ಭಾರತ- ಆಸೀಸ್ ವಿಶ್ವಕಪ್ ಫೈನಲ್: ನರೇಂದ್ರ ಮೋದಿ ಸ್ಟೇಡಿಯಂನತ್ತ ಹರಿದುಬಂದ ಜನಸಾಗರ! ವಿಡಿಯೋ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಸ್ಟೇಡಿಯಂನತ್ತ ಜನಸಾಗರವೇ ಹರಿದುಬಂದಿದೆ. ಅಹಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಸ್ಟೇಡಿಯಂನತ್ತ ಜನಸಾಗರವೇ ಹರಿದುಬಂದಿದೆ.ಸ್ಟೇಡಿಯಂ ಒಳಗೆ ಹಾಗೂ ಹೊರಗ ಎಲ್ಲಿ ನೋಡಿದರೂ ಜನವೋ ಜನ!ನೀಲಿ ಸಮುದ್ರದಂತೆ ಗೋಚರಿಸುತ್ತಿದೆ. ತ್ರಿವರ್ಣ ಧ್ವಜ ಹಿಡಿದ ಅಭಿಮಾನಿಗಳು, ಭಾರತ ಪರ ಜಯಘೋಷ ಮೊಳಗಿಸುತ್ತಾ, ಗೆದ್ದು ಬರಲಿ ಎಂಬ ಶುಭ ಕೋರುತ್ತಿದ್ದಾರೆ.ಇದನ್ನೂ ಓದಿ: ವಿಶ್ವಕಪ್ ಫೈನಲ್: ಮೊಟೇರಾ ಕ್ರೀಡಾಂಗಣದತ್ತ ಗಣ್ಯರು, ಅಭಿಮಾನಿಗಳು, ಸುಮಾರು 6,000 ಪೊಲೀಸರ ನಿಯೋಜನೆ# | : , . #ICCWorldCup2023 ../K4xF4CXkavಇದೇ ವೇಳೆ ಮಾತನಾಡಿದ ಟೀಂ ಇಂಡಿಯಾ ಬೆಂಬಲಿಗ ಮತ್ತು ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ ಸುಧೀರ್ ಕುಮಾರ್ ಚೌಧರಿ, ಭಾರತ ತಂಡ 2011 ರ ಗೆಲುವನ್ನು ಪುನರಾವರ್ತಿಸುತ್ತದೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಶತಕ ಗಳಿಸಿ 450 ರನ್‌ಗಳ ಗುರಿ ನೀಡಿ ಸುಲಭವಾಗಿ ಗೆಲ್ಲಬೇಕೆಂದು ಬಯಸುತ್ತೇನೆ ಎಂದು ತಿಳಿಸಿದರು.# | , : , ' , , " 2011 . 450 ..."… ../