲ್ಲದೆ ಕರ್ನಾಟಕದ ಬ್ಯಾಟರ್ ನಾಯಕತ್ವ ತೊರೆಯಬಹುದು ಎಂಬ ಊಹಾಪೋಹವನ್ನು ಹುಟ್ಟುಹಾಕಿತ್ತು. . - . ❤️ ../Zq2JV8ow5lಇದೀಗ ಈ ವಿವಾದಕ್ಕೆ ತೇಪೆ ಹಚ್ಚಲು ಸಂಜೀವ್ ಗೋಯೆಂಕಾ ಮುಂದಾಗಿದ್ದು ಕೆಎಲ್ ರಾಹುಲ್ ಅವರನ್ನು ತಮ್ಮ ಮನೆಗೆ ಭೋಜನಕ್ಕೆ ಆಹ್ವಾನಿಸಿದ್ದರು. ಅದರಂತೆ ಗೋಯೆಂಕಾ ಮನೆಗೆ ತೆರಳಿದ ಕೆಎಲ್ ರಾಹುಲ್ ಅವರನ್ನು ಗೋಯೆಂಕಾ ಆತ್ಮೀಯವಾಗಿ ಅಪ್ಪಿ ಸ್ವಾಗತಿಸಿದ್ದಾರೆ.