ಆರ್‌ಸಿಬಿಗೆ ಶಾಕ್! ಅರ್ಧಕ್ಕೇ ಐಪಿಎಲ್ ತೊರೆದ ಕೇನ್ ರಿಚರ್ಡ್‌ಸನ್, ಜಂಪಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಕೇನ್ ರಿಚರ್ಡ್‌ಸನ್ ಮತ್ತು ಆಡಮ್ ಜಂಪಾ ಐಪಿಎಲ್ ತೊರೆದು ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ. ಈ ಬಗ್ಗೆ ಫ್ರ್ಯಾಂಚೈಸ್ ನ ಹೇಳಿಕೆ ಸ್ಪಷ್ಟಪಡಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಕೇನ್ ರಿಚರ್ಡ್‌ಸನ್ ಮತ್ತು ಆಡಮ್ ಜಂಪಾ ಐಪಿಎಲ್ ತೊರೆದು ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ. ಈ ಬಗ್ಗೆ ಫ್ರ್ಯಾಂಚೈಸ್ ನ ಹೇಳಿಕೆ ಸ್ಪಷ್ಟಪಡಿಸಿದೆ. "ವೈಯಕ್ತಿಕ ಕಾರಣಗಳಿಗಾಗಿ" ಈ ಆಟಗಾರರು ಟೂರ್ನಿಯಿಂದ ದೂರವಿರಲಿದ್ದಾರೆ.ರಾಜಸ್ಥಾನ್ ರಾಯಲ್ಸ್ ತಂಡದಿಂದ ಆಂಡ್ರ್ಯೂ ಟೈ ಭಾನುವಾರ ನಿರ್ಗಮಿಸಿದ ನಂತರ ರಿಚರ್ಡ್‌ಸನ್ ಮತ್ತು ಜಂಪಾ ಐಪಿಎಲ್ ತೊರೆದ ಎರಡನೇ ಮತ್ತು ಮೂರನೇ ಆಸ್ಟ್ರೇಲಿಯಾ ಕ್ರಿಕೆಟಿಗರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕೋವಿಡ್ -19 ಪರಿಸ್ಥಿತಿ ಉಲ್ಬಣವಾಗುತ್ತಿರುವ ಕಾರಣ ಟೈ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. : & #IPL2021. .# # ../NfzIOW5Pwlಐಪಿಎಲ್ 2021 ರಲ್ಲಿ ರಿಚರ್ಡ್‌ಸನ್ ರಾಯಲ್ ಚಾಲೆಂಜರ್ಸ್ ಪರ ಒಂದು ಪಂದ್ಯವನ್ನು ಆಡಿದ್ದರೆ ಜಂಪಾ ಫೀಲ್ಡಿಗೆ ಇಳಯಲೇ ಇಲ್ಲ. ರಿಚರ್ಡ್‌ಸನ್ ಮತ್ತು ಜಂಪಾ ಹೊರಹೋಗುವುದರೊಂದಿಗೆ, ರಾಯಲ್ ಚಾಲೆಂಜರ್ಸ್‌ನಲ್ಲೀಗ ಸಾಗರೋತ್ತರ ಆಟಗಾರರ ಸಂಖ್ಯೆ ಆರಕ್ಕೆ ಇಳಿದಿದೆ.