ಟೀಮ್ ಇಂಡಿಯಾ ನಾಯಕತ್ವ ಕುರಿತಾದ ಆಂತರಿಕ ಮಾತುಕತೆ ಮಾಧ್ಯಮಕ್ಕಲ್ಲ: ರಾಹುಲ್ ದ್ರಾವಿಡ್ ಇತ್ತೀಚಿಗಷ್ಟೆ ವಿರಾಟ್ ಕೊಹ್ಲಿಯವರನ್ನು ಭಾರತ ಕ್ರಿಕೆಟ್ ತಂಡದ ನಾಯಕತ್ವ ಸ್ಥಾನದಿಂದ ಇಳಿಸಿ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ಜವಾಬ್ದಾರಿಯನ್ನು ನೀಡಲಾಗಿತ್ತು. ನವದೆಹಲಿ: ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಭಾರತ ಕ್ರಿಕೆಟ್ ತಂಡದ ನಾಯಕತ್ವ ಕುರಿತಾಗಿ ಸಮಿತಿಯಲ್ಲಿ ನಡೆದ ಮಾತುಕತೆಯ ವಿವರಗಳನ್ನು ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ.ಇದನ್ನೂ ಓದಿ: ಕ್ರಿಕೆಟ್ ನಿವೃತ್ತಿ ಬಳಿಕ ರಾಜಕೀಯದತ್ತ 'ಭಜ್ಜಿ' ಚಿತ್ತ: ಯಾವುದೇ ಪಕ್ಷ ಸೇರುವ ಮುನ್ನ ಘೋಷಣೆ ಮಾಡುತ್ತೇನೆ ಎಂದ 'ಟರ್ಬೋನೇಟರ್' ಹರ್ಭಜನ್ ಸಿಂಗ್ಇತ್ತೀಚಿಗಷ್ಟೆ ವಿರಾಟ್ ಕೊಹ್ಲಿಯವರನ್ನು ಭಾರತ ಕ್ರಿಕೆಟ್ ತಂಡದ ನಾಯಕತ್ವ ಸ್ಥಾನದಿಂದ ಇಳಿಸಿ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ಜವಾಬ್ದಾರಿಯನ್ನು ನೀಡಲಾಗಿತ್ತು. ಈ ಬಗ್ಗೆ ವಿವಾದ ಎದ್ದಿತ್ತು. ಆಯ್ಕೆದಾರರು ಹಾಗೂ ಇತರೆ ಮುಖ್ಯಸ್ಥರೊಡನೆ ಸಭೆ ವೇಳೆ ನಡೆದ ಮಾತುಕತೆ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದ್ದರು.ಇದನ್ನೂ ಓದಿ: ಕೊಹ್ಲಿಯಂತೆ ತಂಡ ಮುನ್ನಡೆಸಿದ ಯಾವ ನಾಯಕರೂ ಇಲ್ಲ; ನಾಯಕತ್ವ ವಿಚಾರವನ್ನು ಇನ್ನೂ ಉತ್ತಮವಾಗಿ ನಿಭಾಯಿಸಬಹುದಿತ್ತು: ರವಿಶಾಸ್ತ್ರಿವಿರಾಟ್ ಕೊಹ್ಲಿ ಈ ಟಿ20 ನಾಯಕತ್ವ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದರು. ನಂತದದ ಬೆಳವಣಿಗೆಯಲ್ಲಿ ಏಕದಿನ ಫಾರ್ಮಾಟ್ ಪಂದ್ಯಗಳ ನಾಯಕತ್ವ ಸ್ಥಾನವನ್ನು ರೋಹಿತ್ ಶರ್ಮಾ ಅವರಿಗೆ ವಹಿಸಲಾಗಿತ್ತು. ಇದನ್ನೂ ಓದಿ: ಪತ್ನಿ, ಪ್ರೇಯಸಿಯಿಂದ ಮಾತ್ರ ಒತ್ತಡ: ಸೌರವ್ ಗಂಗೂಲಿ ವಿವಾದಾತ್ಮಕ ಹೇಳಿಕೆ