2023: ಪಾಕ್ ತಂಡದ ಕಳಪೆ ಪ್ರದರ್ಶನ, ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇಂಜಮಾಮ್ ಉಲ್ ಹಕ್ ರಾಜಿನಾಮೆ ಹಾಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ( 2023)ಯಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನ ಮುಂದುವರೆದಿರುವಂತೆಯೇ ಅತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ( )ಯ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕ್ರಿಕೆಟ್ ದಂತಕಥೆ ಇಂಜಮಾಲ್ ಉಲ್ ಹಕ್ ರಾಜಿನಾಮೆ ನೀಡಿದ್ದಾರೆ. ಲಾಹೋರ್: ಹಾಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ( 2023)ಯಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನ ಮುಂದುವರೆದಿರುವಂತೆಯೇ ಅತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ( )ಯ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕ್ರಿಕೆಟ್ ದಂತಕಥೆ ಇಂಜಮಾಲ್ ಉಲ್ ಹಕ್ ರಾಜಿನಾಮೆ ನೀಡಿದ್ದಾರೆ.ಹೌದು.. ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ( )ದ ನೀರಸ ಪ್ರದರ್ಶನದ ಮಧ್ಯೆ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಇಂಜಮಾಮ್-ಉಲ್-ಹಕ್ (--) ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಇದನ್ನೂ ಓದಿ: ಐಸಿಸಿ ವಿಶ್ವಕಪ್ ಟೂರ್ನಿಯಲ್ಲೇ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಅರ್ಹತೆ, 7ನೇ ಸ್ಥಾನಕ್ಕಾಗಿ ಇಂಗ್ಲೆಂಡ್-ಆಫ್ಘಾನಿಸ್ತಾನ ಪೈಪೋಟಿಇಂಜಮಾಮ್ ಉಲ್ ಹಕ್ ಅವರು ತಮ್ಮ ರಾಜೀನಾಮೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಝಕಾ ಅಶ್ರಫ್ ಅವರಿಗೆ ಕಳುಹಿಸಿದ್ದು, ಈ ಬಗ್ಗೆ ಪಾಕಿಸ್ತಾನದ 'ಸಮಾ' ಟಿವಿಯೊಂದಿಗೆ ಮಾತನಾಡಿದ ಅವರು, ಮುಖ್ಯ ಆಯ್ಕೆಗಾರನ ಪಾತ್ರವು ನ್ಯಾಯಾಧೀಶರ ಪಾತ್ರ ಎಂದು ನಾನು ಭಾವಿಸಿದ್ದರಿಂದ ನಾನು ನನ್ನ ರಾಜೀನಾಮೆಯನ್ನು ಕಳುಹಿಸಿದ್ದೇನೆ ಮತ್ತು ಈ ವಿಚಾರಣೆ ನಡೆಯುವವರೆಗೆ ನಾನು ದೂರವಿರುವುದು ಉತ್ತಮ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.ಇಂಜಿ ವಿರುದ್ಧ ಹಿತಾಸಕ್ತಿ ಸಂಘರ್ಷ ಆರೋಪ ಮೂಲಗಳ ಪ್ರಕಾರ ಹಲವಾರು ರಾಷ್ಟ್ರೀಯ ತಂಡದ ಆಟಗಾರರನ್ನು ನಿರ್ವಹಿಸುವ ಖಾಸಗಿ ಕಂಪನಿಯೊಂದಿಗಿನ ಇಂಜಮಾಮ್ ಉಲ್ ಹಕ್ ಅವರ ಸಂಬಂಧವು ಹಿತಾಸಕ್ತಿ ಸಂಘರ್ಷ ( ) ಆರೋಪಕ್ಕೆ ಕಾರಣವಾಗಿದೆ. ಈ ಸಂಬಂಧ ತನಿಖೆ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನಿಖೆಯನ್ನು ಪ್ರಾರಂಭಿಸಿದ್ದು, ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ದಂತಕಥೆ ( ) ಇಂಜಮಾಮ್-ಉಲ್-ಹಕ್ ಸೋಮವಾರ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ () ನೀಡಿದ್ದಾರೆ.