2ನೇ ಟಿ20: ಭಾರತ ತಂಡ ಬೃಹತ್ ಮೊತ್ತ, ಭರ್ಜರಿ ಬ್ಯಾಟಿಂಗ್ ಮೂಲಕ 2 ದಾಖಲೆ ನಿರ್ಮಿಸಿದ ಸೂರ್ಯಕುಮಾರ್ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡದ ಸೂರ್ಯ ಕುಮಾರ್ ಯಾದವ್ ಎರಡೆರಡು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಗುವಾಹತಿ: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡದ ಸೂರ್ಯ ಕುಮಾರ್ ಯಾದವ್ ಎರಡೆರಡು ವಿಶ್ವ ದಾಖಲೆ ನಿರ್ಮಿಸಿದ್ದಾರೆ.ಗುವಾಹತಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ನಿಗದಿತ 20 ಓವರ್ ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ ಬರೊಬ್ಬರಿ 237 ರನ್ ಗಳ ಬೃಹತ್ ಗುರಿ ನೀಡಿತು. ಈ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ ಸೂರ್ಯ ಕುಮಾರ್ ಯಾದವ್ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು. ಕೇವಲ 22 ಎಸೆತಗಳನ್ನು ಎದುರಿಸಿದ ಸೂರ್ಯ ಕುಮಾರ್ ಯಾದವ್ 5 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 61 ರನ್ ಗಳನ್ನು ಸಿಡಿಸಿದರು. 28 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 1 ಸಿಕ್ಸರ್ ಮತ್ತು 7 ಬೌಂಡರಿ ಸಹಿತ ಅಜೇಯ 49ರನ್ ಸಿಡಿಸಿದರು. ಈ ಪಂದ್ಯದಲ್ಲಿ ಈ ಜೋಡಿ 14.57 ರನ್ ರೇಟ್ ನಲ್ಲಿ ಶತಕದ ಜೊತೆಯಾಟವಾಡಿದ್ದು, ಇದು ದಾಖಲೆಯಾಗಿದೆ. - @surya_14kumar 1000 T20I (573) .# ../iaFgAX8awuಎರಡೆರಡು ವಿಶ್ವ ದಾಖಲೆ ಈ ಪಂದ್ಯದ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸೂರ್ಯ ಕುಮಾರ್ ಯಾದವ್ ಎರಡೆರಡು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದನ್ನೂ ಓದಿ: 2ನೇ ಟಿ20: ಬೃಹತ್ ಮೊತ್ತ ಪೇರಿಸಿದ ಭಾರತ, ದಾಖಲೆ ಬರೆದ ಕೊಹ್ಲಿ-ಸೂರ್ಯಕುಮಾರ್ ಯಾದವ್ ಜೋಡಿವೇಗದ ಅರ್ಧಶತಕ ಈ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದು ಭಾರತದ ಪರ ಅತೀ ಕಡಿಮೆ ಎಸೆತಗಳಲ್ಲಿ ದಾಖಲಾದ ಮೂರನೇ ಅರ್ಧಶತಕ ಎಂಬ ಕೀರ್ತಿಗೆ ಭಾಜನವಾಗಿದೆ. ಇದಕ್ಕೂ ಮೊದಲು 2007ರಲ್ಲಿ ಡರ್ಬನ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ್ದರು. ಅದೇ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಬೌಲಿಂಗ್ ನಲ್ಲಿ ಯುವಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದು ಭಾರತದ ಪರ ದಾಖಲಾದ ವೇಗದ ಅರ್ಧಶತಕ ಎಂಬ ದಾಖಲೆ ಹೊಂದಿದೆ.ಇದನ್ನೂ ಓದಿ: 2ನೇ ಟಿ20: ಬೃಹತ್ ಮೊತ್ತ ಪೇರಿಸಿದ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವ ದಾಖಲೆ ನಿರ್ಮಾಣFastest T20I 50s 12 2007 18 2021 18 2022 * 19 2009 20 2007 20 2009ಟಿ20ಯಲ್ಲಿ ವೇಗದ ಸಾವಿರ ರನ್ ಅಂತೆಯೇ ಇದೇ ಪಂದ್ಯದಲ್ಲಿ ತಮ್ಮ ಅಮೋಘ 61 ರನ್ ಗಳ ನೆರವಿನ ಮೂಲಕ ಟಿ20ಯಲ್ಲಿ ಸೂರ್ಯ ಕುಮಾರ್ ಯಾದವ್ ತಮ್ಮ ರನ್ ಗಳಿಕೆಯನ್ನು 1 ಸಾವಿರಕ್ಕೇರಿಸಿಕೊಂಡರು. ಆ ಮೂಲಕ ವೇಗವಾಗಿ ಸಾವಿರ ರನ್ ಕಲೆಹಾಕಿದ ಬ್ಯಾಟರ್ ಎಂಬ ಕೀರ್ತಿಗೂ ಸೂರ್ಯ ಕುಮಾರ್ ಯಾದವ್ ಭಾಜನರಾದರು. ಸೂರ್ಯ ಕುಮಾರ್ ಯಾದವ್ ಈ ಸಾವಿರ ರನ್ ಗಳಿಕೆಗಾಗಿ ಕೇವಲ 573 ಎಸೆತಗಳನ್ನು ಮಾತ್ರ ಬಳಸಿದ್ದಾರೆ. ಇದಕ್ಕೂ ಮೊದಲು ಈ ಪಟ್ಟಿಯಲ್ಲಿ 604 ಎಸೆತಗಳಲ್ಲಿ ಸಾವಿರ ರನ್ ಗಳಿಸಿದ್ದ ಗ್ಲೇನ್ ಮ್ಯಾಕ್ಸ್ ವೆಲ್ ಅಗ್ರ ಸ್ಥಾನಿಯಾಗಿದ್ದರು. ಇದೀಗ ಅವರು 2ನೇ ಸ್ಥಾನಕ್ಕೆ ಕುಸಿದಿದ್ದಾರೆ.ಇದನ್ನೂ ಓದಿ: ಭಾರತ ದ.ಆಫ್ರಿಕಾ: ದಾಖಲೆ ಬರೆದ ರೋಹಿತ್-ರಾಹುಲ್ ಜೋಡಿ: 1000 T20I 573 ( 174) * 604 ( 166) 635 ( 157) 640 ( 156) 654 ( 153)