ವಿವಾದಾತ್ಮಕ ಪೋಸ್ಟ್‌: ಭಾರತ ತೊರೆದ ವಿಶ್ವಕಪ್ ಕವರ್ ಮಾಡಲು ಬಂದಿದ್ದ ಪಾಕ್ ನಿರೂಪಕಿ ಐಸಿಸಿ ಡಿಜಿಟಲ್ ತಂಡದ ಭಾಗವಾಗಿ ಏಕದಿನ ವಿಶ್ವಕಪ್ ಟೂರ್ನಿಯ ನಿರೂಪಣೆಗಾಗಿ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನಿ ನಿರೂಪಕಿ ಜೈನಾಬ್ ಅಬ್ಬಾಸ್ ಅವರು 10 ವರ್ಷಗಳ ಹಿಂದಿನ ಭಾರತ ವಿರೋಧಿ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ತೀವ್ರ ಹಿನ್ನಡೆ... ನವದೆಹಲಿ: ಐಸಿಸಿ ಡಿಜಿಟಲ್ ತಂಡದ ಭಾಗವಾಗಿ ಏಕದಿನ ವಿಶ್ವಕಪ್ ಟೂರ್ನಿಯ ನಿರೂಪಣೆಗಾಗಿ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನಿ ನಿರೂಪಕಿ ಜೈನಾಬ್ ಅಬ್ಬಾಸ್ ಅವರು 10 ವರ್ಷಗಳ ಹಿಂದಿನ ಭಾರತ ವಿರೋಧಿ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ತೀವ್ರ ಹಿನ್ನಡೆ ಅನುಭವಿಸಿದ್ದು, ಸೋಮವಾರ ಭಾರತ ತೊರೆದಿದ್ದಾರೆ. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಅವರು ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂದು ಕ್ರೀಡಾ ಆಡಳಿತ ಮಂಡಳಿ ತಿಳಿಸಿದೆ.ಪಾಕಿಸ್ತಾನದ ಮೂರು ವಿಶ್ವಕಪ್ ಪಂದ್ಯಗಳನ್ನು ಕವರ್ ಮಾಡಲು ಇತ್ತೀಚಿಗೆ ಹೈದರಾಬಾದ್‌ ಗೆ ಆಗಮಿಸಿದ್ದ ಜೈನಾಬ್ ಅವರು ಇಂದು ಭಾರತದಿಂದ ನಿರ್ಗಮಿಸಿದ್ದಾರೆ.35 ವರ್ಷದ ಜೈನಾಬ್ ಅವರು ಅಕ್ಟೋಬರ್ 6 ರಂದು ನಡೆದ ನೆದರ್ಲ್ಯಾಂಡ್ಸ್ / ಪಾಕಿಸ್ತಾನದ ವಿಶ್ವಕಪ್ ಆರಂಭಿಕ ಪಂದ್ಯಕ್ಕಾಗಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹಾಜರಿದ್ದರು.ಇದನ್ನು ಓದಿ: ವಿಶ್ವಕಪ್: ಪಾಕ್ ಪತ್ರಕರ್ತರಿಗೆ ಸಿಕ್ಕಿಲ್ಲ ವೀಸಾ, ಆದರೆ ವಾಟ್ಸ್ ಆಪ್ ಮೂಲಕ ಪ್ರಶ್ನೆ ಕೇಳಲು ಅವಕಾಶ!ಜೈನಾಬ್‌ ಅಬ್ಬಾಸ್‌ 10 ವರ್ಷಗಳ ಹಿಂದೆ ಭಾರತ, ಹಿಂದೂ ಧರ್ಮ, ದೇವರು ಹಾಗೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದರು. ಜೈನಾಬ್‌ ಅವರು ಭಾರತದಲ್ಲಿ ಐಸಿಸಿ ಮೆಗಾ ಈವೆಂಟ್ ಕವರ್ ಮಾಡುವುದಾಗಿ ಘೋಷಿಸಿದ ನಂತರ ಆಕೆಯ ಹಳೆಯ ಪೋಸ್ಟ್‌ಗಳು ವೈರಲ್ ಆಗಿದ್ದವು.ಜೈನಾಬ್‌ ಅಬ್ಬಾಸ್‌ ಅವರು ಪಂದ್ಯಾವಳಿಯ ಮಧ್ಯದಲ್ಲಿ ಭಾರತದಿಂದ ನಿರ್ಗಮಿಸಿದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳು ತೀವ್ರಗೊಂಡಿದ್ದರಿಂದ ಸ್ಪಷ್ಟನೆ ನೀಡಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಅವರನ್ನು ಭಾರತದಿಂದ ಗಡಿಪಾರು ಮಾಡಲಾಗಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಅವರು ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂದು ಹೇಳಿದೆ.ಜೈನಾಬ್ ಅವರನ್ನು ಗಡಿಪಾರು ಮಾಡಲಾಗಿಲ್ಲ, ವೈಯಕ್ತಿಕ ಕಾರಣಗಳಿಗಾಗಿ ಅವರು ವಾಪಸ್ ತೆರಳಿದ್ದಾರೆ ಎಂದು ಐಸಿಸಿ ವಕ್ತಾರರು ತಿಳಿಸಿದ್ದಾರೆ.