ಯಾಜೂ ಇಂಟರ್‌ನ್ಯಾಶನಲ್ ಕಂಪನಿಯಲ್ಲಿ ಇಂಜಮಾಮ್ ಅವರ ಪಾತ್ರವನ್ನು ತನಿಖೆ ಮಾಡಲು ಪಿಸಿಬಿ () ಐದು ಸದಸ್ಯರ ಸಮಿತಿಯನ್ನು ರಚಿಸಿದ್ದು, ಅಲ್ಲಿ ನಾಯಕ ಬಾಬರ್ ಅಜಮ್ ( ), ವೇಗಿ ಶಾಹೀನ್ ಶಾ ಆಫ್ರಿದಿ ( ) ಮತ್ತು ವಿಕೆಟ್ ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ ( ) ಅವರನ್ನು ಈ ಖಾಸಗಿ ಸಂಸ್ಥೆ ಬ್ರಾಂಡ್ ಅಂಬಾಸಿಡರ್ ( ) ಗಳಾಗಿ ಒಪ್ಪಂದ ಮಾಡಿಕೊಂಡಿದೆ. ಇದನ್ನೂ ಓದಿ: 2025: ಮುಂದಿದೆ ಚಾಂಪಿಯನ್ಸ್ ಟ್ರೋಫಿ ಕದನ; ಪಾಕಿಸ್ತಾನಕ್ಕೆ ಭಾರತ ಪ್ರಯಾಣಿಸುವ ಸಾಧ್ಯತೆ ಇಲ್ಲ!ಇಂಜಿ ಅವರ ಖಾಸಗಿ ಸಂಸ್ಥೆಯೊಂದಿಗಿನ ಸಹಭಾಗಿತ್ವದಿಂದಲೇ ಈ ಮೂವರು ಆಟಗಾರರಿಗೆ ಪಾಕಿಸ್ತಾನ ತಂಡ ( )ದಲ್ಲಿ ಅವಕಾಶ ನೀಡುವಂತೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈ ಆರೋಪಗಳನ್ನು ಅಲ್ಲಗಳೆದಿರುವ ಇಂಜಮಾಮ್ ಉಲ್ ಹಕ್, 'ಏಜೆಂಟ್ ಮತ್ತು ಪಾಲುದಾರ ತಲ್ಹಾ ರೆಹಮಾನಿ ಅವರೊಂದಿಗಿನ ಆಟಗಾರರ ಸಂಬಂಧವು ಅವರನ್ನು ತಂಡಕ್ಕೆ ಆಯ್ಕೆ ಮಾಡಲು ಪ್ರಭಾವಿಸಿಲ್ಲ. ಆಟಗಾರರ ಆಯ್ಕೆಯಲ್ಲಿ ತಾನು ಯಾವುದೇ ರೀತಿಯ ರಾಜಿ ಮಾಡಿಕೊಂಡಿಲ್ಲ. ನಿಯಮಾನುಸಾರವೇ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.2016 ರಿಂದ 19ರವರೆಗಿನ ಒಂದು ಅವಧಿಯಲ್ಲಿ ಇಂಜಮಾಮ್ ಉಲ್ ಹಕ್ ಪಾಕಿಸ್ತಾನದ ಮುಖ್ಯ ಆಯ್ಕೆಗಾರರಾಗಿದ್ದರು. ಅಷ್ಟೇ ಅಲ್ಲದೆ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ಮತ್ತೆ ಕೆಲ ಸಮಯದ ಹಿಂದೆ ಅಂದರೆ ಆಗಸ್ಟ್ ತಿಂಗಳಿನಲ್ಲಿ ಅವರಿಗೆ ಈ ಜವಾಬ್ದಾರಿ ನೀಡಲಾಗಿತ್ತು. ಆದರೆ ಪಾಕಿಸ್ತಾನ ತಂಡದ ಕಳಪೆ ಸ್ಥಿತಿಗೂ ಗುರಿಯಾಗಿದ್ದಲ್ಲದೆ, ಇಂಜಮಾಮ್ ವಿರುದ್ಧ ಪಕ್ಷಪಾತ ()ದ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 100 ರನ್ ಜಯ; ಅಂಕಪಟ್ಟಿಯಲ್ಲಿ ನಂ.1; ಸೆಮಿಫೈನಲ್ಸ್ ಪ್ರವೇಶಿಸಿದ ಮೊದಲ ತಂಡ4 ತಿಂಗಳಿನಿಂದ ಆಟಗಾರರಿಗಿಲ್ಲ ವೇತನ ಏತನ್ಮಧ್ಯೆ ಕಳೆದ 4 ತಿಂಗಳಿನಿಂದ ಪಾಕಿಸ್ತಾನ ಕ್ರಿಕೆಟ್ ಆಟಗಾರರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವೇತನ ( ) ಬಿಡುಗಡೆ ಮಾಡಿಲ್ಲ ಎಂಬ ಆರೋಪವೂ ಕೇಳಿಬಂದಿದ್ದು, ಈ ಕುರಿತು ಮಾಜಿ ಕ್ರಿಕೆಟಿಗರು ಪಾಕಿಸ್ತಾನ ಕ್ರಿಕೆಟ್ ಮಂಡಳಿ () ವಿರುದ್ಧ ಬಹಿರಂಗವಾಗಿಯೇ ಆಕ್ರೋಶವ್ಯಕ್ತಪಡಿಸಿದ್ದರು. ಒಂದೆಡೆ ವಿಶ್ವಕಪ್ ಟೂರ್ನಿಯಲ್ಲಿ ತಂಡದ ನೀರಸ ಪ್ರದರ್ಶನ, ಮತ್ತೊಂದೆಡೆ ವೇತನ ವಿವಾದ ಇದೀಗ ಇಂಜಮಾಮ್ ಉಲ್ ಹಕ್ ರಾಜಿನಾಮೆ ()ಯಿಂದಾಗಿ ಮತ್ತೆ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಪ್ರಕ್ಷುಬ್ಧತೆ ಮುಂದುವರೆದಿದೆ.