ಭಾರತ ಪಾಕಿಸ್ತಾನ: ರನ್ ಗಳ ಅಂತರದ ಲೆಕ್ಕಾಚಾರದಲ್ಲಿ ಏಷ್ಯಾ ಕಪ್ ಇತಿಹಾಸದ 4ನೇ ದೊಡ್ಡ ಗೆಲುವು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಇಂದಿನ ಭಾರತ-ಪಾಕಿಸ್ತಾನ ಪಂದ್ಯ ಸಾಕಷ್ಟು ದಾಖಲೆಗಳನ್ನು ಬರೆದಿದ್ದು, ಭಾರತ ಗಳಿಸಿದ 228ರನ್ ಗಳ ಜಯ ಏಷ್ಯಾ ಕಪ್ ಇತಿಹಾಸದ 4ನೇ ದೊಡ್ಡ ಗೆಲುವಾಗಿದೆ. ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಇಂದಿನ ಭಾರತ-ಪಾಕಿಸ್ತಾನ ಪಂದ್ಯ ಸಾಕಷ್ಟು ದಾಖಲೆಗಳನ್ನು ಬರೆದಿದ್ದು, ಭಾರತ ಗಳಿಸಿದ 228ರನ್ ಗಳ ಜಯ ಏಷ್ಯಾ ಕಪ್ ಇತಿಹಾಸದ 4ನೇ ದೊಡ್ಡ ಗೆಲುವಾಗಿದೆ.ರನ್ ಗಳ ಅಂತರದ ಲೆಕ್ಕಾಚಾರದಲ್ಲಿ ಭಾರತ ಗಳಿಸಿದ ಜಯ ಏಷ್ಯಾಕಪ್ ಕ್ರಿಕೆಟ್ ಇತಿಹಾಸದ 4ನೇ ಅತೀ ದೊಡ್ಡ ಗೆಲುವಾಗಿದೆ. ಈ ಹಿಂದೆ 2008ರಲ್ಲಿ ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಹಾಂಕಾಂಗ್ ತಂಡವನ್ನು 256ರನ್ ಗಳ ಅಂತರದಲ್ಲಿ ಮಣಿಸಿತ್ತು. ಇದು ರನ್ ಗಳ ಅಂತರದ ಲೆಕ್ಕಾಚಾರದಲ್ಲಿ ಏಷ್ಯಾಕಪ್ ಕ್ರಿಕೆಟ್ ಇತಿಹಾಸದ ಅತೀದೊಡ್ಡ ಗೆಲುವಾಗಿದೆ.ಇದನ್ನೂ ಓದಿ: ಏಷ್ಯಾಕಪ್ 2023: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಭಾರತಕ್ಕೆ ಪಾಕ್ ವಿರುದ್ಧ ಅತೀ ದೊಡ್ಡ ಗೆಲುವುಇದೇ ಟೂರ್ನಿಯಲ್ಲಿ ಮುಲ್ತಾನ್ ನಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 238ರನ್ ಗಳ ಅಂತರದ ಜಯ ಸಾಧಿಸಿತ್ತು. ಇದು ಏಷ್ಯಾ ಕಪ್ ಇತಿಹಾಸದ 2ನೇ ಅತಿದೊಡ್ಡ ಗೆಲುವಾಗಿದೆ. ಇದಕ್ಕೂ ಮೊದಲು ಇದೇ ಪಾಕಿಸ್ತಾನ ತಂಡ 2000ರಲ್ಲಿ ಢಾಕಾದಲ್ಲಿ ಬಾಂಗ್ಲಾದೇಶ ತಂಡವನ್ನು 233ರನ್ ಗಳ ಅಂತರದಲ್ಲಿ ಮಣಿಸಿತ್ತು. ಇದು ಏಷ್ಯಾ ಕಪ್ ಕ್ರಿಕೆಟ್ ಇತಿಹಾಸದ 3ನೇ ದೊಡ್ಡ ಗೆಲುವಾಗಿತ್ತು. 256 - , , 2008 238 - , , 2023 233 - , , 2000 228 - , (), *ಇದನ್ನೂ ಓದಿ: ಏಷ್ಯಾಕಪ್ 2023: ಭಾರತದ ವಿರುದ್ಧ ಹೀನಾಯ ಸೋಲು, ಕಳಪೆ ದಾಖಲೆ ಬರೆದ ಪಾಕಿಸ್ತಾನಕೊಲಂಬೋ ಪ್ರೇಮದಾಸ ಕ್ರೀಡಾಂಗಣದಲ್ಲಿ ಅತೀ ದೊಡ್ಡ ಗೆಲುವು ಇಂದು ಭಾರತ ಗಳಿಸಿದ 228 ರನ್ ಗಳ ಗೆಲುವು ಶ್ರೀಲಂಕಾದ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ರನ್ ಗಳ ಅಂತರದಲ್ಲಿ ಲೆಕ್ಕಾಚಾರದಲ್ಲಿ ದಾಖಲಾದ ಅತೀ ದೊಡ್ಡ ಗೆಲುವಾಗಿದೆ.